ಭಾರತ ಮತ್ತು ಇರಾನ್ ಮಧ್ಯದ ಮಹತ್ವದ ಯೋಜನೆಯಾದ ಚಬಹಾರ್ ಬಂದರಿನ ಕಾರ್ಯಾಚರಣೆ ರೂಪಿಸಿದ 10 ವರ್ಷಗಳ ಒಪ್ಪಂದಕ್ಕೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ಮಧ್ಯೆ ಅನೇಕ ಭಿನ್ನಾಭಿಪ್ರಾಯಗಳಿದ್ದವು. ಆ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಭಾರತ ಮತ್ತು ಇರಾನ್ ದೇಶಗಳೆರಡೂ ಸಿದ್ಧವಾಗಿವೆ ಎಂದು ಇರಾನ್ ಮಾಧ್ಯಮಗಳಲ್ಲಿ ಇತ್ತೀಚೆಗೆ ವರದಿಯಾಗಿದೆ. ಶೀಘ್ರವೇ ಒಪ್ಪಂದಕ್ಕೆ ಅಂತಿಮ ಸಹಿ ಬೀಳಬಹುದೆಂದು ನಿರೀಕ್ಷಿಸಲಾಗಿದೆ.

ಚಬಹಾರ್ ಬಂದರು

l ಚಬಹಾರ್ ಎಂದರೆ ಪರ್ಷಿಯನ್ ಭಾಷೆಯಲ್ಲಿ ‘ನಾಲ್ಕು ಚಿಲುಮೆಗಳು’ ಎಂಬರ್ಥವಿದೆ. ಓಮನ್ ಕೊಲ್ಲಿ ಪ್ರದೇಶದಲ್ಲಿ ಬರುವ ಆಗ್ನೇಯ ಇರಾನ್‌ನ ಆಯಕಟ್ಟಿನ ಮಹತ್ವದ ಬಂದರು ಇದಾಗಿದೆ.

l ಇದು ಸಿಸ್ತಾನ್ ಮತ್ತು ಬಲುಚಿಸ್ತಾನ್ ಪ್ರಾಂತ್ಯದ ಮಕ್ರಾನ್ ಕರಾವಳಿಯಲ್ಲಿದ್ದು ಅದರ ಕಾರ್ಯತಂತ್ರದ ಸ್ಥಳ ಮತ್ತು ಪ್ರಾದೇಶಿಕ ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸುವ ಸಾಮರ್ಥ್ಯದಿಂದಾಗಿ ಅಪಾರ ಭೌಗೋಳಿಕ, ರಾಜಕೀಯ ಮತ್ತು ಆರ್ಥಿಕ ಪ್ರಾಮುಖ್ಯ ಪಡೆದಿದೆ.

l ಚಬಹಾರ್ ಬಂದರು ಪಾಕಿಸ್ತಾನದ ಗ್ವಾದರ್ ಬಂದರಿನಿಂದ 70 ಕಿಲೋಮೀಟರ್ ದೂರದಲ್ಲಿದ್ದು (ಚೀನಾ ಇದನ್ನು ಅಭಿವೃದ್ಧಿ ಪಡಿಸುತ್ತಿದೆ), ಮುಂಬೈಗೆ 1,400 ಕಿಲೋಮೀಟರ್ ಮತ್ತು ಅಫ್ಘಾನಿಸ್ತಾನದ ಕಾಬೂಲ್‌ಗೆ 1,854 ಕಿಮೀ ದೂರದಲ್ಲಿದೆ.

ಮೂಲಸೌಕರ್ಯ ಮತ್ತು ವೈಶಿಷ್ಟ್ಯಗಳು

l ಚಬಹಾರ್ ಬಂದರು ಆಳ ನೀರಿನ ಸೌಲಭ್ಯಗಳನ್ನು ಹೊಂದಿದ್ದು ಬೃಹತ್ ಹಡಗುಗಳ ಚಲನೆ ಮತ್ತು ಲಂಗರು ಹಾಕಲು ಉತ್ತಮ ನೈಸರ್ಗಿಕ ಸೌಕರ್ಯಗಳನ್ನು ಹೊಂದಿದೆ. ಹಿಂದೂ ಮಹಾಸಾಗರದ ಸನಿಹದಲ್ಲಿರುವುದು ಮತ್ತು ಅತ್ಯಂತ ಆಯಕಟ್ಟಿನ ಪ್ರದೇಶದಲ್ಲಿರುವುದರಿಂದ ಭಾರತ ಮತ್ತು ಅಫ್ಘಾನಿಸ್ತಾನದಿಂದ ಸರಕು ಸಾಗಣೆಗೆ ಪರ್ಯಾಯ ವ್ಯಾಪಾರ ಮಾರ್ಗವನ್ನು ಒದಗಿಸುತ್ತದೆ.
ಈ ಬಂದರು ಎರಡು ಪ್ರತ್ಯೇಕ ಟರ್ಮಿನಲ್‌ಗಳನ್ನು ಒಳಗೊಂಡಿದೆ.
1) ಶಾಹಿದ್ ಕಲಂತರಿ ಟರ್ಮಿನಲ್ (SKT) ಮತ್ತು 2) ಶಾಹಿದ್ ಬೆಹೆಷ್ತಿ ಟರ್ಮಿನಲ್ (SBT)

ಚಬಹಾರ್ ಜೊತೆ ಭಾರತದ ಸಂಬಂಧ

l ಅದರ ಆಯಕಟ್ಟಿನ ಸ್ಥಳದ ಕಾರಣಕ್ಕೆ ಭಾರತವು ಚಬಹಾರ್ ಬಂದರಿನ ಅಭಿವೃದ್ಧಿಯಲ್ಲಿ ವಿಶೇಷ ಆಸಕ್ತಿಯನ್ನು ತೋರಿಸಿದೆ. ಇದು ಭಾರತದಿಂದ ಅಭಿವೃದ್ಧಿಯಾಗುತ್ತಿರುವ ಮೊದಲ ವಿದೇಶಿ ಬಂದರು ಯೋಜನೆಯಾಗಿದೆ.

l ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನ ದೇಶಗಳು ಒಂದಾಗಿ 2016ರಲ್ಲಿ ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸುವ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿದವು. ಈ ಮೂಲಕ ಇರಾನ್‌ನ ಸಹಕಾರದೊಂದಿಗೆ ಶಾಹಿದ್ ಬೆಹೆಷ್ತಿ ಟರ್ಮಿನಲ್ (SBT)ನ ಮೊದಲ ಹಂತದಲ್ಲಿ ಹೂಡಿಕೆ ಮಾಡಲು ಮತ್ತು ಅದರ ನಿರ್ವಹಣೆ ಮಾಡಲು ಭಾರತಕ್ಕೆ ಅವಕಾಶ ಮಾಡಿಕೊಡಲಾಯಿತು.

l ಭಾರತವು SBTಯ ಅಭಿವೃದ್ಧಿಗೆ ಬೆಂಬಲವನ್ನು ನೀಡುವುದಾಗಿ ಹೇಳಿದ್ದು, ಆ ಪ್ರಕಾರ 85 ಮಿಲಿಯನ್ ಡಾಲರ್ ಮೊತ್ತದ ಅನುದಾನ ಮತ್ತು 150 ಮಿಲಿಯನ್ ಡಾಲರ್ ಮೊತ್ತದ ಸಾಲಸೌಲಭ್ಯವನ್ನು ನೀಡುತ್ತಿದ್ದೇವೆ. SBTಯ ಮೂಲಸೌಕರ್ಯ ಹೆಚ್ಚಿಸಲು ಭಾರತವು ಆರು ಮೊಬೈಲ್ ಹಾರ್ಬರ್ ಕ್ರೇನ್‌ಗಳನ್ನು ಅದಾಗಲೇ ಒದಗಿಸಿದೆ.

l ಭಾರತವು ಚಬಹಾರ್‌ನಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದು, ಇದರಲ್ಲಿ ಪ್ರಮುಖವಾಗಿ ಚಬಹಾರ್‌ನಿಂದ ಇರಾನ್‌ನ ಜಹೇದನ್‌ಗೆ ಸಂಪರ್ಕಿಸುವ ಹೊಸ ರೈಲು ಮಾರ್ಗದ ನಿರ್ಮಾಣವೂ ಸೇರಿದೆ. ಇದು ಅಫ್ಘಾನಿಸ್ತಾನದಲ್ಲಿರುವ ಜರಾಂಜ್‌ಗೆ ಹೆಚ್ಚಿನ ಸಂಪರ್ಕವನ್ನು ಕಲ್ಪಿಸುತ್ತದೆ. ಈ ಜರಾಂಜ್ ಭಾರತಕ್ಕೆ ಅತಿ ಮುಖ್ಯವಾದುದು ಯಾಕೆಂದರೆ ಭಾರತಕ್ಕೆ ಇದು ಮಧ್ಯ ಏಷ್ಯಾದೇಶಗಳೆಡೆಗೆ ಪ್ರವೇಶಮಾರ್ಗವಾಗಿ ಹೆಬ್ಬಾಗಿಲಿನಂತೆ ಕಾರ್ಯನಿರ್ವಹಿಸುತ್ತದೆ. ಈ ಸಾರಿಗೆ ಕಾರಿಡಾರ್ ಈ ಮೂರು ರಾಷ್ಟ್ರಗಳ ನಡುವೆ ವ್ಯಾಪಾರ ಅವಕಾಶಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಭೌಗೋಳಿಕ ರಾಜಕೀಯ ಪರಿಣಾಮಗಳು

ಪರ್ಯಾಯ ವ್ಯಾಪಾರ ಮಾರ್ಗಗಳು

l ಚಬಹಾರ್ ಬಂದರು ಭಾರತಕ್ಕೆ ಪಾಕಿಸ್ತಾನಕ್ಕೆ ಪ್ರವೇಶ ಮಾಡುವ ಅವಶ್ಯಕತೆಯಿಲ್ಲದೆಯೇ (ಬೈಪಾಸ್ ಮಾಡಿ ಹೋಗಬಹುದಾದ ರೀತಿಯಲ್ಲಿ) ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಪರ್ಯಾಯ ವ್ಯಾಪಾರ ಮಾರ್ಗವನ್ನು ಒದಗಿಸುತ್ತದೆ. ಅಫ್ಘಾನಿಸ್ತಾನ ಮತ್ತು ಅದರಾಚೆಗಿನ ದೇಶಗಳ ವ್ಯಾಪಾರಕ್ಕಾಗಿ ಪಾಕಿಸ್ತಾನಿ ಬಂದರುಗಳು ಅಥವಾ ರಸ್ತೆಗಳು ಮತ್ತು ರೈಲ್ವೆಗಳ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತಕ್ಕೆ ಇದು ಉತ್ತಮ ಅವಕಾಶವಾಗಿದೆ.

ಚೀನಾಕ್ಕೆ ತಕ್ಕ ಪ್ರತಿಕ್ರಿಯೆ

l ಚಬಹಾರ್ ಬಂದರು ಪಾಕಿಸ್ತಾನದಲ್ಲಿರುವ ಚೀನಾದ ಗ್ವಾದರ್ ಬಂದರಿನ ಪ್ರಭಾವವನ್ನು ಸರಿದೂಗಿಸಲು ಅವಕಾಶ ಮಾಡಿಕೊಡುತ್ತದೆ. ಗ್ವಾದರ್ ಬಂದರು ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ಹಾಗೂ ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ (CPEC) ಯೋಜನೆಗಳ ಮಹತ್ವದ ಭಾಗವಾಗಿದ್ದು, ಇದಕ್ಕೆ ಎದುರಾಗಿ ಚಬಹಾರ್ ಅನ್ನು ಅಭಿವೃದ್ಧಿಪಡಿಸುವ ಮೂಲಕ, ಭಾರತವು ಈ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಮತ್ತು ಗ್ವಾದರ್‌ನಿಂದ ಉದ್ಭವಿಸಬಹುದಾದ ಪರಿಣಾಮಗಳನ್ನು ಈ ಮೂಲಕ ಎದುರಿಸಲು ಪ್ರಯತ್ನಿಸುತ್ತದೆ.

ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವುದು

l ಚಬಹಾರ್‌ನ ಅಭಿವೃದ್ಧಿಯು ಉತ್ತಮ ಪ್ರಾದೇಶಿಕ ಸಂಪರ್ಕವನ್ನು ಸುಗಮಗೊಳಿಸಿ ಆ ಪ್ರದೇಶದ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಗೆ ಕೊಡುಗೆ ನೀಡುತ್ತದೆ. ಇದು ಭಾರತ, ಇರಾನ್, ಅಫ್ಘಾನಿಸ್ತಾನ ಮತ್ತು ಇತರ ಮಧ್ಯ ಏಷ್ಯಾದ ದೇಶಗಳ ನಡುವೆ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಆರ್ಥಿಕ ಬೆಳವಣಿಗೆ ಮತ್ತು ಹೂಡಿಕೆ

l ಚಬಹಾರ್‌ನ ಅಭಿವೃದ್ಧಿಯು ಇರಾನ್‌ಗೆ ವಿದೇಶೀ ಹೂಡಿಕೆಯನ್ನು ಆಕರ್ಷಿಸಲು ಮತ್ತು ಅದರ ಆರ್ಥಿಕತೆಯನ್ನು ಹೆಚ್ಚಿಸಲು ಒಂದು ಅವಕಾಶವಾಗಿದೆ. ಅಂತರರಾಷ್ಟ್ರೀಯ ನಿರ್ಬಂಧಗಳಿಂದ ಮೂಡಿದ ಕೆಲವು ಆರ್ಥಿಕ ಸವಾಲುಗಳನ್ನು ನಿವಾರಿಸುವಲ್ಲಿ ಇದು ಇರಾನ್‌ಗೆ ಸಹಾಯ ಮಾಡುತ್ತದೆ.

ಭಾರತದ ಸಂಪರ್ಕ ಯೋಜನೆಗಳಿಗೆ ಪೂರಕ ನಡೆ

l ಚಬಹಾರ್ ಭಾರತದ ವಿದೇಶಾಂಗ ನೀತಿಯ ಪ್ರಮುಖ ಭಾಗವಾಗಿದೆ ಮತ್ತು ಇದು ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ಮತ್ತು ಅಶ್ಗಾಬಾಟ್ ಒಪ್ಪಂದದಂತಹ ಯೋಜನೆಗಳಿಗೆ ಪೂರಕವಾಗಿದೆ. ಹಾಗೂ ಯುರೇಷಿಯನ್ ದೇಶಗಳೊಂದಿಗೆ ಭಾರತದ ಸಂಪರ್ಕವನ್ನು ಹೆಚ್ಚಿಸುತ್ತದೆ.

ಮಾನವೀಯ ನೆರವು ಮತ್ತು ಮರುನಿರ್ಮಾಣ

l ಚಬಹಾರ್ ಅಫ್ಘಾನಿಸ್ತಾನದಲ್ಲಿ ಮಾನವೀಯ ನೆರವು ಮತ್ತು ಪುನರ್ನಿರ್ಮಾಣ ಚಟುವಟಿಕೆಗಳ ಕೇಂದ್ರವಾಗಿ ಕಾರ್ಯನಿರ್ವಹಿಸಬಹುದು. ಇದರ ಸಮರ್ಪಕ ಬಳಕೆಯು ಯುದ್ಧ-ಹಾನಿಗೊಳಗಾದ ದೇಶದಲ್ಲಿ ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಉದಾಹರಣೆಗೆ 2020 ರಲ್ಲಿ, ಮಾನವೀಯ ಸಹಾಯದ ಭಾಗವಾಗಿ ಭಾರತವು ಅಫ್ಘಾನಿಸ್ತಾನಕ್ಕೆ 75,000 ಟನ್ ಗೋಧಿಯನ್ನು ಚಬಹಾರ್ ನ ಮೂಲಕವೇ ಪೂರೈಸಿತ್ತು.

ಪ್ರಾದೇಶಿಕ ಸ್ಥಿರತೆಯತ್ತ ಹೆಜ್ಜೆ

l ಚಬಹಾರ್‌ನಲ್ಲಿ ಹೂಡಿಕೆ ಮಾಡುವ ಮೂಲಕ, ಭಾರತವು ಇರಾನ್ ಮತ್ತು ಅಫ್ಘಾನಿಸ್ತಾನದೊಂದಿಗಿನ ಉತ್ತಮ ಸೌಹಾರ್ದ ಸಂಬಂಧ ಮತ್ತು ಸಮತೋಲನವನ್ನು ಕಾಯ್ದುಕೊಂಡು ಪ್ರಾದೇಶಿಕ ಸ್ಥಿರತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುತ್ತದೆ.

l ಚಬಹಾರ್ ಬಂದರು ಮಹತ್ವದ ಮೂಲಸೌಕರ್ಯ ಯೋಜನೆಯಾಗಿದ್ದು, ಇದು ಆ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಹಾಗೂ ದೂರಗಾಮಿ ಭೌಗೋಳಿಕ ರಾಜಕೀಯ ಪರಿಣಾಮಗಳನ್ನು ಹೊಂದಿದ್ದು ಭಾರತ, ಇರಾನ್ ಮತ್ತು ಅಫ್ಗಾನ್ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಒತ್ತು ನೀಡುತ್ತದೆ. ಈ ಮೂಲಕ ಪಾಕಿಸ್ತಾನ ಮತ್ತು ಚೀನಾದ ಮೈತ್ರಿಗೆ ಎದುರಾಗಿ ರೂಪಿಸಲ್ಪಟ್ಟ ಭಾರತದ ಜಾಣ್ಮೆಯ ನಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.