ಕಲಬುರ್ಗಿ: ‘ಇಲ್ಲನ ಶರಣಬಸವ ವಿಶ್ವವಿದ್ಯಾಲಯದಲ್ಲಿ ಇದೇ ಜೂನ್‌ನಿಂದ ಒಂದು ವರ್ಷದ ಕೃಷಿ ಡಿಪ್ಲೊಮಾ ಹಾಗೂ ಆಸ್‍ಪತ್ರೆ ಮ್ಯಾನೇಜ್‌ಮೆಂಟ್ ಕೋರ್ಸ್ ಆರಂಭಸಲಾಗುತ್ತಿದೆ’ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪ ತಿಳಿಸಿದರು.

ನಗರದ ದಾಸೋಹ ಮಹಾಮನೆಯಲ್ಲಿ ಸೋಮವಾರ ವಿಶ್ವವಿದ್ಯಾಲಯದ ಮಾಹಿತಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು,‘ಕೃಷಿ ಡಿಪ್ಲೊಮಾ ಕೋರ್ಸ್ ಮಾಡಲು ಇಚ್ಚಿಸುವವರಿಗೆ ಕನಿಷ್ಠ ಕನ್ನಡ ಓದಲು ಬರಬೇಕು. ಅದಕ್ಕಾಗಿ 7ನೇ ತರಗತಿ ಪಾಸಾದ ಯಾರಾದರೂ ಇದಕ್ಕೆ ಪ್ರವೇಶ ಪಡೆಯಬಹುದು’ ಎಂದರು.

‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ ತೊಗರಿ, ಜೋಳ ಹಾಗೂ ಹತ್ತಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡುತ್ತಾರೆ. ಬಹುಪಾಲು ರೈತ ಕುಟುಂಬಗಳು ಇವೇ ಬೆಳೆ ನಂಬಿಕೊಂಡಿವೆ. ಕೃಷಿಯಲ್ಲಿ ಅವರಿಗೆ ಆಸರೆಯಾಗಲು, ಲಾಭದಾಯಕ ಕೃಷಿ ಹೇಗೆ ಮಾಡಬೇಕು, ಈಗ ಪಡೆಯುವುದಕ್ಕಿಂತ ಹೆಚ್ಚಿನ ಇಳುವರಿ ಹೇಗೆ ಪಡೆಯಬೇಕು ಎಂದು ತಿಳಿಸಿಕೊಡಬೇಕು ಎಂಬುದು ನಮ್ಮ ಆಸೆ’ ಎಂದರು.

‘ರೈತರ ಮಕ್ಕಳು ಹೊಲಗಳಿಂದ ವಿಮುಖರಾಗುತ್ತಿದ್ದಾರೆ. ಆದರೆ, ಕೃಷಿಯಲ್ಲೂ ಅತ್ಯಂತ ಲಾಭ ಮಾಡಿಕೊಳ್ಳಬಹುದು ಎಂದು ಅವರಿಗೆ ಮನವರಿಗೆ ಮಾಡಬೇಕಿದೆ. ದೊಡ್ಡ ಪದವಿ ಪಡೆದು ಕೆಲಸ ಮಾಡುವುದು ದೊಡ್ಡ ವಿಷಯವಲ್ಲ. ಹೆಚ್ಚು ಕಲಿಯದೆಯೂ ಭೂಮಿಯನ್ನು ನಂಬಿ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ’ ಎಂದು ಹೇಳಿದರು.

ಸ್ಮಾರ್ಟ್‌ಕ್ಲಾಸ್ ಆರಂಭ:

‘ಶರಣಬಸವ ವಿಶ್ವವಿದ್ಯಾಲಯವನ್ನು ಸಂಪೂರ್ಣ ಸ್ಮಾರ್ಟ್‌ಕ್ಲಾಸ್ ಮಾಡಲಾಗುತ್ತಿದೆ. ದಕ್ಷಿಣ ಭಾರತದಲ್ಲೇ ಏಕಕಾಲಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದ ಸ್ಮಾರ್ಟ್‌ಕ್ಲಾಸ್ ಆರಂಭಿಸಿದ ಮೊದಲ ವಿಶ್ವವಿದ್ಯಾಲಯ ಇದು’ ಎಂದು ಅಪ್ಜ ತಿಳಿಸಿದರು.

‘ಕಲಬುರ್ಗಿಯಲ್ಲಿ ಬಿಸಿಲಿನ ತಾಪ ಹೆಚ್ಚು. ಹೊರಗಡೆಯಿಂದ ಬಂದ ವಿದ್ಯಾರ್ಥಿಗಳಿಗೆ ಇಲ್ಲಿನ ಬಿಸಿ ವಾತಾವರಣದಲ್ಲಿ ಓದುವುದು ಕಷ್ಟವಾಗಬಹುದು. ಈ ಕಾರಣಕ್ಕಾಗಿಯೇ ವಿಶ್ವವಿದ್ಯಾಲಯದಲ್ಲಿ ಕೂಲರ್, ಎ.ಸಿ.ಗಳನ್ನು ಅಳವಡಿಸಲಾಗಿದೆ. ನನ್ನ ಮನೆಯಲ್ಲಿ ನನ್ನ ಮಕ್ಕಳಿಗೆ ಯಾವ ವ್ಯವಸ್ಥೆ ಮಾಡಿದ್ದೀನೋ ಅಂಥದ್ದೇ ವ್ಯವಸ್ಥೆಯನ್ನು ನನ್ನ ವಿದ್ಯಾರ್ಥಿಗಳಿಗೂ ನೀಡಿದ್ದೇನೆ. ವಿಶ್ವವಿದ್ಯಾಲಯವನ್ನು ಈ ಹಂತಕ್ಕೆ ತಂದು ನಿಲ್ಲಿಸಲು ₹ 200 ಕೋಟಿ ವೆಚ್ಚ ಮಾಡಿದ್ದೇವೆ’ ಎಂದು ಅವರು ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ನಿಷ್ಠಿ, ಕುಲಸಚಿವ ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.