ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ವಾಕ್ಯಗಳಲ್ಲಿ ಉಪಯೋಗಿಸುವ ಕ್ರಿಯಾಪದದ ರೂಪಗಳು ಒಂದಲ್ಲ, ಎರಡಲ್ಲ ಬಹಳಷ್ಟು ಇವೆ. ಕನ್ನಡ ಭಾಷೆಯಲ್ಲಿ ಕ್ರಿಯಾಪದದ ವಿವಿಧ ರೂಪಗಳು ಕೆಲವು ಆಧಾರದ ಮೇಲೆ ನಿರ್ಧರಿತವಾಗುತ್ತವೆ. ಆ ಆಧಾರಗಳು ಯಾವುವು ಎಂದು ಈ ಕೆಳಕಂಡತಿರುತ್ತವೆ.

ಕರ್ತೃ: ನಾಮಪದ ಅಥವಾ ಸರ್ವನಾಮ ಆಗಿರಬಹುದು. ವಚನ: ಏಕವಚನ ಅಥವಾ ಬಹುವಚನ ಆಗಿರಬಹುದು.

ಕ್ರಿಯಾಪದದ ಕಾಲ: ಎಲ್ಲಾ ವಿಧದ ಕಾಲಗಳು (ವರ್ತಮಾನಕಾಲ, ಭೂತಕಾಲ ಮತ್ತು ಭವಿಷ್ಯತ್ ಕಾಲ ಮತ್ತು ಇವುಗಳ ವಿಧಗಳು) ಆಗಿರಬಹುದು.
ಲಿಂಗ:ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಆಗಿರಬಹುದು.

ಪದ/Word, ನಾಮಪದ/Noun, ಸರ್ವನಾಮಪದ/Pronoun, ಕ್ರಿಯಾಪದ/Verb, ಕರ್ತೃ/Subject, ವಚನ/Number, ಏಕವಚನ/ Singular, ಬಹುವಚನ/Plural, ವರ್ತಮಾನ ಕಾಲ Present tense, ಭೂತಕಾಲ/Past tense, ಭವಿಷ್ಯತ್ ಕಾಲ/Future tense, ಪುಲ್ಲಿಂಗ/Masculine gender, ಸ್ತ್ರೀಲಿಂಗ/Feminine gender, ನಪುಂಸಕಲಿಂಗ/Neutral gender.

ಲಿಂಗದ ವಿಷಯಕ್ಕೆ ಬಂದಾಗ ಕನ್ನಡ ಭಾಷೆಯಲ್ಲಿ ಏಕವಚನ ರೂಪದ ಲಿಂಗಕ್ಕೆ ಅನುಗುಣವಾಗಿ ಕ್ರಿಯಾಪದಗಳ ರೂಪಗಳು ಬದಲಾಗುತ್ತವೆ. ಆದರೆ ಇಂಗ್ಲಿಷ್ ಭಾಷೆಯಲ್ಲಿ ಲಿಂಗದ ಆಧಾರದ ಮೇಲೆ ಕ್ರಿಯಾಪದದ ರೂಪಗಳು ಬದಲಾಗುವುದಿಲ್ಲ.

ಉದಾಹರಣೆಗಳು: ಕ್ರಿಯಾಪದದ ಕೆಲವು ರೂಪಗಳು: ಹೋಗುತ್ತಾನೆ–ಹೋಗುತ್ತಾಳೆ,
ಹೋಗಿದ್ದನು–ಹೋಗಿದ್ದಳು,
ಹೋಗುವನು–ಹೋಗುವಳು,
ಹೋಗುತ್ತಾರೆ–ಹೋಗುತ್ತವೆ.

ಕೆಲವೇ ಕೆಲವು ರೂಪಗಳು
ಅವನು ಹೋಗುತ್ತಾನೆ/He goes,
ಅವಳು ಹೋಗುತ್ತಾಳೆ/She goes,
ಅದು ಹೋಗುತ್ತದೆ/It goes.
ಇರುವಿಕೆಯನ್ನು ಸೂಚಿಸುವ ಇನ್ನೊಂದು ವಿಧವಾದ ಕ್ರಿಯಾಪದಗಳನ್ನು ಒಳಗೊಂಡಿರುವ ಈ ಕೆಳಗಿನ ವಾಕ್ಯಗಳಲ್ಲಿ ಗಮನಿಸಿ. ನಾನು ವೈದ್ಯನಾಗಿದ್ದೇನೆ, ನಾವು ವಿದ್ಯಾರ್ಥಿಗಳಾಗಿದ್ದೇವೆ, ನೀನು ಅಧಿಕಾರಿ ಆಗಿರುವೆ, ನೀವು ಲೇಖಕರಾಗಿದ್ದೀರಿ, ಅವನು ಶಿಕ್ಷಕನಾಗಿದ್ದಾನೆ, ಅವಳು ಗೃಹಿಣಿಯಾಗಿದ್ದಾಳೆ, ಅದು ವಿಗ್ರಹವಾಗಿದೆ. ಅವರು ಯೋಧರಾದ್ದಾರೆ.

ಈ ಮೇಲಿನ ಎಲ್ಲಾ ವಾಕ್ಯಗಳಲ್ಲಿ ಕರ್ತೃವಿನ ಜೊತೆಗೆ ನಾಮಪದಗಳಿವೆ. ಅವುಗಳು ಯಾವುವೆಂದರೆ ವೈದ್ಯ, ವಿದ್ಯಾರ್ಥಿಗಳು, ಅಧಿಕಾರಿ, ಲೇಖಕರು, ಶಿಕ್ಷಕ, ಗೃಹಿಣಿ, ವಿಗ್ರಹ, ಯೋಧರು. ಇನ್ನೊಂದು ವಾಕ್ಯವನ್ನು ಗಮನಿಸಿ. ರಾಮನು ಒಳ್ಳೆಯವನು. (ಆಡುಭಾಷೆಯಲ್ಲಿ). ಇದೇ ವಾಕ್ಯವನ್ನು ಗ್ರಾಂಥಿಕ ಭಾಷೆಯಲ್ಲಿ ಹೇಳುವುದಾದರೆ, ರಾಮನು ಒಳ್ಳೆಯವನಾಗಿದ್ದಾನೆ.

ಈ ಮೇಲಿನ ಎಲ್ಲಾ ವಾಕ್ಯಗಳಲ್ಲಿ ‘ಇರು’ ಎಂಬ ಅರ್ಥವು ಅಡಕವಾಗಿರುವ ಅಥವಾ ಒಳಗೊಂಡಿರುವ ನಾಮಪದಗಳಿವೆ. ಇಲ್ಲಿ ‘ಇರು’ ಎಂಬುದು ಕೂಡ ಒಂದು ವರ್ಗಕ್ಕೆ ಸೇರಿದ ಕ್ರಿಯಾಪದ. ಅದು ಅಕರ್ಮಕ ಕ್ರಿಯಾಪದ. ಈ ವರ್ಗಕ್ಕೆ ಸೇರಿದ ಕ್ರಿಯಾಪದವನ್ನು ಸ್ಥೂಲವಾಗಿ ‘To be’ ಕ್ರಿಯಾಪದವೆಂದು ಕರೆಯಲಾಗುತ್ತದೆ.

‘To be’ ಕ್ರಿಯಾಪದಕ್ಕೆ ಯಾರನ್ನು, ಯಾವುದನ್ನು, ಏನನ್ನು ಎಂಬ ಪ್ರಶ್ನೆ ಹಾಕಿದಾಗ ಉತ್ತರ ಬಾರದೆ ಇರುವುದರಿಂದ ಅಕರ್ಮಕ/Intransitive ಕ್ರಿಯಾಪದ ಎನಿಸಿಕೊಳ್ಳುತ್ತದೆ.

ಸೂಚನೆ: ಮುಂಬರುವ ಪಾಠಗಳಲ್ಲಿ ಎಲ್ಲ ವಿಧದ ಕ್ರಿಯಾಪದಗಳ ಕುರಿತು ವಿವರಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.