ಪ್ರದೀಪ್ ವೆಂಕಟರಾಮ್

ಭವಿಷ್ಯದ ವೃತ್ತಿ ಬೇಡಿಕೆಯನ್ನು ಖಚಿತವಾಗಿ ಅಂದಾಜಿಸುವುದು ಕಷ್ಟ. ಆದರೂ, ಒಂದಷ್ಟು ಅನುಭವವಾಧಾರಿತವಾಗಿ ಯೋಚಿಸುವುದಾದರೆ, ಆರೋಗ್ಯ, ವಿಜ್ಞಾನ–ತಂತ್ರಜ್ಞಾನ, ಮಾರುಕಟ್ಟೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಭವಿಷ್ಯದಲ್ಲೂ ಹೆಚ್ಚಿನ ವೃತ್ತಿ ಬೇಡಿಕೆಯನ್ನು ನಿರೀಕ್ಷಿಸಬಹುದು.

ಇತ್ತೀಚೆಗೆ ವಿದ್ಯಾರ್ಥಿಗಳೊಡನೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಒಂಬತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆ; ‘ಮುಂದಿನ ಹತ್ತು ವರ್ಷಗಳಲ್ಲಿ ಯಾವ ವೃತ್ತಿಗಳು ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿರುತ್ತವೆ ?’

ಮಕ್ಕಳ ಕುತೂಹಲಕಾರಿ ಪ್ರಶ್ನೆ, ವಿಮರ್ಶಾತ್ಮಕವಾಗಿಯೂ ಇತ್ತು. ಭವಿಷ್ಯದ ಬಗೆಗಿನ ಅವರ ಚಿಂತನೆ, ಸಂವಾದದಲ್ಲಿ ಆರೋಗ್ಯಕರ ಚರ್ಚೆಯನ್ನೂ ಹುಟ್ಟು ಹಾಕಿತು.

ಆದರೆ ಈ ಪ್ರಶ್ನೆಗೆ ’ಇದ ಮಿತ್ತಂ‘ ಎನ್ನುವಂತೆ ಉತ್ತರಿಸುವುದು ತುಸು ಕಷ್ಟವೇ. ಏಕೆಂದರೆ, ತಂತ್ರಜ್ಞಾನದ ಅಭಿವೃದ್ಧಿ, ಅಲ್ಲಲ್ಲಿ ನಡೆಯುತ್ತಿರುವ ಆವಿಷ್ಕಾರಗಳು, ಗ್ರಾಹಕರ ಆದ್ಯತೆಗಳು, ಜಾಗತಿಕ ಪರಿಸ್ಥಿತಿ, ಸರ್ಕಾರದ ನೀತಿಗಳಲ್ಲಾಗುತ್ತಿರುವ ಬದಲಾವಣೆ.. ಇಂಥ ಹಲವು ಅಂಶಗಳು ಉದ್ಯೋಗ ಕ್ಷೇತ್ರದ ಮೇಲೆ ತುಂಬಾ ಪ್ರಭಾವ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ವೃತ್ತಿ ಬೇಡಿಕೆಯನ್ನು ಖಚಿತವಾಗಿ ಅಂದಾಜಿಸುವುದು ಕಷ್ಟ. ಆದರೂ, ಒಂದಷ್ಟು ಅನುಭವವಾಧಾರಿತವಾಗಿ ಯೋಚಿಸುವುದಾದರೆ, ಆರೋಗ್ಯ, ವಿಜ್ಞಾನ–ತಂತ್ರಜ್ಞಾನ, ಮಾರುಕಟ್ಟೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಭವಿಷ್ಯದಲ್ಲೂ ಹೆಚ್ಚಿನ ವೃತ್ತಿ ಬೇಡಿಕೆಯನ್ನು ನಿರೀಕ್ಷಿಸಬಹುದು. ಅಂಥ ಐದು ಕ್ಷೇತ್ರಗಳ ಕುರಿತು ಇಲ್ಲಿ ಮಾಹಿತಿ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.

1. ಆರೋಗ್ಯ ಕ್ಷೇತ್ರ:

ಜನಸಂಖ್ಯೆ ಹೆಚ್ಚಳ, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿ, ನೈಸರ್ಗಿಕ ವಿಪತ್ತುಗಳು – ಇಂಥ ಹಲವು ಬೆಳವಣಿಗಳು ಆರೋಗ್ಯ ಕ್ಷೇತ್ರಕ್ಕೆ ವೃತ್ತಿಪರ ಸಿಬ್ಬಂದಿಯ ಅವಶ್ಯಕತೆಯನ್ನು ಸೃಷ್ಟಿಸುತ್ತವೆ. ಜೊತೆಗೆ, ಆರೋಗ್ಯ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಸಮನ್ವಯತೆಯಿಂದ ನೂತನ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಉದಾಹರಣೆಗೆ ವಿನೂತನ ಔಷಧಿಗಳ ಅನ್ವೇಷಣೆ, ಟೆಲಿಮೆಡಿಸಿನ್, ರೋಗಗಳನ್ನು ತಡೆಗಟ್ಟುವ ಮುಂಜಾಗೃತಾ ಕ್ರಮಗಳು, ಜೀವನ ಶೈಲಿಯ ಸುಧಾರಣೆಗಳು ಇತ್ಯಾದಿ. ಹಾಗಾಗಿ, ವೈದ್ಯರು, ಮನೋವಿಜ್ಞಾನಿಗಳು, ತಂತ್ರಜ್ಞರು, ದಾದಿಯರು, ಔಷಧಿಕಾರರು, ಆರೋಗ್ಯ ನಿರ್ವಾಹಕರು ಮುಂತಾದ ವೃತ್ತಿಪರರಿಗೆ ಬೇಡಿಕೆ ಇರುತ್ತದೆ.

ಈ ಕ್ಷೇತ್ರದಲ್ಲಿ ವೃತ್ತಿ ಪಡೆಯಲು ಕೆಲವೊಂದು ಪ್ರಮುಖ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಪ್ರಮುಖವಾಗಿ ವೃತ್ತಿಯ ಬಗ್ಗೆ ಒಲವು, ಸೇವಾ ಮನೋಭಾವ, ಜ್ಞಾಪಕ ಶಕ್ತಿ, ನಿಷ್ಠೆ, ಪ್ರಾಮಾಣಿಕತೆ, ಅನುಭೂತಿ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಇತ್ಯಾದಿ.

ಏನೇನು ಕೋರ್ಸ್ ಓದಬಹುದು: ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಎನ್‌ವೈಎಸ್, ಬಿ.ಫಾರ್ಮಾ, ಬಿ.ಎಸ್ಸಿ (ಮೆಡಿಕಲ್, ಆರೋಗ್ಯ ಮತ್ತು ಸ್ವಾಸ್ಥ್ಯ ಸಂಬಂಧಿತ) ಇತ್ಯಾದಿ. ನರ್ಸಿಂಗ್, ಲ್ಯಾಬ್ ಟೆಕ್ನೀಷಿಯನ್ಸ್‌ಗಳಂತಹ ಪ್ಯಾರಾ ಮೆಡಿಕಲ್ ಕೋರ್ಸ್‌ಗಳು, ಫಾರ್ಮಸಿಯಂತಹ ಡಿಪ್ಲೊಮಾ ಮತ್ತು ಪದವಿ ಕೋರ್ಸ್‌ಗಳು.

2. ವಿಜ್ಞಾನ/ತಂತ್ರಜ್ಞಾನ

ಎಂಜಿನಿಯರಿಂಗ್ ಕ್ಷೇತ್ರದ ಕೃತಕ ಬುದ್ಧಿಮತ್ತೆ(ಎಐ), ಮಷೀನ್ ಲರ್ನಿಂಗ್, ಡೇಟಾ ಸೈನ್ಸ್, ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ರೊಬೋಟಿಕ್, ನವೀಕರಿಸಬಹುದಾದ ಇಂಧನ, ಪರಿಸರ (ಎನ್ವಿರಾನ್‌ಮೆಂಟಲ್), ಬಯೋಮೆಡಿಕಲ್ – ಈ ವಿಭಾಗಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ ಎಂದು ನಿರೀಕ್ಷಿಸಬಹುದು. ಇದರರ್ಥ ಇನ್ನಿತರ ವಿಭಾಗಗಳಿಗೆ ಬೇಡಿಕೆ ಇರುವುದಿಲ್ಲ ಎಂದಲ್ಲ. ಎಂಜಿನಿಯರಿಂಗ್ ಕ್ಷೇತ್ರದ ಎಲ್ಲಾ ವಿಭಾಗಗಳಿಗೆ ಬೇಡಿಕೆ ಇರುತ್ತದೆಯಾದರೂ, ಆಯಾ ವಿಭಾಗಗಳ ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಜೊತೆಗೆ ವೃತ್ತಿಪರ ವ್ಯಕ್ತಿತ್ವ ಮತ್ತು ಕೌಶಲಗಳೊಂದಿಗೆ ಪದವೀಧರರಾಗಬೇಕು. ಮೂಲ ಸೌಕರ್ಯಗಳು ಮತ್ತು ಕ್ಯಾಂಪಸ್ ನೇಮಕಾತಿಯಿರುವ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಧ್ಯಯನ ಮಾಡುವುದರಿಂದ, ಭವಿಷ್ಯವನ್ನು ರೂಪಿಸಿಕೊಳ್ಳುವುದು ಸುಲಭವಾಗುತ್ತದೆ.

ಈಗ ಎಂಜಿನಿಯರಿಂಗ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಆಯ್ಕೆಗಳಿದ್ದು, ನಿಮ್ಮ ಆಸಕ್ತಿ, ಅಭಿರುಚಿಯಂತೆ ವಿಭಾಗವನ್ನು ಆಯ್ಕೆ ಮಾಡುವುದು ಸೂಕ್ತ. ವೃತ್ತಿಯೋಜನೆಯ ಗುರಿಯನ್ನು ಸಾಧಿಸಲು ಎಂಜಿನಿಯರಿಂಗ್ ಅಲ್ಲದೆ ಬಿ.ಎಸ್ಸಿ ಕೋರ್ಸ್ ಮೂಲಕ ಪರ್ಯಾಯ ಮಾರ್ಗಗಳೂ ಇವೆ ಎನ್ನುವುದು ನಿಮ್ಮ ಗಮನದಲ್ಲಿರಲಿ.

ಇತ್ತೀಚೆಗೆ ಐಟಿಐ, ಡಿಪ್ಲೊಮಾ ಹಂತದಲ್ಲಿ ಪ್ರಾಥಮಿಕವಾಗಿ ರೊಬೊಟಿಕ್ ಸೈನ್ಸ್, ಮಷಿನ್ ಲರ್ನಿಂಗ್ ಲ್ಯಾಂಗ್ವೇಜ್, 3ಡಿ ಯಂತಹ ಎಂಜಿನಿಯರಿಂಗ್ ಪದವಿ ಕೋರ್ಸ್‌ಗಳನ್ನು ಕಲಿಸಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಯೋಜನೆಯಡಿ ಜಿಟಿಟಿಸಿಯಂತಹ ಸರ್ಕಾರಿ ಸಂಸ್ಥೆಗಳು, ಉದ್ಯೋಗಾಧಾರಿತ ಕೋರ್ಸ್‌ಗಳನ್ನು ಆರಂಭಿಸಿವೆ.

ವಿಜ್ಞಾನ/ತಂತ್ರಜ್ಞಾನ ಕುರಿತ ಸಂಶೋಧನೆ ಕ್ಷೇತ್ರಕ್ಕೂ ಬೇಡಿಕೆಯನ್ನು ನಿರೀಕ್ಷಿಸಬಹುದು. ಹಾಗಾಗಿ, ಈ ಕ್ಷೇತ್ರದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ನಾಲ್ಕು ವರ್ಷದ ಬಿ.ಎಸ್ಸಿ ಪದವಿಯ ನಂತರ ಪಿಎಚ್.ಡಿ ಮಾಡಬಹುದು.

ಪ್ರಮುಖ ಕೌಶಲಗಳು: ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿವರಗಳಿಗೆ ಗಮನ ಇತ್ಯಾದಿ.

ಮಾಡಬಹುದಾದ ಕೋರ್ಸ್‌ಗಳು: ಬಿ.ಇ/ಬಿ.ಟೆಕ್/ಬಿಸಿಎ/ಬಿ.ಎಸ್ಸಿ/ಎಂ.ಎಸ್ಸಿ/ಎಂಸಿಎ /ಎಂ.ಇ/ಎಂ.ಟೆಕ್/ಎಂ.ಎಸ್/ಪಿಎಚ್.ಡಿ.

3. ಶಿಕ್ಷಣ ಕ್ಷೇತ್ರ:

ಮೂಲಗಳ ಪ್ರಕಾರ ದೇಶದಲ್ಲಿ ಪ್ರಸ್ತುತ ಸುಮಾರು ಒಂದು ದಶಲಕ್ಷ ಶಿಕ್ಷಕರ ಕೊರತೆ ಇದೆ. ಜೊತೆಗೆ, ಶಿಕ್ಷಣ ನೀತಿಯಲ್ಲಿನ ಅಮೂಲಾಗ್ರ ಬದಲಾವಣೆಗಳು, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಶಾಲೆಗಳಿಗೆ ಒಟ್ಟು ದಾಖಲಾತಿಯ ಅನುಪಾತ (ಜಿಇಆರ್-ಗ್ರಾಸ್ ಎನ್‌ರೋಲ್‌ಮೆಂಟ್ ರೇಷಿಯೊ) ಹೆಚ್ಚಾಗುವ ನಿರೀಕ್ಷೆಯಿಂದ ಶಿಕ್ಷಕರು, ಉಪನ್ಯಾಸಕರು, ತರಬೇತುದಾರರಿಗೆ ಬೇಡಿಕೆಯನ್ನು ನಿರೀಕ್ಷಿಸಬಹುದು.

ಪ್ರಮುಖ ಕೌಶಲಗಳು: ವಿಷಯದ ತಜ್ಞತೆ, ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ವೃತ್ತಿಯ ಬಗ್ಗೆ ಒಲವು.

ಮಾಡಬಹುದಾದ ಕೋರ್ಸ್‌ಗಳು: ಎಲ್ಲಾ ವಿಭಾಗಗಳ ಪದವಿ/ಸ್ನಾತಕೋತ್ತರ ಕೋರ್ಸ್‌ಗಳು, ಬಿ.ಇಡಿ, ಬಿ.ಇಡಿ (ಇಂಟಿಗ್ರೇಟೆಡ್), ಪಿಎಚ್.ಡಿ

4. ಮಾರ್ಕೆಟಿಂಗ್ ( ರೀಟೇಲ್, ಇ-ಕಾಮರ್ಸ್ ಇತ್ಯಾದಿ):

ಚಿಲ್ಲರೆ ವ್ಯಾಪಾರ (ರೀಟೇಲ್) ಕ್ಷೇತ್ರ ದೇಶದ ಒಟ್ಟು ಉತ್ಪಾದನೆಯ (ಜಿಡಿಪಿ) ಶೇಕಡ 10ರಷ್ಟಿದ್ದು, ಒಟ್ಟಾರೆ ಶೇ 8ರಷ್ಟು ಉದ್ಯೋಗವನ್ನು ಸೃಷ್ಟಿಸಿದೆ. ಮುಂದಿನ ವರ್ಷಗಳಲ್ಲಿ, ಈ ಕ್ಷೇತ್ರಗಳಲ್ಲಿ ವ್ಯಾಪಕವಾದ, ತ್ವರಿತವಾದ ಪ್ರಗತಿ ನಿರೀಕ್ಷಿಸಬಹುದು. ಮಾರ್ಕೆಟಿಂಗ್, ಲಾಜಿಸ್ಟಿಕ್ಸ್ ಮತ್ತು ಗ್ರಾಹಕ ಸೇವೆಯಂತಹ ಕ್ಷೇತ್ರಗಳಲ್ಲಿ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯಿರುತ್ತದೆ.

ಪ್ರಮುಖ ಕೌಶಲಗಳು: ವೃತ್ತಿಯ ಬಗ್ಗೆ ಒಲವು, ವ್ಯವಹಾರ ಕೌಶಲ, ಸಂವಹನ, ಕ್ಷಿಪ್ರ ಗ್ರಹಿಕೆ, ಸಮಯ ಪ್ರಜ್ಞೆ ಇತ್ಯಾದಿ.

ಮಾಡಬಹುದಾದ ಕೋರ್ಸ್‌ಗಳು: ಎಲ್ಲಾ ವಿಭಾಗಗಳ ಪದವಿ ಕೋರ್ಸ್ಗಳು, ಬಿಬಿಎ/ಎಂಬಿಎ, ಕೌಶಲಾಭಿವೃದ್ಧಿ ಕೋರ್ಸ್‌ಗಳು.

5. ಹಣಕಾಸು ಕ್ಷೇತ್ರ :

ಹಣಕಾಸು ವಿಶ್ಲೇಷಕರು, ಅಕೌಂಟೆಂಟ್‌ಗಳು ಮತ್ತು ಹೂಡಿಕೆ ಬ್ಯಾಂಕರ್‌ಗಳಂತಹ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯೊಂದಿಗೆ, ಭಾರತದಲ್ಲಿ ಹಣಕಾಸು ಕ್ಷೇತ್ರದ ಬೆಳವಣಿಗೆಯ ಮುಂದುವರೆಯುವ ನಿರೀಕ್ಷೆಯಿದೆ.

ಪ್ರಮುಖ ಕೌಶಲಗಳು: ನಿಯಮ ಮತ್ತು ನಿಬಂಧನೆಗಳ ಅರಿವು, ವಿಷಯದ ತಜ್ಞತೆ, ಯೋಜನಾ ಸಾಮರ್ಥ್ಯ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ, ಪ್ರಾಮಾಣಿಕತೆ ಇತ್ಯಾದಿ.

ಮಾಡಬಹುದಾದ ಕೋರ್ಸ್‌ಗಳು: ಬಿ.ಕಾಂ, ಎಂ.ಕಾಂ, ಸಿಎ, ಎಸಿಎಸ್, ಸಿಎಂಎ, ಎಂಬಿಎ ಇತ್ಯಾದಿ.

(ಲೇಖಕರು ಶಿಕ್ಷಣ ತಜ್ಞರು ಮತ್ತು ವೃತ್ತಿ ಸಲಹೆಗಾರರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.