ಶಿರಸಿ: ‘ನಾನು ಮತ್ತು ಎಸ್.ಟಿ.ಸೋಮಶೇಖರ್ ಬಿಜೆಪಿ ಅಥವಾ ಕಾಂಗ್ರೆಸ್ ಅಲ್ಲ. ನಮ್ಮದು ಕರ್ನಾಟಕ ಶಾಸಕಾಂಗ ಪಕ್ಷ. ನಮ್ಮ ರಾಜೀನಾಮೆ ಫಲವಾಗಿ ಅಧಿಕಾರ ಅನುಭವಿಸಿದ ಬಿಜೆಪಿಯವರಿಗೆ ಈಗ ರಾಜೀನಾಮೆ ಕೇಳುವ ನೈತಿಕ ಹಕ್ಕಿಲ್ಲ. ತಾಕತ್ತಿದ್ದರೆ ಉಚ್ಚಾಟಿಸಲಿ’ ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಸವಾಲು ಹಾಕಿದರು.

‘ಶಾಸನ ಸಭೆಯಲ್ಲಿ ಬಿಜೆಪಿಯವರಿಗೆ ನನ್ನ ಜತೆ ಗುರುತಿಸಿಕೊಳ್ಳಲು ಮುಜುಗರವಾದರೆ, ಅದು ಅವರಿಗೆ ಬಿಟ್ಟಿದ್ದು. ಅವರು ನನ್ನನ್ನು ಯಾವುದೇ ಪ್ರತಿಭಟನೆಗೂ ಕರೆದಿಲ್ಲ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಹಿಂದೆ ನಾನು ರಾಜೀನಾಮೆ ನೀಡಿಯೇ ಚುನಾವಣೆ ಎದುರಿಸಿದವನು. ರಾಜೀನಾಮೆ ಬಗ್ಗೆ ಉಪದೇಶ ಬೇಕಿಲ್ಲ.ಹಿಂದೆ ರಾಜೀನಾಮೆ ಕೊಟ್ಟು ಬಂದಾಗ, ಕಾಂಗ್ರೆಸ್ಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿಯವರಿಗೆ ಅನಿಸಿಲಿಲ್ಲವೇ? ಅಧಿಕಾರ ಬರುವಾಗ ಅನಿಸಲ್ಲ. ಬಿಜೆಪಿಗೆ ಈಗೇಕೆ ನಾನು ಅನ್ಯಾಯ ಮಾಡುತ್ತಿರುವೆ ಎಂದು ಅನ್ನಿಸುತ್ತಿದೆ’ ಎಂದೂ ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.