ವಿಶೇಷಣದ ಸ್ಪಷ್ಟತೆಯ ಅರಿವಿಗಾಗಿ ಈ ಕೆಳಗಿನ ವಾಕ್ಯಗಳನ್ನು ಎಚ್ಚರಿಕೆಯಿಂದ ಗಮನಿಸಿ.

ರಾಮನು ಬುದ್ಧಿವಂತ ವಿದ್ಯಾರ್ಥಿ (ಎಂತಹ ವಿದ್ಯಾರ್ಥಿ?)
ಈ ಮೇಲಿನ ವಾಕ್ಯದಲ್ಲಿ ಎಂತಹ ವಿದ್ಯಾರ್ಥಿ ಎಂದು ಪ್ರಶ್ನಿಸಿದಾಗ ಬುದ್ಧಿವಂತ ವಿದ್ಯಾರ್ಥಿ ಎಂಬ ಉತ್ತರ ಬರುತ್ತದೆ. ಬುದ್ಧಿವಂತ ಎಂಬ ಪದವೇ ವಿಶೇಷಣ.

ನಾನು ಆ ಹುಡುಗಿಯನ್ನು ಪ್ರೀತಿಸುತ್ತೇನೆ. (ಯಾವ ಹುಡುಗಿ?)
ಈ ಮೇಲಿನ ವಾಕ್ಯದಲ್ಲಿ ಯಾವ ಹುಡುಗಿ ಎಂದು ಪ್ರಶ್ನಿಸಿದಾಗ ಆ ಹುಡುಗಿ ಎಂಬ ಉತ್ತರವು ಬರುತ್ತದೆ. ‘ಆ’ ಎಂಬ ಪದವೇ ವಿಶೇಷಣ.

ನನ್ನ ಹತ್ತಿರ ಐದು ಪುಸ್ತಕಗಳು ಇವೆ. (ಎಷ್ಟು ಪುಸ್ತಕ?)
ಈ ಮೇಲಿನ ವಾಕ್ಯದಲ್ಲಿ ಎಷ್ಟು ಪುಸ್ತಕಗಳಿವೆ ಎಂದು ಪ್ರಶ್ನಿಸಿದಾಗ ಐದು ಪುಸ್ತಕಗಳಿವೆ ಎಂಬ ಉತ್ತರವು ಬರುತ್ತದೆ. ಐದು ಎಂಬ ಪದವೇ ವಿಶೇಷಣ. ಇಲ್ಲಿ ಎಷ್ಟು ಎಂಬ ಪದವು ಎಣಿಸಲು ಬರುವ ನಾಮಪದವಾದ ಪುಸ್ತಕಕ್ಕೆ ಸಂಬಂಧಪಟ್ಟಿದ್ದು.

ಭೀಮನ ಹತ್ತಿರ ಸ್ವಲ್ಪ ಅಕ್ಕಿ ಇದೆ. (ಎಷ್ಟು ಅಕ್ಕಿ?)
ಈ ಮೇಲಿನ ವಾಕ್ಯದಲ್ಲಿ ಎಷ್ಟು ಅಕ್ಕಿ ಎಂದು ಪ್ರಶ್ನಿಸಿದಾಗ ಸ್ವಲ್ಪ ಅಕ್ಕಿ ಎಂಬ ಉತ್ತರವು ಬರುತ್ತದೆ. ಸ್ವಲ್ಪ ಎಂಬ ಪದವೇ ವಿಶೇಷಣ.

ಈ ಮೇಲಿನ ಮೂರನೇ ಮತ್ತು ನಾಲ್ಕನೇ ವಾಕ್ಯವನ್ನು ಗಮನಿಸಿ. ಆ ಎರಡೂ ವಾಕ್ಯಗಳಲ್ಲಿ ಎಷ್ಟು ಎಂಬ ಪದದ ಪ್ರಸ್ತಾಪವಿದೆ. ವಾಕ್ಯ ಮೂರರಲ್ಲಿ ಎಷ್ಟು ಎಂಬ ಪ್ರಶ್ನೆಗೆ ಬರುವ ಉತ್ತರ ಎಣಿಸಲು ಬರುವ ನಾಮಪದವಾದ ಪುಸ್ತಕವನ್ನು ವರ್ಣಿಸುತ್ತದೆ. ವಾಕ್ಯ ನಾಲ್ಕರಲ್ಲಿ ಎಷ್ಟು ಎಂಬ ಪ್ರಶ್ನೆಗೆ ಬರುವ ಉತ್ತರ ಎಣಿಸಲು ಬಾರದ ನಾಮಪದವಾದ ಅಕ್ಕಿಯ ಪ್ರಮಾಣವನ್ನು ವರ್ಣಿಸುತ್ತದೆ.

ನಾಮಪದಗಳನ್ನು ಕುರಿತು ಇನ್ನೂ ಹಲವಾರು ಪ್ರಶ್ನೆಗಳಿಗೆ ದೊರಕುವ ಉತ್ತರಗಳು ವಿವಿಧ ಬಗೆಯ ವಿಶೇಷಣಗಳಾಗಿರುತ್ತವೆ. ಇವುಗಳ ಬಗ್ಗೆ ಮುಂದಿನ ಪಾಠದಲ್ಲಿ ವಿವರವಾಗಿ ತಿಳಿಯುತ್ತೀರಿ.

ಕೆಳಗಿನ ಉದಾಹರಣೆಯನ್ನು ಗಮನಿಸಿ
ಬಡಹುಡುಗನೊಬ್ಬ ಒಂದು ಒಳ್ಳೆಯ ಸೈಕಲನ್ನು ಕೊಂಡುಕೊಳ್ಳುತ್ತಾನೆ. /A poor boy purchases a good cycle.
ಈ ಮೇಲಿನ ವಾಕ್ಯದಲ್ಲಿ ಕರ್ತೃಪದವಾದ ಹುಡುಗ ಹಾಗೂ ಕರ್ಮಪದವಾದ ಸೈಕಲನ್ನು ಅನುಕ್ರಮವಾಗಿ ಬಡ ಮತ್ತು ಒಳ್ಳೆಯ ಎಂಬ ಪದಗಳು ವರ್ಣಿಸುತ್ತವೆ.

To be ಕ್ರಿಯಾಪದವಿರುವ ಕೆಳಗಿನ ವಾಕ್ಯವನ್ನು ಗಮನಿಸಿ
ಅವು ಕೆಂಪಾಗಿವೆ./ They are red.
ಈ ಮೇಲಿನ ವಾಕ್ಯದಲ್ಲಿ They ಎಂಬ ಪದವು ಕರ್ತೃಪದವಾಗಿರುತ್ತದೆ. are red ಎಂಬುದು ವಾಕ್ಯಾಂಶ/Predicate ಆಗಿರುತ್ತದೆ. (ಮುಂಬರುವ ಪಾಠಗಳಲ್ಲಿ ವಾಕ್ಯಾಂಶದ ಬಗ್ಗೆ ತಿಳಿಯುವಿರಿ.) ವಾಕ್ಯಾಂಶದಲ್ಲಿರುವ ಕೆಂಪು/Red ಎಂಬುದು ವಿಶೇಷಣ. ಈ ವಿಶೇಷಣವು ಅವು/They ಎಂಬ ಸರ್ವನಾಮವನ್ನು ವರ್ಣಿಸುತ್ತದೆ. ಈ ವಾಕ್ಯದಿಂದ ಸ್ಪಷ್ಟವಾಗಿ ತಿಳಿದುಕೊಳ್ಳುವುದೇನೆಂದರೆ, ವಿಶೇಷಣವು ಸರ್ವನಾಮವನ್ನು ಕೂಡ ವರ್ಣಿಸುತ್ತದೆ.

ಅದು ಕೆಂಪಾಗಿದೆ /It is red.
ಅದು ಕೆಂಪುಬಣ್ಣದ ಪುಸ್ತಕ / It is a red book.
ಈ ಮೇಲಿನ ಎರಡೂ ವಾಕ್ಯಗಳನ್ನು ಗಮನಿಸಿದಾಗ ಮೊದಲನೇ ವಾಕ್ಯದಲ್ಲಿ Red ಎಂಬ ವಿಶೇಷಣದ ಮುಂದೆ ನಾಮಪದವಿಲ್ಲ. ಎರಡನೇ ವಾಕ್ಯದಲ್ಲಿ Red ಎಂಬ ವಿಶೇಷಣದ ಮುಂದೆ Book ಎಂಬ ನಾಮಪದವಿದೆ. ಪುಸ್ತಕ/Book ಎಂಬುದು ಏಕವಚನದಲ್ಲಿದೆ. ಆದ್ದರಿಂದ ವ್ಯಾಕರಣದ ನಿಯಮದ ಅನುಸಾರ, ವಿಶೇಷಣದ ಮುಂದೆ, ಏಕವಚನರೂಪದ ನಾಮಪದವಿದ್ದರೆ, ವಿಶೇಷಣದ ಮೊದಲನೇ ಅಕ್ಷರಕ್ಕೆ ಅನುಗುಣವಾಗಿ (ಅಂದರೆ ಸ್ವರ ಅಥವಾ ವ್ಯಂಜನಾಕ್ಷರ) A ಅಥವಾ An ಎಂಬ ಉಪಪದವನ್ನು ಹಾಕಬೇಕು.

ಕೆಳಗಿನ ಉದಾಹರಣೆಯನ್ನು ಗಮನಿಸಿ.
It is an elephant.
It is a black elephant.

ಒಂದು ವೇಳೆ ವಾಕ್ಯದಲ್ಲಿನ ವಿಶೇಷಣದ ಮುಂದೆ ಬಹುವಚನ ರೂಪದ ನಾಮಪದವಿದ್ದರೆ, ವಿಶೇಷಣದ ಮೊದಲಿಗೆ A ಅಥವಾ An ಎಂಬ ಉಪದವನ್ನು ಹಾಕುವ ಹಾಗಿಲ್ಲ. ಆದರೆ The ಎಂಬ ಉಪಪದವು ವಿಶೇಷಣದ ಮೊದಲಿಗೆ ಬರಬಹುದು ಅಥವಾ ಬರದೇ ಇರಬಹುದು. The ಎಂಬ ಉಪಪದದ ಬಗ್ಗೆ ಮುಂದಿನ ಪಾಠದಲ್ಲಿ ವಿವರಿಸಲಾಗುವುದು.

ಈ ಕೆಳಗಿನ ವಾಕ್ಯವನ್ನು ಗಮನಿಸಿ.
ನನಗೆ ಅವನು ಬುದ್ಧಿವಂತನಂತೆ ಕಂಡು ಬರುತ್ತಾನೆ. / ನಾನು ಅವನನ್ನು ಬುದ್ಧಿವಂತನಂತೆ ಕಾಣುತ್ತೇನೆ./ I find him intelligent. (ಈ ವಿಧದ ವಾಕ್ಯ ರಚನೆಗೆ ಸಂಬಂಧಪಟ್ಟ ವ್ಯಾಕರಣದ ನಿಯಮವನ್ನು ಮುಂಬರುವ ಪಾಠಗಳಲ್ಲಿ ತಿಳಿಸಲಾಗುವುದು.)

ಈ ವಾಕ್ಯದಲ್ಲಿ ಅವನನ್ನು/him ಎಂಬುದು ಕರ್ಮಪದ. ಈ ಕರ್ಮ ಪದವನ್ನು ಬುದ್ಧಿವಂತ/Intelligent ಎಂಬ ಪದವು ವರ್ಣಿಸುತ್ತದೆ. ಆದ್ದರಿಂದ Intelligent ಎಂಬುದು Him ಎಂಬ ಕರ್ಮಪದವನ್ನು ವರ್ಣಿಸುವ ವಿಶೇಷಣವಾಗಿರುತ್ತದೆ. ಈ ಸಂದರ್ಭದಲ್ಲಿ ವಿಶೇಷಣವಾದ Intelligent ಎಂಬ ಪದವು ಸರ್ವನಾಮಪದವಾದ him ಎಂಬುದರ ಮುಂದೆ ಬಂದಿದೆ.

ವ್ಯಾಕರಣದ ಎಂಟು ಅಂಗಗಳಲ್ಲಿ ನಾಲ್ಕು ಅಂಗಗಳು ಪ್ರಮುಖವೆನಿಸುತ್ತವೆ. ಈ ನಾಲ್ಕು ಅಂಗಗಳಲ್ಲಿ ವಿಶೇಷಣವೂ ಸಹ ಒಂದು ಪ್ರಮುಖವಾದ ಅಂಗ ಅಂದರೆ ನಾಮಪದ/Noun, ಕ್ರಿಯಾಪದ/Verb, ಕ್ರಿಯಾವಿಶೇಷಣ/Adverb ಜೊತೆಗೆ ವಿಶೇಷಣ/ Adjective ಸಹ ಇರುತ್ತದೆ. ವಿಶೇಷಣಗಳು ಸಾವಿರಾರು ಸಂಖ್ಯೆಗಳಲ್ಲಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.