ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಕೇಂದ್ರದಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಗಿದ್ದು 1905ರಲ್ಲಿ. ನಿರ್ವಹಣೆ ಕೊರತೆ ಯಿಂದ ಈ ಶತಮಾನದ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ಈ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆಯನ್ನು 15 ವರ್ಷಗಳ ಹಿಂದೆ ಹೊಸದಾಗಿ ಕಟ್ಟಿದ್ದ ಸರ್ವ ಶಿಕ್ಷಣ ಅಭಿಯಾನದ ಶಾಲಾ ಕೊಠಡಿಗೆ ಸ್ಥಳಾಂತರಿಸಲಾಯಿತು.

ಈಗ ಶಾಲೆಗೆ 115 ವರ್ಷ. ‘ಹಳೆಯ ಕಟ್ಟಡವನ್ನು ರಿಪೇರಿ ಮಾಡಿಸಲು ಸಾಧ್ಯವಿಲ್ಲ. ಕೆಡವೇ ಕಟ್ಟಬೇಕು’ ಎಂಬುದು ಸ್ಥಳೀಯರ ಅಭಿಪ್ರಾಯವಾಗಿತ್ತು. ಆದರೆ, ಈ ಆರೇಳು ತಿಂಗಳ ಹಿಂದೆ ಬೆಂಗಳೂರಿನಿಂದ ಬಂದ ಒಂದು ತಂಡ ಶಿಥಿಲಗೊಂಡಿದ್ದ ಶಾಲಾ ಕಟ್ಟಡಕ್ಕೆ ಹೊಸ ರೂಪ ಕೊಡಲಾರಂಭಿಸಿದೆ. ಗೋಡೆಗಳು ಸುಣ್ಣ, ಬಣ್ಣಗಳನ್ನು ಕಂಡಿವೆ. ಆ ಬಣ್ಣದ ಗೋಡೆ ಮೇಲೆ ಚಿತ್ತಾರಗಳು ಕಾಣಿಸುತ್ತಿವೆ. ಕುಸಿಯುತ್ತಿದ್ದ ಶಾಲೆ ಈಗ ‘ಸ್ಮಾರ್ಟ್’ ಶಾಲೆಯಾಗುವತ್ತ ಹೆಜ್ಜೆ ಹಾಕಿದೆ.

ಯಾವುದು ಈ ತಂಡ?

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಎಂಜಿನಿಯರ್ ಗಳು, ಕೆಲವು ವೈದ್ಯರು ಹಾಗೂ ಇನ್ನೂ ಬೇರೆ ಬೇರೆ ಉದ್ಯೋಗದಲ್ಲಿರುವ ಸುಮಾರು 150 ಗೆಳೆಯರು ಫೇಸ್‌ಬುಕ್‌ನಲ್ಲಿ ಜತೆಯಾಗಿ ‘ಸ್ಮೈಲ್ ಕೆಫೆ’ ಎಂಬ ಗುಂಪು ರಚಿಸಿಕೊಂಡಿದ್ದಾರೆ. ವಾರಾಂತ್ಯದ ರಜೆ ಹಾಗೂ ಬಿಡುವಿನ ವೇಳೆಯಲ್ಲಿ ವೃದ್ಧಾಶ್ರಮ, ಅನಾಥಾಶ್ರಮ, ಸಣ್ಣ–ಪುಟ್ಟ ಶಾಲೆಗಳಂತಹ ಸೇವಾ ಕ್ಷೇತ್ರಗಳಿಗೆ ನೆರವಾಗುತ್ತಾರೆ. ಆ ಗುಂಪಿನ ಸದಸ್ಯರೇ, ಈಗ ಕಡಬದ ಶತಮಾನದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನೆರವಾಗುತ್ತಿದ್ದಾರೆ.

ಇದೆಲ್ಲ ಏಕಾ ಏಕಿಯಾಗಿದ್ದಲ್ಲ. ಈ ಶಾಲೆಯಲ್ಲೇ ಓದಿದ ಕೆ.ರಾಂಪುರದ ರಾಮೇಗೌಡರ ಮೊಮ್ಮಗ ಲೋಕೇಶ್, ತಾನು ಓದಿದ ಶಾಲಾ ಕಟ್ಟಡ ದುಸ್ಥಿತಿ ಕಂಡು ನೊಂದುಕೊಂಡರು. ಅದನ್ನು ಪತ್ನಿ ವೀಣಾರೊಂದಿಗೆ ಹೇಳಿಕೊಂಡರು. ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಈ ದಂಪತಿ ಶಾಲೆಯ ವಿಚಾರವನ್ನು ಗೆಳೆಯರೊಂದಿಗೆ ಹೇಳಿಕೊಳ್ಳುತ್ತಿದ್ದರು. ಆ ಗೆಳೆಯರಲ್ಲಿ ಒಬ್ಬರು ‘ಸ್ಮೈಲ್ ಕೆಫೆ’ಯ ಸದಸ್ಯರು. ಹೀಗಾಗಿ, ಆ ವಿಷಯ ‘ಕೆಫೆ’ ತಂಡಕ್ಕೆ ತಿಳಿಯಿತು. ಬೆಂಗಳೂರು ಸುತ್ತಮುತ್ತ ಸೇವೆಗೆ ನಿಂತಿದ್ದ ಈ ತಂಡ ಇದೇ ಮೊದಲ ಬಾರಿಗೆ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿತು.

ಕಟ್ಟಡ ದುರಸ್ತಿ, ಸುಣ್ಣ–ಬಣ್ಣ

ಆರೇಳು ತಿಂಗಳುಗಳ ಹಿಂದಿನಿಂದ ಈ ‘ಶ್ರಮದಾನ’ ಶುರುವಾಗಿದೆ. ಪ್ರತಿ ಶನಿವಾರ – ಭಾನುವಾರ 20 ರಿಂದ 25 ಸದಸ್ಯರ ತಂಡ ಕಡಪಕ್ಕೆ ಭೇಟಿ ನೀಡಿ, ಶಾಲೆಯ ದುರಸ್ತಿ ಕಾರ್ಯಗಳನ್ನು ಮಾಡುತ್ತಾರೆ. ಈ ಕೆಲಸಕ್ಕೆ ಒಬ್ಬೊಬ್ಬರೇ ಬರುವುದಿಲ್ಲ. ಕುಟುಂಬಸಹಿತ ಬರುತ್ತಾರೆ. ಕುಟುಂಬ ಎಂದರೆ, ಗಂಡ ಹೆಂಡತಿ ಅಷ್ಟೇ ಅಲ್ಲ, ಜತೆಗೆ ಪುಟ್ಟ ಪುಟ್ಟ ಮಕ್ಕಳನ್ನೂ ಕರೆತರುತ್ತಾರೆ. ಶಾಲೆಯ ಗೋಡೆಗಳಿಗೆ ಸುಣ್ಣ, ಬಣ್ಣ ಮಾಡುತ್ತಾರೆ. ಪೀಠೋ ಪಕರಣಗಳನ್ನು ಸರಿಪಡಿಸುತ್ತಾರೆ ಮಕ್ಕಳ ಕೈಗೂ ಗ್ಲೌಸ್ ತೊಡಿಸಿ, ಅವರನ್ನೂ ಜತೆಗೆ ಸೇರಿಸಿಕೊಳ್ಳುತ್ತಾರೆ.

ಕಟ್ಟಡದಲ್ಲಿ ಶಿಥಿಲವಾಗಿರುವ ಗೋಡೆಗಳ ದುರಸ್ತಿಗೆ ಪ್ರಯತ್ನಿಸುತ್ತಾರೆ. ಸಾಧ್ಯವಾಗದಿದ್ದರೆ, ಪರಿಣತರ ನೆರವು ಪಡೆಯುತ್ತಾರೆ. ಎಂಜಿನಿಯರ್ ತಾರಾನಾಥ್ ಅವರ ಐಡಿಯಾ ಪ್ರಕಾರ, ಶಾಲೆಯ ಕೆಲಸ ಪುನಶ್ಚೇತನದ ಕಾರ್ಯಗಳು ನಡೆಯುತ್ತಿವೆ.

ಭವಿಷ್ಯದಲ್ಲಿ ಶಾಲೆಗೆ ‘ಹೈಟೆಕ್’ ರೂಪ ಕೊಟ್ಟು, ಸ್ಮಾರ್ಟ್ ಶಾಲೆಯಾಗಿಸುವ ಉಮೇದಿನಲ್ಲಿದ್ದಾರೆ ಸದಸ್ಯರು. ‘ಶಾಲೆ ಸ್ವಚ್ಛವಾಗಿದ್ದು, ಸೌಲಭ್ಯಗಳಿದ್ದರೆ ಸುತ್ತಲಿನ ಮಕ್ಕಳೆಲ್ಲ ಇದೇ ಶಾಲೆಯಲ್ಲಿ ಓದುತ್ತಾರೆ’ ಎಂಬುದು ಈ ತಂಡದ ನಂಬಿಕೆ.

ಸ್ಮೈಲ್ ತಂಡದ ಜತೆಗೆ, ಪ್ರತಿ ವಾರ ನಡೆಯುವ ದುರಸ್ತಿ ಕಾರ್ಯಕ್ಕೆ ಅದೇ ಶಾಲೆಯಲ್ಲಿ ಓದಿ ಶಿಕ್ಷಕರಾಗಿರುವ ವಸೀಂ, ಫುಟ್‌ವೇರ್ ಅಂಗಡಿ ನಡೆಸುತ್ತಿರುವ ಇಸ್ಮಾಯಿಲ್ ಕೈ ಜೋಡಿಸಿದ್ದಾರೆ. ಶಾಲೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡವರ ಯೋಗ ಕ್ಷೇಮವನ್ನು ವೀಣಾ ಲೋಕೇಶ್ ನೋಡಿಕೊಳ್ಳುತ್ತಿದ್ದಾರೆ.

ಶಾಲೆ ಈಗ ಹೇಗಿದೆ?

ಕಿತ್ತು ಹೋಗಿದ್ದ ಶಾಲೆಯ ಗೋಡೆ ಸ್ವಚ್ಛವಾಗಿದೆ. ಸೋರುತ್ತಿದ್ದ ಸೂರು ದುರಸ್ತಿಯಾಗಿದೆ. ಹೊಸ ತೀರುಗಳು ಬಂದಿವೆ. ಹೆಂಚುಗಳನ್ನು ಬದಲಿಸಿದ್ದಾರೆ. ಮಾಸಿ ಹೋಗಿದ್ದ ಗೋಡೆಯ ಬಣ್ಣವನ್ನು ತೆಗೆದು, ಹೊಸ ಬಣ್ಣ ಬಳಿದಿದ್ದಾರೆ. ‘ಕಟ್ಟಡದ ಗುಣಮಟ್ಟ, ವಿನ್ಯಾಸ ಸುಂದರವಾಗಿದ್ದು, ಗಾಳಿ ಬೆಳಕಿನ ಸೌಲಭ್ಯವಿದ್ದರೆ, ಎಂಥ ದಡ್ಡ ಮಕ್ಕಳೂ ಓದಿನಲ್ಲಿ ಸೈ ಎನ್ನಿಸಿಕೊಳ್ಳುತ್ತಾರೆ’ ಎಂಬ ಉದ್ದೇಶವಿಟ್ಟುಕೊಂಡಿರುವ ಈ ತಂಡ, ವಿದ್ಯಾರ್ಥಿಗಳ ಓದಿಗೆ ಅನುಗುಣವಾಗಿ ಕೊಠಡಿಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಗೋಡೆಗಳ ಮೇಲೆ ನಮೂನೆ ಚಿತ್ತಾರ ಬಿಡಿಸಿದ್ದಾರೆ. ಇದರ ಜತೆಗೆ ನಲಿಕಲಿ ಮಾದರಿ, ಕಿಚನ್ ಗಾರ್ಡನ್, ಮಳೆನೀರು ಸಂಗ್ರಹ ವಿಧಾನದ ಪರಿಚಯ, ಆನ್‌ಲೈನ್ ಬೋಧನೆ ಮಾಡುವ ಉದ್ದೇಶವೂ ಈ ಸದಸ್ಯರಲ್ಲಿದೆ.

‘ಈಗಾಗಲೇ ₹3 ಲಕ್ಷ ಹಣವನ್ನು ಇದಕ್ಕಾಗಿ ಖರ್ಚು ಮಾಡಿದ್ದಾರೆ. ಹಣ ಹೊಂದಿಕೆ ಕಷ್ಟವಲ್ಲ. ಸೇವೆ ಮಾಡುವ ಮಂದಿಗೆ ಸ್ಥಳೀಯರ ಸಹಕಾರ ಸಿಕ್ಕರೆ ಇಂಥ ಎಷ್ಟೋ ಸರ್ಕಾರಿ ಶಾಲೆಗಳು ಉದ್ಧಾರವಾಗುತ್ತವೆ’ ಎನ್ನುತ್ತಾರೆ ವಸೀಂ.

‘ಸ್ಮೈಲ್ ಕೆಫೆ’ ಯವರ ಶ್ರಮಕ್ಕೆ ಸ್ಥಳೀಯವಾಗಿ ಎಲ್ಲರೂ ಸಹಕಾರ ನೀಡಬೇಕಿತ್ತು. ಅದು ಸಾಧ್ಯವಾಗಿಲ್ಲ. ಹಣಕಾಸಿನ ಪೂರ್ಣ ನೆರವನ್ನು ಈ ತಂಡದವರೇ ಮಾಡಿಕೊಂಡಿದ್ದಾರೆ. ನಮ್ಮೊಂದಿಗೆ ಓದಿದ ಹಳೆ ಸ್ನೇಹಿತರು ಒಂದೆರಡು ದಿನ ಬಂದು ಹೋಗಿದ್ದಾರೆ. ಉಳಿದಂತೆ ಅವರೊಟ್ಟಿಗೆ ಇದ್ದು ನಾವು ಸಹಕರಿಸುತ್ತಿದ್ದೇವೆ’ ಎನ್ನುತ್ತಾರೆ ಇಸ್ಮಾಯಿಲ್.

‘ಯಾರಿಗಾದರೂ ಸಹಾಯವಾಗಲಿ ಎಂಬ ಉದ್ದೇಶದಿಂದ ನಾವು ತಂಡ ಕಟ್ಟಿಕೊಂಡಿದ್ದೇವೆ. ತಂಡದಲ್ಲಿನ ಎಲ್ಲಾ ಸದಸ್ಯರೂ ವೃತ್ತಿಯಲ್ಲಿದ್ದು, ಸ್ವಲ್ಪ ಹಣವನ್ನು ಒಗ್ಗೂಡಿಸಿ ಇಂಥ ಸೇವೆಗಳಿಗೆ ಬಳಸ ಲಾಗುತ್ತಿದೆ. ಹಣ ಹೊಂದಿಸುವಲ್ಲಿ ಯಾವುದೇ ಕಷ್ಟ ಬಂದಿಲ್ಲ. ಸ್ನೇಹಿತರ ಸರ್ಕಲ್ ಚೆನ್ನಾಗಿರುವುದರಿಂದ ಈ ರೀತಿಯ ಸೇವೆ ಮಾಡಲು ಸಾಧ್ಯವಾಗುತ್ತಿದೆ’ ಎಂದು ಖುಷಿಯಿಂದ ಹೇಳುತ್ತಾರೆ ಸ್ಮೈಲ್ ತಂಡದವರಲ್ಲೊಬ್ಬರಾದ ತಾರಾನಾಥ್.

‘ಸ್ಮೈಲ್’ ಸೇವೆ

ಸ್ಮೈಲ್ ತಂಡದ ಸದಸ್ಯರು, ಈ ಶಾಲಾ ಕೆಲಸದ ಬಗ್ಗೆ ಯಾವ ನಕಾರಾತ್ಮಕ ಮಾತುಗಳು ಕೇಳಿದರೂ, ಬೇಸರಪಟ್ಟುಕೊಳ್ಳದೇ ನಗು ಮೊಗದೊಂದಿಗೆ ಕೆಲಸ ಮಾಡುತ್ತಿದ್ದಾರೆ.

‘ಇಷ್ಟೆಲ್ಲ ಮಾಡುತ್ತಿದ್ದೀರಲ್ಲಾ, ನಿಮಗೆ ಏನು ಲಾಭ’ ಎಂದು ಕೇಳಿದರೆ, ಮುಖದಲ್ಲಿ ‘ಸ್ಮೈಲ್’ ತೋರುತ್ತಾ, ‘ಈ ಶಾಲೆ ಪುನಶ್ಚೇತನಗೊಂಡು, ಇಲ್ಲಿಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಿಗೆಯಾದರೆ, ಈ ತೃಪ್ತಿಗಿಂತ ಇನ್ನೇನು ಲಾಭ ಬೇಕು ಹೇಳಿ’ ಎಂದು ಮರು ಪ್ರಶ್ನೆ ಹಾಕುತ್ತಾರೆ ‘ಕೆಫೆ’ ತಂಡದ ಸದಸ್ಯರು.

ಜುಲೈ 6ಕ್ಕೆ ಶಾಲೆ ಉದ್ಘಾಟನೆ

ನವೀಕರಣಗೊಂಡಿರುವ ಕಡಬದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ಜುಲೈ 6 ಉದ್ಘಾಟಿಸಲಾಗುತ್ತಿದೆ. ಆ ಕಾರ್ಯಕ್ರಮದಲ್ಲಿ ಈ ಶಾಲೆಯಲ್ಲಿ ಕೆಲಸ ಮಾಡಿರುವ ನಿವೃತ್ತ ಶಿಕ್ಷಕರಿಗೆ ಹಾಗೂ ಈ ಶಾಲೆಗೆ ಹೊಸ ಚೈತ್ಯನ್ಯ ನೀಡಿದ ‘ಸ್ಮೈಲ್ ಕೆಫೆ ಫೇಸ್‌ಬುಕ್ ತಂಡ’ದ ಸದಸ್ಯರನ್ನು ಅಭಿನಂದಿಸಲಾಗುತ್ತಿದೆ. ಈ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ 1ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ. ಆ ವಿಭಾಗಕ್ಕೆ 23 ಮಕ್ಕಳು ದಾಖಲಾಗಿದ್ದಾರೆ. ಸರ್ಕಾರದಿಂದ ಆರಂಭಿಸಲಾಗುತ್ತಿರುವ ಪ್ರೀ ನರ್ಸರಿ ತರಗತಿಗಳೂ (ಎಲ್ ಕೆ ಜಿ –ಯುಕೆಜಿ) ಇಲ್ಲಿಯೇ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.