ಶಿರಸಿ: ‘ರಾಜ್ಯ ಬಿಜೆಪಿಯಲ್ಲಿ ಶುದ್ಧೀಕರಣದ ಅಗತ್ಯವಿದೆ. ವರಿಷ್ಠರು ಈ ಬಗ್ಗೆ ಚರ್ಚಿಸಿದ ಬಳಿಕ ನಿಶ್ಚಿತವಾಗಿ ಬಿಜೆಪಿಗೆ ಮರಳುವೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

‘ಸೈದ್ಧಾಂತಿಕ ನಿಲುವು ಇದ್ದರೆ ಪಕ್ಷದ ಸಂಘಟನೆಗೆ ಒಳಿತು. ಆದರೆ, ವೈಯಕ್ತಿಕ ನಿಲುವು ಹೆಚ್ಚಾದರೆ ಸಂಕಷ್ಟ ಖಚಿತ. ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ಕರ್ನಾಟಕದಲ್ಲಿ ಆಗಿದ್ದೇನು? ಹೀಗಾಗಿ ಪಕ್ಷದೊಳಗೆ ಶುದ್ಧೀಕರಿಸುವ ಹಿನ್ನೆಲೆಯಲ್ಲಿ ಹೊರ ಬಂದಿರುವೆ. ಶೀಘ್ರದಲ್ಲೇ ಈ ಬಗ್ಗೆ ಹಿರಿಯರ ಬಳಿ ಚರ್ಚಿಸಿ, ಸ್ವಚ್ಛತೆ ಬಳಿಕ ಮತ್ತೆ ಮಾತೃಪಕ್ಷಕ್ಕೆ ಮರಳುವೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.