‘ಎಸ್ಸೆಸ್ಸೆಲ್ಸಿ ಮುಗಿಸಿದ್ದೇನೆ. ಪಿಯುಸಿ ನಂತರ, ಸಿಇಟಿಗೆ ತಯಾರಿಯಾದರೆ ಸಾಕಾ ಅಥವಾ ಇಂಟಿಗ್ರೇಟೆಡ್ ಕೋರ್ಸ್ ಓದಿ ಜೆಇಇ–ನೀಟ್’ ಪರೀಕ್ಷೆಗೂ ಈಗಿನಿಂದಲೇ ಸಿದ್ಧಗೊಳಿಸುವ ಕಾಲೇಜಿಗೆ ಹೋಗಬೇಕಾ.. ?

‘ನನಗೆ ಗಣಿತ ಕಷ್ಟ. ಬರೀ ಬಯಾಲಜಿ ಕಾಂಬಿನೇಷನ್ ಸಬ್ಜೆಕ್ಟ್ ಓದಿದರೆ ಸಾಕಲ್ಲವಾ...? ಆಗ ಬರೀ ಲೈಫ್ ಸೈನ್ಸ್ ಪದವಿಯನ್ನಷ್ಟೇ ಓದಬೇಕು, ಎಐ, ರೊಬೊಟಿಕ್ಸ್ ಸೈನ್ಸ್ ಎಲ್ಲ ಓದೋಕಾಗಲ್ಲವಲ್ಲಾ.. ಏನು ಮಾಡೋದು.. ?‘

‘ಪಿಯುಸಿ ಮುಗಿಯುತ್ತಿದೆ. ಪದವಿಯಲ್ಲಿ ಯಾವ ಸ್ಟ್ರೀಮ್ ಆಯ್ಕೆ ಮಾಡ್ಕೋಬೇಕು.. ಡಿಪ್ಲೊಮಾ, ಎಂಜಿನಿಯರಿಂಗ್, ವೈದ್ಯಕೀಯ.. ಅದರಲ್ಲಿ ಆಯುರ್ವೇದ.. ಡೆಂಟಲ್.. ಯಾವುದನ್ನು ಆಯ್ಕೆ ಮಾಡ್ಕೊಳ್ಳಲಿ? ಈ ಕೋರ್ಸ್‌ಗಳಿಗೆಲ್ಲ ಭವಿಷ್ಯ ಇದೆಯಾ, ನಾನು ಓದೋಕೆ ಆಗುತ್ತಾ... ?‘

ಇನ್ನೊಂದು ಶೈಕ್ಷಣಿಕ ವರ್ಷ ಮುಗಿದಿದೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಗಿಯುವ ಹಂತದಲ್ಲಿವೆ. ಪದವಿ ಪರೀಕ್ಷೆಗಳು ಇನ್ನೇನು ಆರಂಭವಾಗಬೇಕು. ಈಗ ಮನೆ ಮನೆಗಳಲ್ಲಿ ಮಕ್ಕಳು ಮತ್ತು ಪೋಷಕರ ನಡುವೆ ಇಂಥದ್ದೇ ಚರ್ಚೆಗಳು ನಡೆಯುತ್ತಿವೆ. ಚರ್ಚೆಗಳೆಲ್ಲ ಗೊಂದಲ ಮೂಡಿಸುವ ಪ್ರಶ್ನೆಗಳೊಂದಿಗೆ ಅಂತ್ಯವಾಗುತ್ತಿವೆ.

ಹೀಗೆ ಗೊಂದಲ ಸೃಷ್ಟಿಯಾಗಲು ಪ್ರಮುಖವಾದ ಕಾರಣ, ಮಕ್ಕಳು(ವಿದ್ಯಾರ್ಥಿಗಳು) ತಮ್ಮನ್ನು ತಾವು ಅರ್ಥ ಮಾಡಿಕೊಳ್ಳದೆ, ವೃತ್ತಿಯೋಜನೆಯನ್ನೂ ಮಾಡಿಕೊಳ್ಳದೇ, ವೃತ್ತಿ/ಕೋರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದು. ಅಷ್ಟೇ ಅಲ್ಲ, ಕೆಲವೊಮ್ಮೆ ಏಕಕಾಲಕ್ಕೆ ತೀರಾ ವಿಭಿನ್ನವಾದ ಕೋರ್ಸ್/ವೃತ್ತಿಗಳನ್ನು ಪರಿಗಣಿಸುವುದರಿಂದಲೂ, ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ.

ಹಾಗಾದರೆ, ತಮ್ಮನ್ನು ತಾವು ಸಂಪೂರ್ಣವಾಗಿ ಅರಿತು ಮುಂದಿನ ವೃತ್ತಿ/ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಹೇಗೆ?

ಇಂಥ ಸಂದರ್ಭ ಎದುರಾದಾಗ, ಅದನ್ನು ಸಮರ್ಥವಾಗಿ ಎದುರಿಸಲು ಕಾರ್ಪೊರೇಟ್ ಸಂಸ್ಥೆಗಳು ಉಪಯೋಗಿಸುವ ಪ್ರಮುಖ ಸಾಧನವೆಂದರೆ, ಅದು ‘ಸ್ವಾಟ್ ಅನಾಲಿಸಿಸ್‘(SWOT Analysis). ಈ ವಿಶ್ಲೇಷಣೆಯಲ್ಲಿ ವ್ಯಕ್ತಿಯೊಬ್ಬನಲ್ಲಿರುವ ಶಕ್ತಿ(Strength), ದೌರ್ಬಲ್ಯ(Weakness), ಅವಕಾಶಗಳು (Opportunities) ಹಾಗೂ ಅಂಜಿಕೆ(Threats)ಗಳನ್ನು ಗುರುತಿಸಬೇಕು. ಅದೇ ರೀತಿ ಈ ಸ್ವಾಟ್ ವಿಧಾನವನ್ನು ವೃತ್ತಿ /ಕೋರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳಲು ಬಳಸಿಕೊಳ್ಳಬಹುದು. ಇದು, ಶಾಲಾಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ನಡೆಸುತ್ತಿರುವ ವೃತ್ತಿಯೋಜನೆ ಕಾರ್ಯಾಗಾರಗಳಿಂದ ಲಭಿಸಿರುವ ಮಾಹಿತಿ ಮತ್ತು ಅನುಭವವೂ ಹೌದು.

ಸ್ವಾಟ್ ವಿಶ್ಲೇಷಣೆ ಹೇಗೆ?

ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳುತ್ತಾ(ಸ್ವಯಂ-ಪ್ರಶ್ನೆಗಾರಿಕೆಯಿಂದ) ನಿಮ್ಮ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಅಂಜಿಕೆಗಳನ್ನು ನಿಷ್ಪಕ್ಷಪಾತವಾಗಿ ಗುರುತಿಸಿ, ಸ್ವವಿಮರ್ಶೆಯನ್ನು ಮಾಡಬೇಕು. ಈ ವಿಶ್ಲೇಷಣೆಯಲ್ಲಿ ನಿಮಗೆ ನೀವೇ ಹಾಕಿಕೊಳ್ಳುವ ಪ್ರಶ್ನೆಗಳು ಈ ರೀತಿಯಲ್ಲಿರಬಹುದು:

ಸಾಮರ್ಥ್ಯ(ಇದನ್ನು ಹೆಚ್ಚಿಸುವ, ವರ್ಧಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು)

l ನನಗೆ ಯಾವ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯಿದೆ?

l ನನಗೆ ಯಾವ ವಿಷಯಗಳನ್ನು ವೇಗವಾಗಿ ಗ್ರಹಿಸಲು ಆಗುತ್ತದೆ?

l ನನ್ನ ವೈಯಕ್ತಿಕ ಗುಣಲಕ್ಷಣಗಳು, ಕೌಶಲಗಳು (ಸಂವಹನ, ನಾಯಕತ್ವದ ಗುಣಗಳು, ಆಶಾವಾದ, ಸಕಾರಾತ್ಮಕ ಮನೋಭಾವ, ಸಮಯದ ನಿರ್ವಹಣೆ, ಶಿಸ್ತು ಇತ್ಯಾದಿ) ಯಾವುವು?

l ಸಹಪಾಠಿಗಳಿಗಿಂತ ಯಾವ ಕಾರ್ಯಗಳನ್ನು ನಾನು ಉತ್ತಮವಾಗಿ ಮಾಡಬಹುದು?

l ನನ್ನ ಕೌಟುಂಬಿಕ ಹಿನ್ನೆಲೆ, ಸಂಪನ್ಮೂಲಗಳೇನು?

l ನನ್ನ ವೈಯಕ್ತಿಕ ಮೌಲ್ಯಗಳೇನು (ಪ್ರಾಮಾಣಿಕತೆ, ನೈತಿಕತೆ, ನಿಷ್ಠೆ ಇತ್ಯಾದಿ)

ದೌರ್ಬಲ್ಯ (ನಿಯಂತ್ರಿಸಿಕೊಳ್ಳಬೇಕು/ಪರಿಹರಿಸಿಕೊಳ್ಳಬೇಕು)

l ನನಗೆ ಕಷ್ಟವೆನಿಸುವ ವಿಷಯಗಳೇನು? ಕ್ಷೇತ್ರಗಳೇನು?

l ನನ್ನ ದೌರ್ಬಲ್ಯಗಳೇನು? (ಮುಂಗೋಪ, ಋಣಾತ್ಮಕ ಮನೋಭಾವ, ನಿರಾಶಾವಾದ, ಅಸ್ತವ್ಯಸ್ತತೆ, ಸೋಮಾರಿತನ ಇತ್ಯಾದಿ

l ದೌರ್ಬಲ್ಯಗಳನ್ನು ನಿಯಂತ್ರಿಸುವುದು/ಪರಿಹರಿಸುವುದು ಹೇಗೆ?

l ನನಗೆ ಯಾವ ಕೆಲಸಗಳನ್ನು ನಿರ್ವಹಿಸಲು ಆಗುವುದಿಲ್ಲ/ಇಚ್ಛಿಸುವುದಿಲ್ಲ?

ಅವಕಾಶಗಳು (ಪರಿಣಾಮಕಾರಿ ಯಾಗಿ ಬಳಸಿಕೊಳ್ಳಬೇಕು)

l ನನಗಿರುವ ಸಾಮರ್ಥ್ಯವನ್ನು ಪರಿಗಣಿಸಿದರೆ ಇರುವ ಶೈಕ್ಷಣಿಕ ಅವಕಾಶಗಳೇನು?

l ನನ್ನ ಬದುಕಿನ ಕನಸುಗಳೇನು, ಗುರಿಗಳೇನು?

l ಅವುಗಳನ್ನು ಸಾಧಿಸಲು ಶೈಕ್ಷಣಿಕ/ವೃತ್ತಿ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು?

l ನನಗಿರುವ ವೃತ್ತಿಯ ಅವಕಾಶಗಳೇನು? ( ಖಾಸಗಿ, ಸರ್ಕಾರಿ, ಸ್ವಂತ ಉದ್ದಿಮೆ, ವಿದೇಶಿ ಅಧ್ಯಯನ ಇತ್ಯಾದಿ)

ಅಂಜಿಕೆಗಳು (ಪುನ ರ್ಮೌಲ್ಯಗೊಳಿಸಿ, ತಡೆಗಟ್ಟಬೇಕು)

l ನಾನು ಅಪೇಕ್ಷಿಸುವ ಕ್ಷೇತ್ರದಲ್ಲಿ ನನ್ನ ದೌರ್ಬಲ್ಯಗಳಿಂದ ತೊಂದರೆಗಳಾಬಹುದೇ?

l ಈ ಕ್ಷೇತ್ರದಲ್ಲಿ ಬೇಡಿಕೆ ಇನ್ನೂ ಇರುತ್ತದೆಯೇ?

l ನಾನು ಅಪೇಕ್ಷಿಸುವ ಕ್ಷೇತ್ರದಲ್ಲಿನ ಸ್ಪರ್ಧಾತ್ಮಕ ಅಂಶಗಳೇನು?

l ಬಾಹ್ಯ ಕ್ಷೇತ್ರದ ಬದಲಾವಣೆಗಳಿಂದ (ಸರ್ಕಾರದ ನೀತಿ, ನಿಯಮಗಳು, ಕಾನೂನು, ತಂತ್ರಜ್ಞಾನ, ಆವಿಷ್ಕಾರಗಳು, ಗ್ರಾಹಕರ ಆದ್ಯತೆಗಳು ಇತ್ಯಾದಿ) ಆಗಬಹುದಾದ ಪರಿಣಾಮಗಳೇನು?

ಅಂತಿಮ ನಿರ್ಧಾರ ಸುಲಭ

ಈ ರೀತಿ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುತ್ತಾ ಹೋದಂತೆ, ಸ್ವವಿಮರ್ಶೆ ಸಂಪೂರ್ಣ ವಾಗಿಯೂ, ಸಮಗ್ರವಾಗಿಯೂ ಆಗುತ್ತದೆ. ಸ್ವವಿಮರ್ಶೆಯ ಈ ಪ್ರಕ್ರಿಯೆಯಿಂದ ಹೊಸದೊಂದು, ಅಮೂಲ್ಯವಾದ ವ್ಯಕ್ತಿತ್ವದ ಒಳನೋಟ ಸಿಗುತ್ತದೆ. ಹಾಗಾಗಿ, ವಿವಿಧ ಕೋರ್ಸ್‌ಗಳಿಗೆ ಅಗತ್ಯವಿರುವ ಜ್ಞಾನ, ಕೌಶಲಗಳು ಮತ್ತು ಮನೋಧೋರಣೆಗಳಿಗೂ ವ್ಯಕ್ತಿತ್ವದ ಗುಣಲಕ್ಷಣಗಳಿಗೂ ಹೋಲಿಸಿ, ಯಾವ ಕೋರ್ಸ್ ಮತ್ತು ವೃತ್ತಿ ಸೂಕ್ತವೆಂದು ಸುಲಭವಾಗಿ ನಿರ್ಧರಿಸಬಹುದು.

ವಿಶೇಷವಾಗಿ, ವಿದ್ಯಾರ್ಥಿಗಳು ಹಲವಾರು ಆಯ್ಕೆಗಳನ್ನು ಪರಿಗಣಿಸುವಾಗ ಸ್ವಾಟ್ ವಿಶ್ಲೇಷಣೆಯ ಸಾಧನವನ್ನು ಸಮರ್ಪಕವಾಗಿ ಉಪಯೋಗಿಸಿದರೆ, ಸರಿಯಾದ ಕೋರ್ಸ್/ವೃತ್ತಿಯ ಆಯ್ಕೆ ಮಾಡಿ, ಬದುಕಿನ ಕನಸುಗಳನ್ನು ಸಾಕಾರಗೊಳಿಸಬಹುದು.

(ಲೇಖಕರು ಶಿಕ್ಷಣ ತಜ್ಞರು ಮತ್ತು ವೃತ್ತಿ ಸಲಹೆಗಾರರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.