ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ಹಡಲಗೇರಿ ಗ್ರಾಮದ ಹೊಲವೊಂದರಲ್ಲಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರ ಸಾವಿಗೀಡಾಗಿದ್ದಾರೆ.

ಹಡಲಗೇರಿ ಗ್ರಾಮದ ಚಿನ್ನಪ್ಪ ತಳವಾರ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಎಮ್ಮೆ ಮೇಯಿಸಲು ಹೋಗಿದ್ದ

ನೀಲಮ್ಮ ಖಿಲಾರಹಟ್ಟಿ (16) ಮುತ್ತಪ್ಪ ಖಿಲಾರಹಟ್ಟಿ (24) ಹಾಗೂ ಶಿವು ಯಾಳವಾರ (25) ಸಾವಿಗೀಡಾದವರು ಎಂದು ಗುರುತಿಸಲಾಗಿದೆ.

ನೀಲಮ್ಮ ಎಮ್ಮೆಗೆ ನೀರು ಕುಡಿಸಲು ನೀರು ತುಂಬಿದ್ದ ಗುಂಡಿ ಬಳಿ ಹೋದಾಗ ಕಾಲು ಜಾರಿ ಬೀಳುತ್ತಿರುವಾಗ ರಕ್ಷಣೆಗಾಗಿ ಹೋದ ಸಂಬಂಧಿಕರಾದ ಮುತ್ತಪ್ಪ ಖಿಲಾರಹಟ್ಟಿ ಕೂಡ ಕಾಲು ಜಾರಿ ಬಿದ್ದು ಮೇಲೆ ಬರಲಾರದೇ ಪರದಾಟ ನಡೆಸಿದ್ದಾರೆ. ಇಬ್ಬರನ್ನು ಕಾಪಾಡಲು ಬಂದ ಶಿವು ಯಾಳವಾರ ಸಹ ನೀರು ಪಾಲಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಮುದ್ದೇಬಿಹಾಳ ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿ ಮೂರೂ ಶವಗಳನ್ನು ಹೊರ ತೆಗೆದರು. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.