ಇಂಡಿ: ಇಲ್ಲಿನ ಶಾಂತೇಶ್ವರ ಟ್ರಸ್ಟ್ ಕಮಿಟಿ ಆಡಳಿತ ಮಂಡಳಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದು, ಸಾರ್ವಜನಿಕರಿಗೆ ಸಮರ್ಪಕ ಲೆಕ್ಕ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿ ನಡೆಸುತ್ತಿರುವ ಧರಣಿ ಗುರುವಾರ 12ನೇ ದಿನಕ್ಕೆ ಕಾಲಿಟ್ಟಿದೆ.

ಶಾಂತುಗೌಡ ಬಿರಾದಾರ, ನೀಲಕಂಠಗೌಡ ಪಾಟೀಲ, ರವಿಗೌಡ ಪಾಟೀಲ, ಸಾತಪ್ಪ ತೆನ್ನೆಳ್ಳಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಕಮಿಟಿಯವರಿಗೆ ಲಿಖಿತವಾಗಿ ಲೆಕ್ಕಪತ್ರ ನೀಡಲು ಮನವಿ ಮಾಡಿದ್ದೇವೆ. ಆದರೆ ಅವರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಬಂದು ಲೆಕ್ಕಪತ್ರ ನೀಡಿಲ್ಲ. ಅಲ್ಲದೆ ದೇವಸ್ಥಾನದ ನೋಟಿಸ್ ಬೋರ್ಡ್ಗೆ ಲೆಕ್ಕಪತ್ರ ಅಂಟಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಅಲ್ಲಿ ಅಂಟಿಸಿಲ್ಲ.

ಕರಪತ್ರದಲ್ಲಿ ಲೆಕ್ಕಪತ್ರ ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಿದ್ದು, ಅದಕ್ಕೆ ಅಧ್ಯಕ್ಷರು, ಕಾರ್ಯದರ್ಶಿ ಸಹಿ ಇಲ್ಲ, ಅಲ್ಲದೆ ಸರಿಯಾದ ಲೆಕ್ಕಪತ್ರ ನೀಡಿಲ್ಲ. ಹುಂಡಿಯಿಂದ ಪ್ರತೀವರ್ಷ ತೆಗೆಯುವ ಹಣದ ಬಗ್ಗೆ ಮಾಹಿತಿ ನೀಡಿಲ್ಲ. ದೇವಸ್ಥಾನದ ಕಮಿಟಿಯಲ್ಲಿ ಬೇರೆ ಊರಿನಿಂದ ವಲಸೆ ಬಂದವರನ್ನು ಸೇರಿಸಿಕೊಂಡು ಕಮಿಟಿ ರಚಿಸಿದ್ದಾರೆ. ಮೂಲ ಸ್ಥಳೀಯರಿಗೆ ಆದ್ಯತೆ ನೀಡಿಲ್ಲ ಎಂದು ಆರೋಪಿಸಿದರು.

ಟ್ರಸ್ಟ್ ಕಮಿಟಿ ವಿಸರ್ಜಿಸಿ ನೂತನ ಕಮಿಟಿ ರಚನೆಯಾಗಬೇಕು. ಧರಣಿ ನಡೆಸುತ್ತಿದ್ದರೂ ಧರಣಿ ಸ್ಥಳಕ್ಕೆ ಬಾರದೆ ಸಾರ್ವಜನಿಕರಿಗೆ ಅಗೌರವ ತೋರಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಕಾನೂನು ಹೋರಾಟ ನಡೆಸಲು ಸಜ್ಜಾಗಿದ್ದೇವೆ ಎಂದು ತಿಳಿಸಿದರು.

ರಾಜು ಕುಲಕರ್ಣಿ, ಅನೀಲ ಝಂಪಾ, ಅಮಿತ್ ಪಾಟೀಕಲ, ಸಂತೋಶ ಅಳ್ಳಗಿ, ಸುನಿಲ್ ಗವಳಿ, ಧರೇಶ ಉನ್ನದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.