ವಿದೇಶದಲ್ಲಿ ಅಧ್ಯಯನ ಮಾಡಲು ಆಸಕ್ತಿಯಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಹಾಗೂ ಆರ್ಥಿಕವಾಗಿ ಬೆಂಬಲ ನೀಡಲು ಹಲವು ವಿದ್ಯಾರ್ಥಿ ವೇತನಗಳಿವೆ. ಬಡ್ಡಿ ರಹಿತ, ಕಡಿಮೆ ಬಡ್ಡಿಯ ದೀರ್ಘಾವಧಿ ಸಾಲಗಳೂ ಲಭ್ಯವಿವೆ.

ವಿದೇಶದಲ್ಲಿ ವ್ಯಾಸಂಗ ಮಾಡುವುದು ಅನೇಕ ವಿದ್ಯಾರ್ಥಿಗಳ ಕನಸು. ವಿಪುಲ ಉದ್ಯೋಗಾವಕಾಶ, ಓದಿನ ನಂತರವೂ ಅಲ್ಲೇ ಉದ್ಯೋಗ ಅರಸಲು ಇರುವ ಅವಕಾಶ, ಹೆಚ್ಚಿನ ವೇತನ, ಹೆಚ್ಚಿನ ಭದ್ರತೆ ಮತ್ತು ವಲಸೆ ಹೋಗುವ ಕಾರಣಕ್ಕಾಗಿ ವಿದೇಶಿ ತಾಣಗಳು ವಿದ್ಯಾರ್ಥಿಗಳನ್ನು ಕೈ ಬೀಸಿ ಕರೆಯುತ್ತಿವೆ. ವಿದೇಶದಲ್ಲಿ ವ್ಯಾಸಂಗ ಮುಗಿಸಿದವರಿಗೆ, ಭಾರತದಲ್ಲಿಯೂ ಉತ್ತಮ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತದೆ.

ಆದರೆ, ಭಾರತದಲ್ಲಿ ಓದಿ, ವಿದೇಶದಲ್ಲಿ ಉದ್ಯೋಗ ಪಡೆಯುವುದು ಕಷ್ಟಕರ. ಹೆಚ್ಚಿನ ವಿದೇಶಿ ಉದ್ಯೋಗದಾತರು ವೀಸಾವನ್ನು ಪ್ರಾಯೋಜಿಸದಿರುವುದೇ ಕಾರಣ. ವಿದೇಶದಲ್ಲೇ ಓದಿ, ಅಲ್ಲಿಯೇ ಉದ್ಯೋಗ ಪಡೆಯುವುದು ಸುಲಭವೆಂದೇ ಪರಿಗಣಿಸಲಾಗುತ್ತದೆ.

ವಿದೇಶಕ್ಕೆ ಹಾರುವ ಮುನ್ನ

ನೀವು ಆಯ್ಕೆ ಮಾಡಿಕೊಳ್ಳುವ ದೇಶ, ವಿಶ್ವವಿದ್ಯಾಲಯ ಹಾಗೂ ಕೋರ್ಸ್ ಅವಲಂಬಿಸಿ, ಅಧ್ಯಯನ ವೆಚ್ಚವು ಬದಲಾಗುತ್ತದೆ. ಉದ್ಯೋಗದಾತರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಓದಿದವರಿಗೆ ಆದ್ಯತೆ ನೀಡುವುದರಿಂದ, ನಿಮ್ಮ ವೃತ್ತಿಜೀವನವನ್ನು ಅಭಿವೃದ್ಧಿಪಡಿಸಲು ಅಂತಹವುಗಳನ್ನೇ ಆಯ್ಕೆ ಮಾಡಿಕೊಂಡರೆ ಆಯ್ಕೆಗಳು ಹೆಚ್ಚುವುದರೊಂದಿಗೆ, ಅಧಿಕ ಸಂಬಳವನ್ನೂ ನಿರೀಕ್ಷಿಸಬಹುದು.

ಪ್ರತಿಷ್ಠಿತ ವಿಶ್ವವಿದ್ಯಾಲಗಳಲ್ಲಿ ಎಂಬಿಎ ಪ್ರವೇಶ ಪಡೆಯಲು ಜಿಆರ್ಇ, ಜಿಮ್ಯಾಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಅನಿವಾರ್ಯ. ವಿದ್ಯಾರ್ಥಿಗಳಿಗೆ ನೀಡಲಾಗುವ ವೀಸಾದ ಅವಧಿ ಅಧ್ಯಯನ ಮುಗಿದ ನಂತರ ಎಷ್ಟು ಕಾಲ ಮಾನ್ಯವಾಗುತ್ತದೆ ಎಂಬುದನ್ನೂ ಗಮನಿಸಿ. ಅಮೆರಿಕ ಮತ್ತು ಬ್ರಿಟನ್ನಲ್ಲಿ ಅಧ್ಯಯನದ ನಂತರ ಉದ್ಯೋಗ ವೀಸಾ ಆಗಿ ಪರಿವರ್ತಿಸಲು ಅವಕಾಶವಿದೆ. ಎರಡು ವರ್ಷಗಳ ಕಾಲ ನೀಡಲಾಗುತ್ತದೆ. ಕೆನಡಾದಲ್ಲಿ ಈ ಅವಧಿ ಮೂರು ವರ್ಷದ್ದಿದೆ. ಆ ಅವಧಿಯಲ್ಲೇ ನೀವು ಉದ್ಯೋಗವನ್ನು ಪಡೆದುಕೊಳ್ಳಬೇಕು. ಕೆಲಸ ಪಡೆದ ಮೇಲೆ ನಿಯಮಾನುಸಾರ ಶಾಶ್ವತ ರೆಸಿಡೆನ್ಸಿಗೆ ಅರ್ಜಿ ಸಲ್ಲಿಸಬಹುದು.

ಆಯಾ ದೇಶ ಹಾಗೂ ನೀವು ಆಯ್ದುಕೊಳ್ಳುವ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಯನ್ನು ಅವಲಂಬಿಸಿ, ಖರ್ಚು ಭಿನ್ನವಾಗಿರುತ್ತವೆ. ಜರ್ಮನಿ, ಫಿನ್ಲ್ಯಾಂಡ್ ಮತ್ತು ನಾರ್ವೆ ದೇಶಗಳು ಯಾವುದೇ ಬೋಧನಾ ಶುಲ್ಕವಿಲ್ಲದೇ ಅಥವಾ ಕೈಗೆಟುಕುವ ಖರ್ಚಿನಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತವೆ. ಅತ್ಯುತ್ಕೃಷ್ಟ ಬೋಧನೆಗಾಗಿ ಹೆಸರಾಗಿರುವ ವಿಶ್ವವಿದ್ಯಾಲಯಗಳಲ್ಲಿ ಶುಲ್ಕ ಕೂಡ ಗಣನೀಯವಾಗಿ ಹೆಚ್ಚಾಗಿರುತ್ತದೆ. ನಿಮಗೆ ಸಿಗಬಹುದಾದ ಯಾವುದೇ ಹಣಕಾಸಿನ ನೆರವಿಗಾಗಿ ಮೊದಲೇ ಪರಿಶೀಲಿಸಿ. ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಜರ್ಮನಿಯ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಸ್ಥಳೀಯ ಭಾಷಾ ಜ್ಞಾನ ಹೊಂದಿರುವುದು ಅತ್ಯಗತ್ಯ. ಭಾರತದಲ್ಲಿರುವಾಗಲೇ ಅವುಗಳಲ್ಲಿ ಪ್ರಾವಿಣ್ಯವನ್ನು ಪಡೆದುಕೊಳ್ಳಿ. ಇದು ಭವಿಷ್ಯದಲ್ಲಿ ಉದ್ಯೋಗ ಪಡೆಯಲಿಕ್ಕೂ ಸಹಾಯಕಾರಿಯಾಗುತ್ತದೆ.

ಡಿಪ್ಲೊಮಾದಿಂದ ಆರಂಭಿಸಿ

ಭಾರತದಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ವಿದೇಶಿ ಅಧ್ಯಯನವನ್ನು ಸರ್ಟಿಫಿಕೆಟ್ ಕೋರ್ಸ್ ಅಥವಾ ಡಿಪ್ಲೊಮಾದೊಂದಿಗೆ ಆರಂಭಿಸಬಹುದು. ಇವು ತ್ವರಿತ ಉದ್ಯೋಗಕ್ಕಾಗಿ ನಿಮ್ಮನ್ನು ಅಣಿಗೊಳಿಸುತ್ತವೆ. ಸ್ನಾತಕ ಪೂರ್ವ ಅಧ್ಯಯನಕ್ಕೂ ಅವಕಾಶವಿದೆ. ಅಮೆರಿಕ, ಆಸ್ಟ್ರೇಲಿಯಾ, ಕೆನಡಾಗಳಲ್ಲಿ ಎರಡು ವರ್ಷದ ಅವಧಿಯ ಪದವಿಪೂರ್ವ ಅಸೋಸಿಯೇಟ್ ಪದವಿ (ಸಹವರ್ತಿ ಪದವಿ) ಕೋರ್ಸ್ಗಳಿವೆ. ಪದವೀಧರರು ಸ್ನಾತಕೋತ್ತರ ಪದವಿಗಾಗಿ ಪ್ರವೇಶ ಪಡೆಯಬಹುದು.

ನಿಮ್ಮ ಅಧ್ಯಯನಕ್ಕೆ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಾಗ, ಆ ದೇಶದಲ್ಲಿ ಅಂತಹ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳೂ ಇರುವುದನ್ನು ಗುರುತಿಸಿಕೊಳ್ಳಿ. ಪ್ರಸ್ತುತ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಕ್ಕೆ(STEM) ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದೆ. ಹಾಗೆಯೇ ಡೇಟಾ ಸೈನ್ಸ್ ಮತ್ತು ಡೇಟಾ ಅನಾಲಿಟಿಕ್ಸ್, ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಆತಿಥ್ಯ ಮತ್ತು ಪ್ರವಾಸೋದ್ಯಮ, ಕೃಷಿ ಮತ್ತು ಆಹಾರ ವಿಜ್ಞಾನ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್, ಐಟಿ ಮತ್ತು ಟೆಲಿಕಾಂ, ಬಯೋಟೆಕ್ನಾಲಜಿ, ಆರೋಗ್ಯ, ಹಣಕಾಸು ಸೇವೆಗಳನ್ನು ಅಧ್ಯಯನ ಮಾಡಿದವರಿಗೆ ವಿಪುಲವಾದ ಉದ್ಯೋಗಾವಕಾಶಗಳಿವೆ.

ವಿದೇಶಗಳಲ್ಲಿ ಓದುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತದಲ್ಲೇ ಅನೇಕ ವಿದ್ಯಾರ್ಥಿವೇತನಗಳು ಲಭ್ಯವಿವೆ. ಕೆಲವು ಬಡ್ಡಿ ರಹಿತ ಅಥವಾ ಕಡಿಮೆ ಬಡ್ಡಿಯ ಸಾಲದ ಯೋಜನೆಗಳೂ ಇವೆ. ಹಾಗೆಯೇ ಅಧ್ಯಯನ ಮಾಡುವ ದೇಶಗಳ ಸರ್ಕಾರಗಳು, ವಿಶ್ವವಿದ್ಯಾಲಯಗಳೂ ವಿದ್ಯಾರ್ಥಿ ವೇತನವನ್ನು ನೀಡುತ್ತವೆ. ಹಲವಾರು ದೇಶಗಳಲ್ಲಿ ವಿದ್ಯಾರ್ಥಿಗಳು ಕಿರಿಯರಿಗೆ ಬೋಧಕರಾಗಿ ತಾತ್ಕಾಲಿಕವಾಗಿ ಕೆಲಸ ಮಾಡಲಿಕ್ಕೂ ಅನುವು ಮಾಡಿಕೊಡುತ್ತವೆ. ಹಾಗಾಗಿ, ನಿಮ್ಮ ಖರ್ಚನ್ನು ಕೆಲವು ಮಟ್ಟಿಗೆ ಹೊಂದಿಸಬಹುದು. ಭಾರತೀಯ ವಿದ್ಯಾರ್ಥಿಗಳಿಗೆ ಲಭ್ಯವಿರುವ ಪ್ರಮುಖ ವಿದ್ಯಾರ್ಥಿವೇತನಗಳನ್ನು ನೋಡೋಣ.

ವಿದೇಶದಲ್ಲಿ ಅಧ್ಯಯನಕ್ಕೆ ಸ್ಕಾಲರ್ಷಿಪ್

ಭಾರತ ಸರ್ಕಾರದಿಂದ ಪ್ರಾಯೋಜಿತವಾದ, ಇನ್ನು ಕೆಲವು ವಿವಿಧ ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳಿಂದ ಕೊಡಲಾಗುವ ವಿದ್ಯಾರ್ಥಿ ವೇತನಗಳಿವೆ. ಇನ್ನು ಕೆಲವು ಯೋಜನೆಗಳು ಬಡ್ಡಿ ರಹಿತ ಅಥವಾ ಕಡಿಮೆ ಬಡ್ಡಿಯಲ್ಲಿ ಸಾಲ ಒದಗಿಸುತ್ತವೆ. ಒಂದೊಂದು ಯೋಜನೆಗೂ ಅದರದ್ದೇ ಆದ ನಿಯಮಗಳಿವೆ. ಉತ್ತಮ ಶೈಕ್ಷಣಿಕ ದಾಖಲೆ ಇರಬೇಕು. ಎಲ್ಲ ವಿದ್ಯಾರ್ಥಿ ವೇತನಗಳಿಗೂ ನೀವು ಅರ್ಜಿ ಸಲ್ಲಿಸುವಾಗ ಭಾರತದಲ್ಲಿ ನೆಲೆಸಿರಬೇಕಿರುವುದು ಕಡ್ಡಾಯ.

(ಮುಂದಿನವಾರ: ಇನ್ನಷ್ಟು ವಿದ್ಯಾರ್ಥಿ ವೇತನಗಳು / ಶೈಕ್ಷಣಿಕ ಸಾಲಗಳ ಕುರಿತ ವಿವರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.