ಸಿಂದಗಿ: ಜಿಲ್ಲೆಯಲ್ಲಿಯೇ ಸಿಂದಗಿ ಅಂದಗೆಟ್ಟ ಪಟ್ಟಣ ಎಂಬ ಹಣೆಪಟ್ಟಿ ಹೊತ್ತುಕೊಂಡಿತ್ತು. ಎಲ್ಲೆಂದರಲ್ಲಿ ಗೂಡಂಗಡಿಗಳೇ ರಾರಾಜಿಸುತ್ತಿದ್ದವು. ತಡವಾಗಿಯಾದರೂ ಪುರಸಭೆಯ ಆಡಳಿತ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ಕೇಳಿ ಬಂದಿದೆ.

ಮೂರ್ನಾಲ್ಕು ತಿಂಗಳುಗಳಿಂದ 6 ಹಂತದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಸಾಗಿ ಬಂದಿದೆ. ಇನ್ನೆರಡು ರಸ್ತೆಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಪುರಸಭೆ ನೂತನ ಅಧ್ಯಕ್ಷ ಶಾಂತವೀರ ಶಾಂತವೀರ ಬಿರಾದಾರ ಅವರು ದಿಟ್ಟ ನಿಲುವು ತೆಗೆದುಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈಗಾಗಲೇ ವಿಸ್ತರಣೆಗೊಂಡಿರುವ ರಸ್ತೆಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡು ನಂತರ ಬಾಕಿ ಉಳಿದ ಕಾರ್ಯಾಚರಣೆ ಮುಂದುವರಿಯಲಿದೆ. ಅತಿಕ್ರಮಣ ಮಾಡಿ ಶಾಶ್ವತ ಕಟ್ಟಡ ನಿರ್ಮಿಸಿದವರು ಸಮಯಾವಕಾಶ ಕೇಳಿದ್ದಾರೆ. ಅಲ್ಲದೇ ಕೆಲ ಸೆಟ್ಲಮೆಂಟ್ ಪ್ರದೇಶವಿದ್ದ ರಸ್ತೆಗಳಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಟಿಪ್ಪು ಸುಲ್ತಾನ್ ವೃತ್ತದಿಂದ ತೋಂಟದ ಸಿದ್ಧಲಿಂಗ ಶ್ರೀಗಳ ಮುಖ್ಯರಸ್ತೆ ಮಾರ್ಗವಾಗಿ ಸ್ವಾಮಿ ವಿವೇಕಾನಂದ ವೃತ್ತದವರೆಗೆ ಏಕಮಾರ್ಗಿಯ ರಸ್ತೆಯನ್ನಾಗಿ ಮಾರ್ಪಾಡು ಮಾಡುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಶಾಂತವೀರ ಬಿರಾದಾರ ತಿಳಿಸಿದ್ದಾರೆ.

ಪುರಸಭೆಯ ನೂತನ ಅಧ್ಯಕ್ಷರು ಕೈಗೆತ್ತಿಕೊಂಡಿದ್ದ ಈ ಕಾರ್ಯಾಚರಣೆಗೆ ಆಡಳಿತ ಮಂಡಳಿಯ ಸದಸ್ಯರು ಸಂಪೂರ್ಣ ಬೆಂಬಲ ನೀಡಿದ್ದಾರೆ. ‘ಪುರಸಭೆಯು ನಗರಸಭೆಯಾಗಿ ಮೇಲ್ಜರ್ಜೆಗೇರುವ ಸಂದರ್ಭದಲ್ಲಿ ಪಟ್ಟಣದ ಅಭಿವೃದ್ಧಿ ಅತ್ಯಗತ್ಯವಾಗಿದೆ. ಇಕ್ಕಟ್ಟಾದ ರಸ್ತೆಗಳಿಂದಾಗಿ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ತುಂಬಾ ಅಡಚಣೆಯಾಗಿತ್ತು’ ಎಂದು ಪುರಸಭೆಯ ಹಿರಿಯ ಸದಸ್ಯ ಬಸವರಾಜ ಯರನಾಳ ತಿಳಿಸಿದರು.

‘ಪಟ್ಟಣದ ರಸ್ತೆಗಳನ್ನು ಅತಿಕ್ರಮಣ ಮಾಡಿಕೊಂಡು ಗೂಡಂಗಡಿ ನಿರ್ಮಿಸಿ ಬಾಡಿಗೆಗೆ ಕೊಡುವ ಕೆಟ್ಟ ವ್ಯವಸ್ಥೆ ಮುಂದುವರಿದಿತ್ತು. ಅದಕ್ಕೆ ಕಾರ್ಯಾಚರಣೆ ಕಡಿವಾಣ ಹಾಕಿದ್ದರಿಂದ ಅಂಥವರು ಮಾತ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಪಟ್ಟಣದ ಬಹುತೇಕ ನಿವಾಸಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ’ ಎಂದು ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಪ್ರತಿಕ್ರಿಯಿಸಿದ್ದಾರೆ.

‘ಪ್ರಸ್ತುತ ತೆರವು ಕಾರ್ಯಾಚರಣೆಯಿಂದ ಪುರಸಭೆ ಸದಸ್ಯರಿಗೆ ಬೆಲೆ ತಂದಿದೆ. ನೂತನ ಅಧ್ಯಕ್ಷರ ಅಭಿವೃದ್ದಿ ಕಾರ್ಯದಲ್ಲಿ ಸದಾ ಬೆಂಬಲವಾಗಿರುವೆ’ ಎಂದು ಪುರಸಭೆ ಸದಸ್ಯ ಹಾಸಿಂಪೀರ ಆಳಂದ ತಿಳಿಸಿದರು.

ಪಟ್ಟಣದ ಕೋರ್ಟ್ ರಸ್ತೆಯಲ್ಲಿದ್ದ ಮಾಂಸ ಮಾರಾಟದ ಅಂಗಡಿಗಳನ್ನು ಪುರಸಭೆ 2008ರಲ್ಲಿ ಮಲಘಾಣ ರಸ್ತೆಯಲ್ಲಿ ನಿರ್ಮಿಸಿ ಖಾಲಿ ಬಿದ್ದಿದ್ದ ಮಾಂಸ ಮಾರಾಟ ಮಳಿಗೆಗಳಿಗೆ ಕಡ್ಡಾಯವಾಗಿ ಸ್ಥಳಾಂತರಗೊಳಿಸುವ ನೂತನ ಅಧ್ಯಕ್ಷರ ಕ್ರಮವನ್ನೂ ಜನತೆ ಸ್ವಾಗತಿಸಿದ್ದಾರೆ.

ತೆರವು ಕಾರ್ಯಾಚರಣೆಯಿಂದ ಸಮಸ್ಯೆಗೆ ಒಳಗಾದ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಒದಗುವುದೇ, ಅಭಿವೃದ್ಧಿ ಕಾರ್ಯಗಳು ತ್ವರಿತವಾಗಿ ನಡೆಯುತ್ತವೆಯೇ ಎಂಬ ಪ್ರಶ್ನೆ ಈಗ ಮೂಡಿದೆ.

ಪುರಸಭೆ ವತಿಯಿಂದ ರೂಪಿಸಿದ ಯೋಜನೆಗಳು

*ಬಸವೇಶ್ವರ ವೃತ್ತದ ಬಳಿ ಸಾರ್ವಜನಿಕ ಬಸ್ ತಂಗುದಾಣ ಫುಟ್ಪಾತ್ ನಿರ್ಮಾಣ ಅಲ್ಲಲ್ಲಿ ಆಸನಗಳ ವ್ಯವಸ್ಥೆ *ಕೆಇಬಿ ಕಾಂಪೌಂಡ್ ಹೊಂದಿಕೊಂಡು ಫುಟ್ಪಾತ್ ನಿರ್ಮಾಣ *ಕೋರ್ಟ್ ರಸ್ತೆ ಎಡ ಬಲ ಬದಿಯಲ್ಲಿ ಫುಟ್ಪಾತ್ ನಿರ್ಮಾಣ *ಸರ್ಕಾರಿ ಆಸ್ಪತ್ರೆಯ ಎದುರು ಎಡ ಬಲ ಬದಿ ಫುಟ್ಪಾತ್ ಕೃಷಿ ಇಲಾಖೆಯ ಕಚೇರಿ ಕಾಂಪೌಂಡ್ಗೆ ಸಾರ್ವಜನಿಕ ಶೌಚಾಲಯ ನಿರ್ಮಾಣ *ಬಸ್ ನಿಲ್ದಾಣದ ಎದುರು ರಸ್ತೆಗಳಲ್ಲಿ ಫುಟ್ಪಾತ್ ವಾಹನಗಳ ಪಾರ್ಕಿಂಗ್ ವ್ಯವಸ್ಥೆ *ರಸ್ತೆಗಳಲ್ಲಿ ಇರುವ ಮಾಂಸದಂಗಡಿಗಳನ್ನು ಮಲಘಾಣ ರಸ್ತೆಯಲ್ಲಿನ ಪುರಸಭೆಯ ಮಾಂಸ ಮಾರಾಟ ಮಳಿಗೆಗಳಿಗೆ ಸ್ಥಳಾಂತರ *ಅತಿಕ್ರಮಣ ತೆರುವಿನಿಂದಾಗಿ ವಿಸ್ತರಣೆಗೊಂಡ ಎಲ್ಲ ಪ್ರಮುಖ ರಸ್ತೆಗಳಲ್ಲಿ ಕಬ್ಬಿಣದ ಗ್ರಿಲ್ ಅಳವಡಿಕೆ ರಸ್ತೆ ವಿಭಜಕಗಳಲ್ಲಿ ಆಲಂಕಾರಿಕ ಗಿಡಗಳನ್ನು ನೆಡುವುದು

ವಿಶೇಷ ಅನುದಾನಕ್ಕಾಗಿ ಪ್ರಸ್ತಾವ

ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆ ರೂಪಿಸಿದ ಯೋಜನೆಗಳ ಅನುಷ್ಠಾನಕ್ಕಾಗಿ ವಿಶೇಷ ಅನುದಾನ ಕೋರಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಬೀದಿ ಬದಿ ವ್ಯಾಪಾರಸ್ಥರಿಗಾಗಿ ಅಲ್ಲಲ್ಲಿ ಮಳಿಗೆಗಳನ್ನು ನಿರ್ಮಿಸುವ ಯೋಜನೆ ಇದ್ದು ಆದಷ್ಟು ಬೇಗನೇ ಸರ್ಕಾರದ ವಿಶೇಷ ಅನುದಾನದಡಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದರು. ಮತ್ತೆ ಅತಿಕ್ರಮಣವಾಗದಂತೆಯೂ ಕ್ರಮ ಕೈಗೊಳ್ಳಲಿ ಪಟ್ಟಣದ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿ ದಿಟ್ಟ ಹೆಜ್ಜೆ ಇಟ್ಟ ಪುರಸಭೆಯ ನೂತನ ಅಧ್ಯಕ್ಷ ಶಾಂತವೀರ ಬಿರಾದಾರ ಅಭಿನಂದನಾರ್ಹರು. ತೆರವು ಕಾರ್ಯಾಚರಣೆ ಅಪೂರ್ಣಗೊಳ್ಳಬಾರದು. ಅದರಂತೆ ವಿಸ್ತರಣೆಗೊಂಡ ರಸ್ತೆಗಳಲ್ಲಿ ಮತ್ತೆ ಅತಿಕ್ರಮಣವಾಗದಂತೆ ಗ್ರಿಲ್ ಅಳವಡಿಸಿ ಸೌಂದರ್ಯೀಕರಣ ಯೋಜನೆಗಳನ್ನು ಬೇಗನೆ ಕಾರ್ಯಗತಗೊಳಿಸಬೇಕು ಎಂದು ನಗರ ಸುಧಾರಣೆ ವೇದಿಕೆಯ ಅಧ್ಯಕ್ಷ ಅಶೋಕ ಅಲ್ಲಾಪುರ ತಿಳಿಸಿದರು.

ಇವರೇನಂತಾರೆ?

ಅಭಿವೃದ್ಧಿ ಹೆಸರಿನಲ್ಲಿ ದಬ್ಬಾಳಿಕೆ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ಬೆಂಬಲವಿದೆ. ಆದರೆ ಅಭಿವೃದ್ದಿ ಹೆಸರಿನಲ್ಲಿ ಬೀದಿ ಬದಿಯ ವ್ಯಾಪಾರಿಗಳು ಬಡವರು ಶ್ರಮಿಕರ ಮೇಲೆ ಪುರಸಭೆ ಆಡಳಿತ ತೋರುತ್ತಿರುವ ದಬ್ಬಾಳಿಕೆ ಖಂಡನೀಯ. ತೆರವು ಕಾರ್ಯಾಚರಣೆಯಲ್ಲಿ ಬಡವರಿಗೆ ಒಂದು ನ್ಯಾಯ. ಶ್ರೀಮಂತರು ಅಧಿಕಾರ ಇದ್ದವರಿಗೆ ಒಂದು ನ್ಯಾಯ ಆಗುತ್ತಿದೆ.

ಸಂತೋಷ ಪಾಟೀಲ ಡಂಬಳ ಬಿಜೆಪಿ ಮಂಡಲ ಅಧ್ಯಕ್ಷ

ಬೀದಿ ಬದಿ ವ್ಯಾಪಾರಸ್ಥರಿಗೆ ಸಮಸ್ಯೆ ಪಟ್ಟಣದ ಸೌಂದರ್ಯೀಕರಣ ಅಭಿವೃದ್ಧಿ ವಿಷಯದಲ್ಲಿ ಸಿಂದಗಿ ಪಟ್ಟಣ ಜಿಲ್ಲೆಯಲ್ಲಿಯೇ ಹಿಂದಿತ್ತು. ಪುರಸಭೆ ಈಗ ಕೈಗೊಂಡ ಕಾರ್ಯಾಚರಣೆ ಸ್ವಾಗತಾರ್ಹ. ಆದರೆ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಗಿದ್ದು ನಿಜ. ಮತಕ್ಷೇತ್ರದ ಶಾಸಕರು ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

ಸುರೇಶ ಪೂಜಾರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ಅಭಿವೃದ್ಧಿ ಹೇಗೆ ಸಾಧ್ಯ? ಬಡವರನ್ನು ಬೀದಿ ಪಾಲು ಮಾಡಿ ರಸ್ತೆ ವಿಸ್ತರಣೆಯನ್ನೇನೋ ಮಾಡಲಾಯಿತು. ಆದರೆ ಆದಾಯವೇ ಇಲ್ಲದ ಪುರಸಭೆಯಿಂದ ಅಭಿವೃದ್ಧಿ ಮಾಡುವುದಾದರೂ ಹೇಗೆ?

ಪ್ರಕಾಶ ಹಿರೇಕುರಬರ ಜೆಡಿಎಸ್ ರಾಜ್ಯ ಘಟಕದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.