ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಯ್ಕೆ

Published 4 ಜುಲೈ 2024, 20:25 IST
Last Updated 4 ಜುಲೈ 2024, 20:25 IST
ಅಕ್ಷರ ಗಾತ್ರ

ಸಿಂದಗಿ (ವಿಜಯಪುರ): ರಾಜ್ಯಮಟ್ಟದ ಬಾಲಸಾಹಿತ್ಯ ಪುರಸ್ಕಾರಕ್ಕೆ ಬೆಂಗಳೂರಿನ ಡಾ.ಲಲಿತಾ ಹೊಸಪ್ಯಾಟಿ ಅವರ ‘ಬ್ಯೂಟಿ ಬೆಳ್ಳಕ್ಕಿ’ (ಕಥಾ ಸಂಕಲನ), ವಿಜಯಪುರದ ಜಂಬುನಾಥ ಕಂಚ್ಯಾಣಿ ಅವರ ‘ಮತ್ತೆ ಅವತರಿಸಿದ ದೈತ್ಯರು’ (ವೈಜ್ಞಾನಿಕ ಕಾದಂಬರಿ), ಬೆಳಗಾವಿ ಜಿಲ್ಲೆಯ ಹುಣಶೀಕಟ್ಟೆಯ ಎಂ.ಎಂ. ಸಂಗಣ್ಣವರ ಅವರ ‘ಅಮ್ಮ ಬೇಕು’ (ಕವನ ಸಂಕಲನ) ಹಾಗೂ ಮಕ್ಕಳ ವಿಭಾಗದ ಬಾಲ ಸಾಹಿತ್ಯ ಚಿಗುರು ಪ್ರಶಸ್ತಿಗೆ ಗದಗದ ಪ್ರಣತಿ ಗಡಾದ ‘ನಾನು ಮಳೆ ಆದರೆ’ (ಕವನ ಸಂಕಲನ) ಆಯ್ಕೆಯಾಗಿದೆ. ಸಿಂದಗಿಯ ವಿದ್ಯಾಚೇತನ ಪ್ರಕಾಶನ ಪ್ರಶಸ್ತಿ ನೀಡಲಿದೆ.

ಪ್ರಶಸ್ತಿಯು ಮೂವರು ಹಿರಿಯ ಮಕ್ಕಳ ಸಾಹಿತಿಗಳಿಗೆ ತಲಾ ₹ 5 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ‘ಬಾಲ ಸಾಹಿತ್ಯ ಚಿಗುರು’ ಪ್ರಶಸ್ತಿ ₹ 2 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.

‘ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ 28ರ ಬೆಳಿಗ್ಗೆ 10ಕ್ಕೆ ಪಟ್ಟಣದ ಸಾರಂಗಮಠದ ಆವರಣದಲ್ಲಿ ನಡೆಯಲಿದೆ’ ಎಂದು ವಿದ್ಯಾಚೇತನ ಪ್ರಕಾಶನದ ಸಂಚಾಲಕ ಮಕ್ಕಳ ಸಾಹಿತಿ ಹ.ಮ.ಪೂಜಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT