ತಾಳಿಕೋಟೆ: ಪಟ್ಟಣದಲ್ಲಿ ಖಾಸ್ಗತ ಅಜ್ಜನವರ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವವು ಶುಕ್ರವಾರ ಸಂಜೆ ಸಡಗರದಿಂದ ನೆರವೇರಿತು.

ಅಲಂಕೃತ ರಥವನ್ನು ಶ್ರೀಮಠದಿಂದ ಅಂಬಾಭವಾನಿ ಮಂದಿರದವರೆಗೆ ಭಕ್ತರು ಎಳೆಯುವ ಮೂಲಕ ಮಹಾರಥೋತ್ಸವ ಸಂಪನ್ನವಾಯಿತು.

ರಥೋತ್ಸವದ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತರು ಹೂವು, ಕಾಯಿ, ಹಣ್ಣು, ಉತ್ತತ್ತಿ, ಬಾಳೆ, ಕಬ್ಬು ಎಸೆದು ಸಂಭ್ರಮಿಸಿದರು. ಈ ವೇಳೆ ಮಳೆಹನಿಯ ಸಿಂಚನವೂ ಆಯಿತು.

ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ರಕ್ತದಾನ ಶಿಬಿರ: ಜಾತ್ರಾ ಮಹೋತ್ಸವದ ಅಂಗವಾಗಿ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಪಟ್ಟಣದ ಕರ್ನಾಟಕ ಚಾಲಕರ ಒಕ್ಕೂಟ ವಿಜಯಪುರ ಹಾಗೂ ವಿಜಯಪುರದ ಶಿವಗಿರಿ ರಕ್ತ(ನಿಧಿ) ಕೇಂದ್ರ ಹಾಗೂ ಸ್ಥಳೀಯ ಎಸ್.ಕೆ.ಕಾಲೇಜಿನ ಎನ್.ಎಸ್.ಎಸ್ ಘಟಕಗಳ ಸಹಯೋಗದಲ್ಲಿ ಶುಕ್ರವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶರಣು ಗಂಗನಗೌಡ್ರ(ನಾಲತವಾಡ) ಹಾಗೂ ರಕ್ತನಿಧಿ ಶಿಬಿರದ ವೈದ್ಯ ಸುನೀಲ ಚವ್ಹಾಣ ಶಿಬಿರ ಉದ್ಘಾಟಿಸಿದರು.

ತಾಳಿಕೋಟೆ ತಾಲ್ಲೂಕಿನ ಶಳ್ಳಗಿ ಗ್ರಾಮದ ದೇವರಾಜ ದೇಸಾಯಿ ಅವರು 37ನೇ ಬಾರಿ ಸೇರಿದಂತೆ ಒಟ್ಟು 40 ಜನ ರಕ್ತದಾನ ಮಾಡಿದರು.

ಚಾಲಕರ ಸಂಘಟನೆಯ ಸ್ಥಳೀಯ ಅಧ್ಯಕ್ಷ, ಪದಾಧಿಕಾರಿಗಳು, ನಾಲತವಾಡ, ಮುದ್ದೇಬಿಹಾಳ, ನಿಡಗುಂದಿ ಘಟಕದವರೂ ಪಾಲ್ಗೊಂಡಿದ್ದರು.

ಗಂಗಸ್ಥಳ: ಗಜರಾಜನ ಭಕ್ತರ ಸಮ್ಮುಖದಲ್ಲಿ ಮಠದ ಮುಂದೆ ಸಿಂಗರಿಸಿದ ಆನೆಯ ಮೇಲೆ ಖಾಸ್ಗತ ಅಜ್ಜನವರ ಭವ್ಯ ಬೆಳ್ಳಿಮೂರ್ತಿ ಹೊತ್ತ ಗಜರಾಜ ಗಂಭೀರವಾಗಿ ಪಟ್ಟಣದ ಬೀದಿಗಳಲ್ಲಿ ಹೆಜ್ಜೆ ಹಾಕಿದ. ಹಿಂಬದಿಯಲ್ಲಿ ಬೆಳ್ಳಿಬಣ್ಣದ ಪಂಚಾಶ್ವ ಸಾರೋಟಿನಲ್ಲಿ ಪೀಠಾಧಿಪತಿ ಸಿದ್ದಲಿಂಗದೇವರು ವಿರಾಜಮಾನರಾದರು. ಅವರ ಹಿಂದೆಯೇ ಪಲ್ಲಕ್ಕಿ ಕಳಸ ಮೆರವಣಿಗೆ ಶಿವನಾಮದ ಭಜನಾಮಂಡಳಿ ಜೊತೆ ರಾಜವಾಡೆಯ ಮೂಲಕ ಭೀಮನಭಾವಿ ತಲುಪಿ ಗಂಗಸ್ಥಳ ಮುಗಿಸಿದರು. ಶಿವಾಜಿ ವೃತ್ತ ವಿಠ್ಠಲ ಮಂದಿರ ಕತ್ರಿ ಬಜಾರದ ಮೂಲಕ ಮೆರವಣಿಗೆಯು ಮರಳಿ ಶ್ರೀಮಠವನ್ನು ತಲುಪಿತು. ಮೆರವಣಿಗೆಯಲ್ಲಿ ಜೋಗತಿಯರ ನೃತ್ಯ ಹನುಮಾನ ವೇಷಧಾರಿಗಳು ಗಮನ ಸೆಳೆದರು. ದಾರಿಯುದ್ದಕ್ಕೂ ಮನೆ-ಅಂಗಡಿಗಳ ಮುಂದೆ ಮಾಳಿಗೆಗಳಲ್ಲಿ ನಿಂತ ಜನ ಬಾಲಶಿವಯೋಗಿ ಸಿದ್ಧಲಿಂಗದೇವರನ್ನು ಕಣ್ತುಂಬಿಕೊಂಡರು. ಬಾಲಶಿವಯೋಗಿಗಳಿಗೆ ಖಾಸ್ಗತರ ಮೂರ್ತಿಗೆ ಮಾಲೆ ಅರ್ಪಿಸಿದವರು ಬಿಗಿ ಕಾವಲಿನ ಮಧ್ಯೆಯೇ ತಮ್ಮ ಮಕ್ಕಳನ್ನು ಅವರ ಆಶೀರ್ವಾದಕ್ಕೆ ಹಣೆ ಮಣಿಸುತ್ತ ಆನೆಯ ಮೇಲೆ ಕೂರಿಸುವ ಹಂಬಲದ ಜನತೆ ರಸ್ತೆಯುದ್ದಕ್ಕೂ ಇದ್ದರು. ಸಾದ ನೀರಿನ ವ್ಯವಸ್ಥೆ: ರಾಜವಾಡೆಯಲ್ಲಿನ ಸ್ನೇಹಿತರ ಬಳಗ ಶಿವಾಜಿ ವೃತ್ತದಲ್ಲಿ ಯುವಸ್ಪಂದನ ಫೌಂಡೇಷನ್ ಹಾಗೂ ಶೋಭಾ ಫೌಂಡೇಷನ್ ಬಳಗ ಆದಿತ್ಯ ಫ್ಯಾಷನ್ ವಿಠ್ಠಲ ಮಂದಿರದ ಬಳಿ ಭಗತಸಿಂಗ್ ಯುವಕ ಮಂಡಳ ನಮ್ಮ ಗೆಳೆಯರ ಬಳಗ ಸಹೃದಯಿ ಗೆಳೆಯರ ಬಳಗ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಬಿ.ಎಲ್. ತಂಡ ಎಬಿಡಿ ಫೌಂಡೇಷನ್ ಸೇರಿದಂತೆ ಮೊದಲಾದವರು ಭಕ್ತರಿಗಾಗಿ ಮಸಾಲೆ ಅನ್ನ ಮಾದಲಿ ಹುಗ್ಗಿ ಪಾಯಸ ಇಡ್ಲಿ ಪೂರಿ ಸೇರಿದಂತೆ ತರಹೇವಾರಿ ಪ್ರಸಾದ ನೀರಿನ ವ್ಯವಸ್ಥೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.