ಮುದ್ದೇಬಿಹಾಳ : ಧರ್ಮ ಮಾರ್ಗದರ್ಶನದಿಂದ ನಮ್ಮ ಬದುಕು ಪಾವನವಾಗುತ್ತದೆ ಎಂದು ಮುತ್ತಗಿ ಲಕ್ಷ್ಮೀ ನರಸಿಂಹ ಕ್ಷೇತ್ರದ ಧರ್ಮದರ್ಶಿ ನರಹರಿ ಆಚಾರ್ಯ ಜೋಶಿ ಹೇಳಿದರು.

ಪಟ್ಟಣದ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾತೃವೇದಿಕೆ ವತಿಯಿಂದ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದಿಂದ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನದ ಶ್ಲೋಕ ಪಠಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಚಿಕ್ಕವರಿದ್ದಾಗಿನಿಂದಲೆ ಭಗವದ್ಗೀತೆಯನ್ನು ಅರ್ಥೈಸಿ ಬದುಕನ್ನು ಕಟ್ಟಿಕೊಡಲು ದಾರಿ ತೋರಿಸಿದಲ್ಲಿ ಸಮಾಜಕ್ಕೆ ಎಂದೂ ಕಂಟಕರಾಗುವುದಿಲ್ಲ. ಮಕ್ಕಳು ತಪ್ಪುಮಾಡುವುದಕ್ಕೆ ನಾವು ಸಹಕರಿಸಬಾರದು. ಗಾಂಧಾರಿ ದುರ್ಯೋಧನ ಯುದ್ಧದಲ್ಲಿ ನನಗೆ ಜಯವಾಗಲಿಯೆಂದು ಆಶೀರ್ವಾದ ಮಾಡು ಎಂದು ಯುದ್ಧದ ಪ್ರಾರಂಭದಿಂದ ತನ್ನ ಅವಸಾನದವರೆಗೂ ಎಷ್ಟೇ ಪರಿಪರಿಯಾಗಿ ವಿನಂತಿಸಿಕೊಂಡರೂ ಧರ್ಮಕ್ಕೆ ಜಯವೆನ್ನುವುದರ ಮೂಲಕ ಆಶೀರ್ವದಿಸುತ್ತ ಬಂದಿರುವ ನಿದರ್ಶನಗಳನ್ನು ವಿವರಿಸಿದರು.

ಪ್ರಶಿಕ್ಷಕಿ ಪ್ರಭಾ ಹೆಬ್ಬಾರ ಪ್ರಾರಂಭದಲ್ಲಿ 9ನೇ ಅಧ್ಯಾಯವನ್ನು ಸಾಮೂಹಿಕವಾಗಿ ಪಠಣ ಮಾಡಿಸುವುದರೊಂದಿಗೆ ಸ್ವಾಗತಿಸಿ ನಿರೂಪಿಸಿದರು. ಸಂಚಾಲಕ ರಾಮಚಂದ್ರ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ರಾಘವೇಂದ್ರ ಮಠದ ಪದಾಧಿಕಾರಿಗಳಾದ ಎಸ್.ಆರ್.ಪಾಟೀಲ್, ವಿ.ಜಿ.ಪಾಟೀಲ್, ಅರವಿಂದ ಕುಲಕರ್ಣಿ, ಶ್ರೀನಿವಾಸ ಗಜೇಂದ್ರಗಡ, ಬಿ.ಪಿ.ಕುಲಕರ್ಣಿ, ಕೆ.ಬಿ.ದೇಶಪಾಂಡೆ, ಅನೀಲ ಕುಲಕರ್ಣಿ, ಸುಭಾಸ ಕುಲಕರ್ಣಿ, ಗುರುರಾಜ ಪುರೋಹಿತ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ಸುಬ್ರಹ್ಮಣ್ಯ ಹೆಬ್ಬಾರ, ಸುಧೀರ ದೇಶಪಾಂಡೆ, ನಿವೃತ್ತ ಶಿಕ್ಷಕಿ ಶಶಿಕಲಾ ಗಜೇಂದ್ರಗಡ, ಗಾಯತ್ರಿ ದೇಶಪಾಂಡೆ, ಅಶ್ವಿನಿ ಕುಲಕರ್ಣಿ, ಶಾಲಿನಿ ದೊಡ್ಡಿಹಾಳ, ಜಯಾ ಸಾಲಿಮಠ, ಮುಕ್ತಾ ಹುನಗುಂದ, ವಿದ್ಯಾ ನಲವಡೆ, ಗೌರಿಬಿರಾದಾರ, ರಕ್ಷಿತಾ ಬಿದಿರಕುಂದಿ, ರವಿ ನಂದೆಪ್ಪನವರ್, ಪ್ರಕಾಶ ದೇಶಪಾಂಡೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.