ತಾಳಿಕೋಟೆ: ‘ಓ ನನ್ನ ಚೇತನ ಆಗು ನೀ ಅನಿಕೇತನ, ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು’ ಕುವೆಂಪು ಅವರ ಈ ಕವನವನ್ನು ಅಕ್ಷರಶಃ ತಮ್ಮ ಬಾಳಿನಲ್ಲಿ ಅಳವಡಿಸಿಕೊಂಡಿರುವ ಅಪರೂಪದ ಯೋಗಿ ನಿರಂಜನಶ್ರೀ.

ಅವರಿಗೆ ಮನೆಯಿಲ್ಲ. ಯಾವ ಊರು ತಿಳಿಯದು. ಆರು ವರ್ಷ ಕಾಲ ಹಿಮಾಲಯದಲ್ಲಿಯ ಸಂತರ ಜೊತೆಗಿದ್ದು ಕಲಿತು ಬಂದಿರುವ ಯೋಗ, ಅಧ್ಯಾತ್ಮದ ದರ್ಶನವನ್ನು ನಾಡಿನ ಮನೆಮನಗಳಿಗೆ ತಲುಪಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಅವರ ಉದ್ದೇಶ.

ಗ್ರಾಮ ಪಟ್ಟಣಗಳನ್ನು ಸುತ್ತುತ್ತ ಬೆಳಿಗ್ಗೆ ಯೋಗ, ಸಂಜೆ ಅಧ್ಯಾತ್ಮದ ದಾಸೋಹ ಬಡಿಸುವ ಶರಣ ಇವರು. ತಾಳಿಕೋಟೆ ಪಟ್ಟಣದ ಯೋಗೋತ್ಸವ ಸಮಿತಿಯ ಕಾರಣದಿಂದ ಇಲ್ಲಿನ ಜನತೆ ಕೂಡ 12 ದಿನ ಇದರ ಲಾಭ ಪಡೆದರು.

ಅವರು ಕಲಿತ ವಿದ್ಯೆಯನ್ನು ಇತರರಂತೆ ಬಳಸಿಕೊಂಡಿದ್ದರೆ ದೊಡ್ಡ ಮಠ ಕಟ್ಟಿಕೊಂಡು ಸಾಕಷ್ಟು ಆಸ್ತಿ, ಧನ ಸಂಪಾದಿಸಬಹುದಿತ್ತೇನೋ. ಆದರೆ ಅವೆಲ್ಲವುಗಳಿಂದ ದೂರ ನಿಂತವರು ತಮಗಾಗಿ ಒಂದು ಗರಿಕೆಯಷ್ಟು ಆಸ್ತಿಯನ್ನೂ ಹೊಂದಿರದ, ಎತ್ತಿಕೊಂಡವರ ಕೂಸಿನಂತಿರುವವರು ಯೋಗಗುರು ನಿರಂಜನಶ್ರೀ. ಸೇವೆಯ ಹೆಸರಿನ ಹಿಂದೆ ಹೆಚ್ಚಾಗಿ ಸ್ವಾರ್ಥದ ಮುಖವನ್ನೇ ಕಂಡಿರುವ ಜನತೆಗೆ ಏನೂ ಬಯಸದ ಈ ಸಂಚಾರಿ ಜಂಗಮ ಸೋಜಿಗವಾಗಿ ನಿಲ್ಲುತ್ತಾರೆ.

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ವಚನದಂತೆ ಸ್ಥಿರವಾಗಿ ಒಂದೆಡೆ ನಿಲ್ಲದೇ ದೇಹವನ್ನೇ ದೇಗುಲವಾಗಿಸಿಕೊಂಡು ಊರೂರು ಅಲೆಯುತ್ತಿದ್ದಾರೆ. ಎಲೆಮರೆಯ ಕಾಯಂತೆ ಇದ್ದು ಸಮಾಜವನ್ನು ಆರೋಗ್ಯಶೀಲ ಮಾಡುತ್ತ ಹೊರಟಿದ್ದಾರೆ. ವಿಜಯಪುರ ಜ್ಞಾನಯೋಗಾಶ್ರಮದ ಗುರುಗಳ ಆಣತಿಯಂತೆ ಬದುಕುತ್ತಿರುವ ಯೋಗಿ ದೇಶ ಸಂಚಾರಿಯಾಗಿ ಇರುವಷ್ಟು ಕಾಲ ಜನರಲ್ಲಿ ಉತ್ತಮ ದೈಹಿಕ, ಮಾನಸಿಕ ಆರೋಗ್ಯ ನಿರ್ಮಾಣಕ್ಕೆ ಬೆಳಿಗ್ಗೆ ಯೋಗ, ಸಂಜೆಗೆ ಜ್ಞಾನ ದಾಸೋಹ ನಡೆಸುತ್ತಿದ್ದಾರೆ.

ಈ ಸ್ವಾಮೀಜಿ ಯಾರಿಂದಲೂ ಏನನ್ನೂ ಅಪೇಕ್ಷಿಸುವುದಿಲ್ಲ. ಕೊಟ್ಟರೂ ಸ್ವೀಕರಿಸದೇ ಅಲ್ಲಿಯೇ ಬಿಟ್ಟು ಹೋಗುತ್ತಾರೆ. ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಂತೆ ‘ಜೇಬಿಲ್ಲದ ಬದುಕು. ಜೋಳಿಗೆಯಿಲ್ಲದ ಜಂಗಮ’

ಅವರು ಯೋಗಶಿಬಿರ ನಡೆಸುವಲ್ಲಿ, ಹಾಸುವ ಚಾಪೆಗಳು, ಬೆಳಕು ಚೆಲ್ಲುವ ದೀಪಗಳು, ಧ್ವನಿ ವರ್ಧಕವೂ ಅವರದ್ದೇ. ಆಯೋಜಕರು ಸ್ಥಳಾವಕಾಶ ಒದಗಿಸಿ, ಜನರನ್ನು ಸೇರಿಸಿದರೆ ಸಾಕು. ಅವರೊಬ್ಬ ಏಕಾಂಗಿ ಸಂಚಾರಿ ಸನ್ಯಾಸಿ.

ನೀವು ನನಗಾಗಿ ಉಪಕಾರ ಮಾಡುವುದಾದರೆ ಶಿಬಿರ ನಡೆಸುವ ಊರಲ್ಲಿರುವ ನಿಮ್ಮ ಬಂಧುಗಳಿಗೆ ಸ್ನೇಹಿತರಿಗೆ ಯೋಗ ಹಾಗೂ ಅಧ್ಯಾತ್ಮದ ಬಗ್ಗೆ ತಿಳಿದುಕೊಳ್ಳಲು ಬೆಳಿಗ್ಗೆ ಮತ್ತು ಸಂಜೆ ಭಾಗವಹಿಸಿ ಎಂದು ಹೇಳಿದರೆ ಸಾಕು. ಎನ್ನುವ ವಿನೀತ ಭಾವ. ಇವರಿಗೆ ದಿನಕ್ಕೊಂದೇ ಊಟ, ಫಲಾಹಾರ. ಯಾರ ಮನೆಯಲ್ಲಿ ಪ್ರಸಾದವೋ ಅವರು ಏನು ಕೊಡುತ್ತಾರೋ ಅದನ್ನೇ ಸೇವಿಸುತ್ತಾರೆ.

ಯೋಗ ಮಾಡಿ ದೇಹ ಗಟ್ಟಿಗೊಳಿಸಿಕೊಳ್ಳಲು ಕಠಿಣವಾದ ಆಸನಗಳು ಇಲ್ಲ. ಸರಳವಾದ ಎಲ್ಲರೂ ಮಾಡಬಹುದಾದ ಆಸನಗಳನ್ನು ಅವರು ರೂಢಿಸುತ್ತಾರೆ. ಮುಖ್ಯವಾಗಿ ಜೋಡುಗಳು, ಸೂರ್ಯನಮಸ್ಕಾರ, ಪ್ರಾಣಾಯಾಮ, ಧ್ಯಾನ ದಿನಕ್ಕೊಂದು ಗಂಟೆ ಸಮಯ ಮೀಸಲಿಟ್ಟರೆ ಸಾಕು. ನೂರ್ಕಾಲ ನೆಮ್ಮದಿ ಬದುಕು. ದೇಹಗಟ್ಟಿಗೊಂಡಂತೆ ಮನಸ್ಸೂ ಗಟ್ಟಿಗೊಳ್ಳಲು ನಿತ್ಯ ಸತ್ಸಂಗದಲ್ಲಿದ್ದರೆ ಭಾವಶುದ್ಧವಾಗಿ ದೇಹಮನಸ್ಸುಗಳು ಶುದ್ಧವಾಗಿರುತ್ತವೆ ಎಂಬುದು ಅವರ ನಿಲುವು.

ಬೀದರ್ ಜಿಲ್ಲೆಯಿಂದ ಹೊರಟು ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ 12ರಿಂದ 15 ದಿನಗಳ ಯೋಗ, ಅಧ್ಯಾತ್ಮ ಶಿಬಿರ ನಡೆಸುತ್ತ ಹೊರಟಿದ್ದಾರೆ. ನಿಮ್ಮೂರಿಗೆ ಸ್ವಾಗತಿಸಿ, ಬಂದಾಗ ಅದರ ಲಾಭ ಪಡೆದರೆ ಸಾಕು.

ಅಪೇಕ್ಷೆಯಿರದ ಇಷ್ಟೊಂದು ಸರಳ ನಿಸ್ವಾರ್ಥ ಸ್ವಾಮೀಜಿಗಳು ಅಪರೂಪ ಸಮಾಜಕ್ಕೆ ಇಂತಹವರ ಅವಶ್ಯಕತೆ ಇದೆ.
ಡಾ.ಪ್ರಭುಗೌಡ ಬಿ.ಎಲ್. ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ

ಪ್ರಚಾರದಿಂದ ದೂರ ಎಲೆಮರೆಯ ಕಾಯಂತೆ ವನಸುಮದ ಘಮಲಿನಂತೆ ಅವರ ಕಾರ್ಯ
ಅಶೋಕ ಹಂಚಲಿ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.