ಕೊಲ್ಹಾರ: ಕಸ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಮಾಡುವಂತೆ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದಿಂದ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಉಪ ತಹಶೀಲ್ದಾರ್ ಎಂ.ಕೆ.ನದಾಫ ಅವರಿಗೆ ರೋಣಿಹಾಳ ಗ್ರಾಮಸ್ಥರು ಹಾಗೂ ರೈತ ಸಂಘದ ಅಧ್ಯಕ್ಷ ಸೋಮು ಬಿರಾದಾರ ಮನವಿ ಸಲ್ಲಿಸಿದರು.

ರೋಣಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ವೇ ನಂಬರ್ 258 ಕ್ಷೇತ್ರ 31 ಎಕರೆ 32 ಗುಂಟೆ ಗಾಯರಾಣ ಜಾಗವಿದ್ದು. ಈ ಸ್ಥಳದಲ್ಲಿ ಕಸವನ್ನು ತಂದು ಹಾಕುವುದರಿಂದ ಗ್ರಾಮದಲ್ಲಿ 4500 ಮನೆಗಳಿದ್ದು ವಾಸಿಸಲು ಜನರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಆದ್ದರಿಂದ ಈ ಕಸವಿಲೇವಾರಿ ಘಟಕದ ಸ್ಥಳವನ್ನು ಬೇರೆ ಕಡೆ ವರ್ಗಾವಣೆ ಮಾಡಿ ಈ ಜನರಿಗೆ ವಾಸಿಸಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ಸ್ಥಳದಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಆಟದ ಮೈದಾನ, ಗಾರ್ಡನ್, ಅಥವಾ ಸರ್ಕಾರಿ ಕಚೇರಿಗಳನ್ನು ನಿರ್ಮಾಣ ಮಾಡಬೇಕು ಎಂದು ಕೋರಿದರು.

ಗ್ರಾಮಸ್ಥರು ಹಾಗೂ ರೈತ ಮುಖಂಡರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ.

ಉಮೇಶ ಹೊಸಮನಿ,ಅಶೋಕ ಜಮಖಂಡಿ, ಬಸವರಾಜ ನ್ಯಾಮಗೊಂಡ, ಶರಣು ಸಾಹುಕಾರ ನ್ಯಾಮಗೊಂಡ,ಜಿ ಆರ್ ನ್ಯಾಮಗೊಂಡ, ನೀಲನಗೌಡ ಬಿರಾದಾರ, ಮಲ್ಲು ದೇಸಾಯಿ, ಬಸವರಾಜ ಬೀಳಗಿ, ವಿನೋದ ರೂಡಗಿ,ವಿನೋದ ದೇಸಾಯಿ,ಬಸವರಾಜ ದೇಸಾಯಿ,ಹನುಮಂತ ನ್ಯಾಮಗೊಂಡ, ಶ್ರೀಕಾಂತ ಚಲವಾದಿ ಹಾಗೂ ಗ್ರಾಮಸ್ಥರು,ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.