ಕೆಲವು ವರ್ಷಗಳ ಹಿಂದೆ ತೆರೆ ಕಂಡ ಹಿಂದಿ ಚಲನಚಿತ್ರ ‘ಬ್ಯಾಂಡ್ ಬಾಜಾ ಬಾರಾತ್’ ನೆನಪಿರಬಹುದು. ಚಿತ್ರದ ನಾಯಕಿಯ ಅದ್ಭುತ ವ್ಯವಹಾರ ಕಲ್ಪನೆ ತುಂಬಾ ಪರಿಣಾಮ ಬೀರುವಂತಹದ್ದು. ಈ ಚಲನಚಿತ್ರದಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ (ಕಾರ್ಯಕ್ರಮ ನಿರ್ವಹಣೆ) ಎಂಬ ಪರಿಕಲ್ಪನೆಯನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ.

ಏನಿದು ಇವೆಂಟ್ ಮ್ಯಾನೇಜ್ಮೆಂಟ್?

ನಮ್ಮ ಭಾರತೀಯ ಸಮಾಜದಲ್ಲಿ ಮನೆಯಲ್ಲಿನ ಯಾವುದೇ ಶುಭ ಸಂದರ್ಭಗಳಾದ ಮದುವೆ, ಹುಟ್ಟುಹಬ್ಬದ ಆಚರಣೆ, ತಂದೆ-ತಾಯಿಯರ ಷಷ್ಟಿಪೂರ್ತಿ, ಗೃಹಪ್ರವೇಶ, ಕಾರ್ಪೊರೇಟ್ ಕಂಪನಿಗಳ ಸಾಧನೆ ಸಾರುವ ಕಾರ್ಯಕ್ರಮ, ಕಂಪನಿಯ ವಾರ್ಷಿಕೋತ್ಸವಗಳ ಆಚರಣೆಗಾಗಿ, ಸಂಬಂಧಿಕರನ್ನು, ಸ್ನೇಹಿತರನ್ನು, ಉದ್ಯೋಗಿಗಳನ್ನು ಆಮಂತ್ರಿಸಿ ಸಂಭ್ರಮ ಪಡುವುದು ಸಂಪ್ರದಾಯ. ಇಂತಹ ಸಂದರ್ಭಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿ, ನಿರ್ವಹಿಸಿ ಕೆಲವರು ಈ ಕ್ಷೇತ್ರದಲ್ಲಿ ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ.

ಈ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಲು ಇವೆಂಟ್ ಮ್ಯಾನೇಜ್ಮೆಂಟ್ನಲ್ಲಿ ಎಂ.ಬಿ.ಎ. ಖಂಡಿತ ಸಹಾಯ ಮಾಡಬಲ್ಲದು.

ಯಾವ ತರಹದ ಕಾರ್ಯಕ್ರಮಗಳನ್ನು ನಿರ್ವಹಿಸಬಹುದು?

ಸಾಮಾಜಿಕ ಸಂದರ್ಭಗಳು

l ವಿವಾಹ ನಿರ್ವಹಣೆ

l ಹುಟ್ಟುಹಬ್ಬ ನಿರ್ವಹಣೆ

l ವಾರ್ಷಿಕೋತ್ಸವಗಳು

l ಸಾಮಾಜಿಕ ಸಭೆಗಳು

ಶೈಕ್ಷಣಿಕ ಸಂದರ್ಭಗಳು

l ಶೈಕ್ಷಣಿಕ ಜಾತ್ರೆ

l ಕಾಲೇಜಿನ ವಾರ್ಷಿಕೋತ್ಸವ

l ವಾರ್ಷಿಕ ಕ್ರೀಡಾಕೂಟ

ಕಂಪನಿಗಳಿಗೆ ಸಂಬಂಧಪಟ್ಟ ಅಥವಾ ಕಾರ್ಪೊರೇಟ್ ಇವೆಂಟ್ಸ್

l ಸೆಮಿನಾರ್ಗಳು

l ತರಬೇತಿ ಕಾರ್ಯಕ್ರಮಗಳು

l ವಾರ್ಷಿಕ ಕಿರುಪ್ರವಾಸಗಳು

l ಸನ್ಮಾನ ಸಮಾರಂಭಗಳು

ವಸ್ತು ಪ್ರದರ್ಶನ ಅಥವಾ ಜಾತ್ರೆಗಳು

ಎಲೆಕ್ಟ್ರಾನಿಕ್ ಉಪಕರಣಗಳ ಪ್ರದರ್ಶನ, ಉದ್ಯೋಗ ಮೇಳ: ಮನರಂಜನೆಗೆ ಸಂಬಂಧಪಟ್ಟ ಸಂದರ್ಭಗಳು, ಚಲನಚಿತ್ರ ಪ್ರಚಾರ, ಸೆಲೆಬ್ರಿಟಿಗಳ ಕಾರ್ಯಕ್ರಮ, ಸಂಗೀತದ ಆಡಿಯೊ ಸಿ.ಡಿ ಬಿಡುಗಡೆ ಸಮಾರಂಭ, ಪ್ಯಾಷನ್ ಶೋ, ಸೌಂದರ್ಯ ಸ್ಪರ್ಧೆಯ ಆಯೋಜನೆ, ಸ್ಟೇಜ್ ಶೋ

ಮಾರ್ಕೆಟಿಂಗ್ ಹಾಗೂ ಪ್ರಚಾರ: ಜಾಹೀರಾತು ಕ್ಯಾಂಪೇನ್, ನವನವೀನ ಉತ್ಪನ್ನ ಬಿಡುಗಡೆ, ರೋಡ್ ಶೋ ಮತ್ತು ಪ್ರಮೋಷನ್ ಚಟುವಟಿಕೆಗಳು.

ಒಬ್ಬ ಇವೆಂಟ್ ಮ್ಯಾನೇಜರ್ ಅಥವಾ ಕೋ ಆರ್ಡಿನೇಟರ್ ಹೊಂದಿರಬೇಕಾಗಿರುವ ಅಥವಾ ಉದ್ಯಮ ಅಪೇಕ್ಷೆಪಡುವ ಕೌಶಲಗಳು.

l ಅಂತರ್ ವ್ಯಕ್ತಿ ಕೌಶಲಗಳು

l ಉತ್ಸಾಹ

l ಕ್ರಿಯಾಶೀಲತೆ ಹಾಗೂ ನಾವೀನ್ಯತೆ

l ಕಾರ್ಯಕ್ರಮದ ಪ್ರತಿ ವಿಷಯದ ವಿವರ ಇರಬೇಕು.

l ಸಮಯ ನಿರ್ವಹಣೆ ಕೌಶಲ

l ಉತ್ತಮ ನಾಯಕತ್ವ ಗುಣ

l ಅತ್ಯುತ್ತಮ ಸಂಘಟನಾ ಚತುರತೆ

l ಇತ್ತೀಚಿನ ತಂತ್ರಜ್ಞಾನ ಬಳಕೆಯ ಕೌಶಲ್ಯ

ಯಾವ ಯಾವ ಕೋರ್ಸ್ ಲಭ್ಯ?

ಇವೆಂಟ್ ಮ್ಯಾನೇಜ್ಮೆಂಟ್ನಲ್ಲಿ ಎಂ.ಬಿ.ಎ. ಇದು ಸ್ನಾತಕೋತ್ತರ ಮ್ಯಾನೇಜ್ಮೆಂಟ್ ಕೋರ್ಸ್. ಈ ಕ್ಷೇತ್ರಕ್ಕೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಕಂಪನಿಗಳು ಕೌಶಲ ಹೊಂದಿದ ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮಣೆ ಹಾಕುತ್ತಿದ್ದಾರೆ. ಇದು ಎರಡು ವರ್ಷದ ಹಾಗೂ ನಾಲ್ಕು ಸೆಮಿಸ್ಟರ್ಗಳ ಕೋರ್ಸ್.

ಹಾಗೆಯೇ ಒಂದು ವರ್ಷದ ಡಿಪ್ಲೋಮಾ ಕೋರ್ಸ್ ಕೂಡ ಲಭ್ಯವಿದೆ.

ಯಾವ ವಿಷಯಗಳಲ್ಲಿ ತರಬೇತಿ ನೀಡಲಾಗುವುದು?

l ಅರ್ಥಶಾಸ್ತ್ರ ಹಾಗೂ ನಿರ್ವಹಣಾ ನಿರ್ಧಾರಗಳು

l ಅಂಕಿ ಅಂಶ

l ವ್ಯವಹಾರ ಸಂವಹನ ಹಾಗೂ ಸಮಾಲೋಚನಾ ಕೌಶಲ್ಯ

l ಆರ್ಗನೈಜೇಶನ್ ಬಿಹೇವಿಯರ್

l ಮಾರುಕಟ್ಟೆ ನಿರ್ವಹಣೆ

l ಇವೆಂಟ್ ಮ್ಯಾನೇಜ್ಮೆಂಟ್ ಮೂಲತತ್ವಗಳು

l ಲೆಕ್ಕಶಾಸ್ತ್ರ

l ಹಣಕಾಸು ನಿರ್ವಹಣೆ

l ಕಾರ್ಯಕ್ರಮ ಆಯೋಜಿಸುವ ಚಾತುರ್ಯ

l ಮಾಧ್ಯಮದ ಜೊತೆ ಸಂಪರ್ಕ

l ಅಗತ್ಯ ಕೌಶಲಗಳ ಅಭಿವೃದ್ಧಿ

l ನಿರಂತರ ಕಲಿಕೆ

l ಉದ್ಯಮದೊಂದಿಗೆ ನಿರಂತರ ಸಂಪರ್ಕ

l ಉದ್ಯಮದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿರುವವರನ್ನು ಸಂಸ್ಥೆಗೆ ಆಮಂತ್ರಿಸಿ ವಿದ್ಯಾರ್ಥಿಗಳಿಗೆ ಅವರಿಂದ ತರಬೇತಿ ನೀಡಲಾಗುವುದು.

ಯಾವ ಯಾವ ಹುದ್ದೆಗಳನ್ನು ನಿರೀಕ್ಷಿಸಬಹುದು?

l ಮ್ಯಾನೇಜ್ಮೆಂಟ್ ಟ್ರೈನಿ

l ಮೇಲ್ವಿಚಾರಕರು

l ಕಾರ್ಯಕ್ರಮ ನಿರ್ದೇಶಕರು

l ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರು

ಈ ಕೋರ್ಸ್ ಕಲಿಸುವ ಹಾಗೂ ತರಬೇತಿ ನೀಡುವ ದೇಶದ ಪ್ರತಿಷ್ಠಿತ ಸಂಸ್ಥೆಗಳು

l ನ್ಯಾಷನಲ್ ಅಕಾಡೆಮಿ ಆಫ್ ಇವೆಂಟ್ ಮ್ಯಾನೇಜ್ಮೆಂಟ್ ಅಂಡ್ ಡೆವಲಪ್ಮೆಂಟ್ ಮುಂಬೈ, ದೆಹಲಿ ಹಾಗೂ ಜೈಪುರ.

l ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಲರ್ನಿಂಗ್ ಅಂಡ್ ಅಡ್ವಾನ್ಸ್ಡ್ ಡೆವಲಪ್ಮೆಂಟ್. (ಮುಂಬೈ, ದೆಹಲಿ, ಬೆಂಗಳೂರು, ಇಂದೋರ್)

l ಇ.ಎಂ.ಡಿ.ಐ. ಇನ್ಸ್ಟಿಟ್ಯೂಟ್ ಆಫ್ ಇವೆಂಟ್ ಮ್ಯಾನೇಜ್ಮೆಂಟ್, ನವದೆಹಲಿ.

l ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇವೆಂಟ್ ಮ್ಯಾನೇಜ್ಮೆಂಟ್ ಅಹಮದಾಬಾದ್, ಕೊಲ್ಹಾಪುರ, ಪುಣೆ, ಭುವನೇಶ್ವರ ಮತ್ತು ಜೋಧ್ಪುರ.

l ನ್ಯಾಷನಲ್ ಅಕಾಡೆಮಿ ಆಫ್ ಮೀಡಿಯಾ ಅಂಡ್ ಇವೆಂಟ್ಸ್, ಕೊಲ್ಕತ್ತಾ.

ವೇತನ ಹಾಗೂ ಭತ್ಯೆ

ಈ ಕ್ಷೇತ್ರದಲ್ಲಿ ಎಂ.ಬಿ.ಎ. ಪದವಿ ಅಥವಾ ಡಿಪ್ಲೋಮಾ ಹೊಂದಿದವರು ಆರಂಭದಲ್ಲಿ ₹ 3.5– 5 ಲಕ್ಷದವರೆಗಿನ ವೇತನ ಅಪೇಕ್ಷಿಸಬಹುದು. ಕ್ರೀಯಾಶೀಲತೆ ಹಾಗೂ ಅನುಭವವಿದ್ದವರು, ತಮ್ಮ ಕೌಶಲದಿಂದ ಕಂಪನಿಗೆ ಹೆಚ್ಚಿನ ಲಾಭ ಹಾಗೂ ಹೆಸರು ತಂದು ಕೊಟ್ಟಲ್ಲಿ, ಅವರ ವೇತನಶ್ರೇಣಿ ತುಂಬಾ ಕಡಿಮೆ ಸಮಯದಲ್ಲಿಯೇ ಹೆಚ್ಚಾಗಬಹುದು.

(ಲೇಖಕರು ಸಹಾಯಕ ಪ್ರಾಧ್ಯಾಪಕರು, ಎಂ.ಬಿ.ಎ. ವಿಭಾಗ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.