ಮಕ್ಕಳೇ, ಕಳೆದ ಆರು ತಿಂಗಳಿನಿಂದ ನೀವೆಲ್ಲರೂ ಶಾಲೆಯಲ್ಲಿ ನಿಮ್ಮ ತರಗತಿಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಪಠ್ಯವಸ್ತುವಿನಲ್ಲಿರುವ ಪಾಠಗಳನ್ನು ಕಲಿಯುವುದರಲ್ಲಿ ತೀವ್ರವಾಗಿ ನಿಮ್ಮನ್ನು ತೊಡಗಿಸಿಕೊಂಡಿದ್ದೀರಲ್ಲವೆ? ನಿಮ್ಮ ಶಿಕ್ಷಕರು ಎಲ್ಲ ವಿಷಯಗಳಲ್ಲಿ ಬಹುತೇಕ ಪಾಠಗಳನ್ನು ಮುಗಿಸಿರಬಹುದು. ಕೆಲವು ಪಾಠಗಳು ಮುಗಿಯುವ ಹಂತದಲ್ಲಿರಬಹುದು ಅಲ್ಲವೆ? ಇದರ ಜೊತೆಗೆ, ಪಾಠಗಳಿಗೆ ಸಂಬಂಧಿಸಿದ ಹಲವಾರು ಚಟುವಟಿಕೆಗಳಲ್ಲಿಯೂ ನೀವು ಸಕ್ರಿಯವಾಗಿ ಭಾಗವಹಿಸಿದ್ದೀರಿ.

ವಿವಿಧ ಬಗೆಯ ಕ್ರೀಡೆಗಳಲ್ಲಿ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ನಿಮ್ಮ ಪ್ರಾವೀಣ್ಯವನ್ನೂ ಪ್ರದರ್ಶಿಸಿದ್ದೀರಿ. ಶಾಲೆಯಲ್ಲಿ ಹಲವು ಕಿರುಪರೀಕ್ಷೆಗಳನ್ನು ಬರೆದಿದ್ದೀರಿ. ಇದೀಗ, ಕಲಿಕೆಯಲ್ಲಿನ ನಿಮ್ಮ ಏಕತಾನತೆಯನ್ನು ದೂರಮಾಡುವ ಒಂದು ಸಣ್ಣ ರಜಾ ಅವಧಿ ಬಂದಿದೆಯಲ್ಲವೇ? ಸುಮಾರು ಒಂದು ವಾರ ಅವಧಿಯ ಈ ಕ್ರಿಸ್‍ಮಸ್ ರಜೆಯನ್ನು ಬರಿಯ ವಿಶ್ರಾಂತಿ, ವಿರಾಮಗಳಿಗೆ ಬಳಸಿಕೊಳ್ಳುವ ಬದಲು ಉಪಯುಕ್ತವಾಗಿ ಕಳೆಯುವ ನಿಟ್ಟಿನಲ್ಲಿ ಯೋಚಿಸಬಹುದಲ್ಲವೆ? ಈ ರಜಾ ಅವಧಿಯನ್ನು ನಿಮ್ಮ ಅಧ್ಯಯನಕ್ಕೆ ಪೂರಕವಾಗಿ ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದೆಂಬ ಬಗ್ಗೆ ಬೆಳಕು ಚೆಲ್ಲುವುದೇ ಈ ಲೇಖನದ ಉದ್ದೇಶ.

ರಜೆಯ ಅವಧಿಗೊಂದು ವೇಳಾಪಟ್ಟಿ ಹಾಕಿಕೊಳ್ಳಿ

ಪ್ರತಿನಿತ್ಯ ನೀವು ನಿಮ್ಮ ಶಾಲೆಯಲ್ಲಿ ಆರರಿಂದ ಏಳು ಗಂಟೆಯ ಅವಧಿಯನ್ನು ಪಾಠ–ಪ್ರವಚನಗಳಲ್ಲಿ ಕಳೆಯುತ್ತಿದ್ದಿರಿ. ಈ ಸಮಯವನ್ನು ಈಗ ಮನೆಯಲ್ಲಿ ಅಧ್ಯಯನ ಮಾಡುವುಕ್ಕಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಒಂದು ವೇಳಾಪಟ್ಟಿಯನ್ನು ಹಾಕಿಕೊಳ್ಳಿ. ಪೂರ್ವಾಹ್ನದ ಅವಧಿಯನ್ನು ಓದುವುದಕ್ಕೇ ಮೀಸಲಿಡಿ. ಮಧ್ಯಾಹ್ನದ ಅವಧಿಯನ್ನು ನೀವು ಅಧ್ಯಯನ ಮಾಡಿದ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಿಡಿಸುವುದಕ್ಕೆ ಇಲ್ಲವೇ ಚಿತ್ರಗಳನ್ನು ಅಭ್ಯಾಸ ಮಾಡಲು ಬಳಸಿಕೊಳ್ಳಿ ಅಥವಾ ಗಣಿತದಂಥ ವಿಷಯದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಬಿಡಿಸಲು ಈ ಸಮಯವನ್ನು ಮಿಸಲಿಡಿ.

ಹೀಗೆ ಮಾಡುವುದರಿಂದ ಈ ರಜಾ ಅವಧಿಯಲ್ಲಿ ನಿಮಗೆ ಎಲ್ಲ ವಿಷಯಗಳಲ್ಲಿ ಆಗಿರುವ ಪಾಠಗಳನ್ನು ಪುನರ್ಮನನ ಮಾಡಿಕೊಂಡಂತಾಗುತ್ತದೆ. ಪ್ರತಿ ಒಂದು ಗಂಟೆಯ ಓದಿನ ನಂತರ 5ರಿಂದ 10 ನಿಮಿಷಗಳ ಕಡ್ಡಾಯ ವಿಶ್ರಾಂತಿ ಪಡೆಯಿರಿ. ಓದುವ ಸಂದರ್ಭದಲ್ಲಿ ಮೊಬೈಲ್, ಟಿ.ವಿ., ಲ್ಯಾಪ್‍ಟಾಪ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳಿಂದ ಮತ್ತು ಸೋಷಿಯಲ್ ಮೀಡಿಯಾಗಳಿಂದ ಆಕರ್ಷಿತರಾಗಬೇಡಿ. ಪ್ರತಿದಿನ ಸಂಜೆಯ ಹೊತ್ತು ಒಂದೆರಡು ತಾಸು ಬೇರಾವುದಾದರೂ ಉಪಯುಕ್ತ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ವ್ಯರ್ಥ ಕಾಲಹರಣವಾಗದಂತೆ ಎಚ್ಚರ ವಹಿಸಿ. ಕಳೆದುಹೋದ ಸಮಯವನ್ನು ಮರಳಿ ಪಡೆಯುವುದು ಸಾಧ್ಯವಿಲ್ಲ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಿ.

ನಿಮ್ಮ ಈ ಓದು ಪೂರ್ವಸಿದ್ಧತಾ ಪರೀಕ್ಷೆಗೆ ತಯಾರಿಯಾಗಲಿ

ಕ್ರಿಸ್‍ಮಸ್ ರಜೆ ಮುಗಿಯುತ್ತಿದ್ದಂತೆ ನಿಮಗೆ ಪೂರ್ವಸಿದ್ಧತಾ ಪರೀಕ್ಷೆಗಳ ಸರಣಿ ಪ್ರಾರಂಭವಾಗುತ್ತದೆಯಲ್ಲವೇ? ಹೀಗಾಗಿ, ಈ ರಜಾ ಅವಧಿಯ ನಿಮ್ಮ ಓದಿಗೆ, ಮುಂದೆ ಬರಲಿರುವ ಪೂರ್ವಸಿದ್ಧತಾ ಪರೀಕ್ಷೆಯನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಈ ಪರೀಕ್ಷೆಗಳಲ್ಲಿನ ನಿಮ್ಮ ಸಾಧನೆ ನಿಮ್ಮ ಅಂತಿಮ ಪರೀಕ್ಷೆಯ ತಯಾರಿಗೆ ಅಗತ್ಯವಾದ ಪ್ರೇರೇಪಣೆ ಹಾಗೂ ಮಾನಸಿಕ ಸಿದ್ಧತೆಯನ್ನು ನಿಮಗೆ ಒದಗಿಸುತ್ತದೆ. ಜೊತೆಗೆ, ಯಾವ ವಿಷಯಗಳಲ್ಲಿ ನಿಮ್ಮ ತಯಾರಿ ಪರಿಪೂರ್ಣವಾಗಿದೆ, ಯಾವ ವಿಷಯಗಳಿಗೆ ನೀವು ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂಬಿತ್ಯಾದಿ ಅಂಶಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ನೆರವಾಗುತ್ತದೆ. ಹೀಗೆ ಮಾಡುವುದರಿಂದ ಅಂತಿಮ ಪರೀಕ್ಷೆಗೆ ನಿಮ್ಮ ತಯಾರಿ ಹೆಚ್ಚು ಸುಲಭವಾಗುತ್ತದೆ.

ರಜೆಯಲ್ಲಿ ಓದುವ ಹವ್ಯಾಸವನ್ನು ನೀವು ಬೆಳೆಸಿಕೊಂಡಿದ್ದೇ ಆದಲ್ಲಿ ಅದರ ನಿಶ್ಚಿತ ಪ್ರಭಾವ ಹಾಗೂ ಪರಿಣಾಮಗಳನ್ನು ಅನತಿ ಶೀಘ್ರದಲ್ಲಿಯೇ ನೀವು ಕಾಣುತ್ತೀರಿ. ನಿಮ್ಮ ಯೋಚನಾಶಕ್ತಿ ಹರಿತವಾಗುವುದರ ಜೊತೆಗೆ, ಶಾಲೆಯಲ್ಲಿನ ನಿಮ್ಮ ಕಲಿಕೆಯ ಪ್ರಕ್ರಿಯೆಗೆ ಉತ್ತಮ ಅಡಿಪಾಯ ದೊರಕುತ್ತದೆ.

ಹೊಸ ಅನುಭವಗಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಲು ಪ್ರಾರಂಭಿಸುತ್ತೀರಿ. ಹೊಸ ಮಾಹಿತಿಯನ್ನು ಗಳಿಸಿಕೊಳ್ಳುತ್ತೀರಿ. ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪಡೆಯುತ್ತೀರಿ. ಹೊಸ ಬಗೆಯ ಹವ್ಯಾಸ ಹಾಗೂ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳುತ್ತೀರಿ. ಸಮಸ್ಯೆಗಳನ್ನು ಪರಿಹರಿಸುವ ಹೊಸ ಮಾರ್ಗಗಳನ್ನು ತಿಳಿದುಕೊಳ್ಳುತ್ತೀರಿ.

ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ತಂದುಕೊಳ್ಳಿ

ನಿಮ್ಮ ಈ ಓದಿನ ಹವ್ಯಾಸವು ನಿಮ್ಮ ಜೀವನಶೈಲಿಯಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ತರಬಹುದು. ಮುಂದೆ ನೀವು ಯಾವುದಾದರೂ ಕಾರ್ಯಯೋಜನೆಯನ್ನು ಪ್ರಾರಂಭಿಸುವ ಮುನ್ನ ತೆಗೆದುಕೊಳ್ಳಬೇಕಾದ ವಿವಿಧ ಎಚ್ಚರಿಕೆಯ ಕ್ರಮಗಳನ್ನು ರೂಪಿಸುವಲ್ಲಿ ಇಂಥ ಓದಿನ ಅನುಭವವು ನೆರವಾಗುತ್ತದೆ. ನೀವು ಓದಿಕೊಂಡಿರುವ ಹೆಸರಾಂತ ವ್ಯಕ್ತಿಗಳ ಅನುಭವಗಳು ಈ ನಿಟ್ಟಿನಲ್ಲಿ ನಿಮಗೆ ದಾರಿದೀಪವಾಗಬಹುದು.

ಇಂಥ ಓದಿನಿಂದಾಗುವ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ, ನಿಮ್ಮ ಸಂವಹನ ಸಾಮರ್ಥ್ಯದಲ್ಲಿ ಉಂಟಾಗುವ ಬದಲಾವಣೆಗಳು. ನಿಮ್ಮ ಭಾಷಾಪ್ರಯೋಗ, ಪದಗಳ ಉಚ್ಚಾರ ಹಾಗೂ ಮಾತನಾಡುವ ಶೈಲಿ ಸುಧಾರಿಸುವುದರ ಜೊತೆಗೆ ನಿಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತಾ ಹೋಗುತ್ತದೆ.

ನಿಮ್ಮ ಕಲ್ಪನಾಶಕ್ತಿ, ಸೃಜನಶೀಲತೆ ಹಾಗೂ ಕ್ರಿಯಾಶೀಲತೆ ಗಣನೀಯ ಅಭಿವೃದ್ಧಿಯಾಗುತ್ತದೆ. ನಿಮ್ಮ ಮೆದುಳು ವಿವಿಧ ಬಗೆಯ ವಿಷಯಗಳಿಗೆ ಸ್ಪಂದಿಸಲು ಪ್ರಾರಂಭಿಸುವುದರಿಂದ ನಿಮ್ಮ ನೆನಪಿನ ಶಕ್ತಿಯೂ ಸುಧಾರಿಸುತ್ತದೆ.

ಪಾಠಕ್ಕೆ ಹೊರತಾದ ಓದಿನಿಂದ ಇಷ್ಟೆಲ್ಲ ಪ್ರಯೋಜನಗಳಿವೆ ಎಂದ ಮೇಲೆ ನೀವಿನ್ನು ಯೋಚಿಸುವ ಅವಶ್ಯಕತೆ ಇಲ್ಲ. ರಜೆಯ ಪ್ರಾರಂಭದಲ್ಲಿಯೇ ಇದರ ಬಗ್ಗೆ ದೃಢ ನಿರ್ಧಾರ ಮಾಡಿ. ಈ ಸಂಕ್ಷಿಪ್ತ ರಜಾ ಅವಧಿಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಿ. ಶಾಲೆಯಲ್ಲಿ ವಿವಿಧ ವಿಷಯಗಳಲ್ಲಿ ಮಾಡಿರುವ ಪಾಠಗಳನ್ನು ಈ ರಜೆಯಲ್ಲಿ ಪುನರ್ಮನನ ಮಾಡುವುದರ ಜೊತೆಗೆ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕನಿಷ್ಠ ಒಂದಾದರೂ ಪುಸ್ತಕವನ್ನು ಓದಿ ಮುಗಿಸಿ. ರಜೆ ಮುಗಿಯುತ್ತಿದ್ದಂತೆ ನಿಮ್ಮ ಗುರಿಯನ್ನು ತಲುಪುವ ದೃಢ ನಿರ್ಧಾರದೊಂದಿಗೆ ಹೊಸ ಉತ್ಸಾಹದಿಂದ ಶಾಲೆಗೆ ಮರಳಿ, ನಿಮ್ಮ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಿ.

ಪಾಠಕ್ಕೆ ಹೊರತಾದ ಓದು

ನಿಮ್ಮ ಓದು ಬರಿಯ ಪಠ್ಯಪುಸ್ತಕಗಳಿಗೆ ಅಥವಾ ನೋಟ್ಸ್‌ಗಳಿಗೇ ಸೀಮಿತವಾಗಬೇಕಿಲ್ಲ. ನಿಮ್ಮ ಆಸಕ್ತಿಯ ವಿಷಯಗಳಿಗೆ ಸಂಬಂಧಿಸಿದ ಹಲವಾರು ನಿಯತಕಾಲಿಕಗಳು, ಗ್ರಂಥಗಳು ಪ್ರಕಟವಾಗುತ್ತಿವೆ. ಅವುಗಳನ್ನು ಓದುವ ಹವ್ಯಾಸವನ್ನೂ ಬೆಳೆಸಿಕೊಳ್ಳಿ. ಯಾವ ಪುಸ್ತಕಗಳನ್ನು ಓದುವುದಕ್ಕೆ ಆಯ್ಕೆಮಾಡಿಕೊಳ್ಳಬೇಕೆಂಬ ಗೊಂದಲ ಉಂಟಾದಲ್ಲಿ, ನಿಮ್ಮ ಪೋಷಕರ ಅಥವಾ ಶಿಕ್ಷಕರ ನೆರವನ್ನು ಪಡೆದುಕೊಳ್ಳಿ. ನಿಮ್ಮ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಯಾವುದೇ ಬಗೆಯ ಪುಸ್ತಕವನ್ನು ರಜೆಯಲ್ಲಿ ಮಾತ್ರವಲ್ಲ, ಸಾಧ್ಯವಾದಾಗಲೆಲ್ಲ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ನಿಮ್ಮ ವ್ಯಕ್ತಿತ್ವ ವಿಕಸನಗೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

ನಿಮ್ಮ ಆಸಕ್ತಿಯ ಕ್ಷೇತ್ರ ವಿಜ್ಞಾನವಾಗಿದ್ದಲ್ಲಿ, ವಿಜ್ಞಾನ ಮತ್ತು ತಂತ್ತಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಪರಿಚಯ ಮಾಡಿಕೊಡುವ ಕೃತಿಗಳನ್ನು ಆಯ್ದುಕೊಳ್ಳಿ. ಇದರಿಂದ, ನಿಮ್ಮ ಪಾಠದಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಗಳಿಸಿಕೊಳ್ಳಬಹುದು. ದೈನಂದಿನ ಜೀವನದಲ್ಲಿ ವೈಜ್ಞಾನಿಕ ಆವಿಷ್ಕಾರಗಳ ಅನ್ವಯ ಬಗ್ಗೆ ತಿಳಿದುಕೊಳ್ಳಬಹುದು.

ನಿಮ್ಮ ಭವಿಷ್ಯದ ಅದ್ಯಯನ ಕ್ಷೇತ್ರದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಈ ರೀತಿಯ ಪೂರಕ ಓದು ಸಹಾಯವಾಗುತ್ತದೆ. ಇದೇ ರೀತಿ ಗಣಿತ, ಸಮಾಜವಿಜ್ಞಾನ ಮುಂತದ ವಿಷಯಗಳಲ್ಲಿಯೂ ಪಠ್ಯಕ್ಕೆ ಹೊರತಾದ ಅಧ್ಯಯನ ಮಾಡುವುದರಿಂದ ನಿಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬಹುದು. ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ನಿಮ್ಮ ಭಾಷಾ ಸಂಪತ್ತನ್ನು ಶ್ರೀಮಂತಗೊಳಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.