ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರು, ವೀರಪುತ್ರರ ಕರ್ಮಭೂಮಿ ಕೊಡವರ ನಾಡು ಕೊಡಗನ್ನು ಒಳಗೊಂಡ ಲೋಕಸಭಾ ಕ್ಷೇತ್ರ ಕಾಂಗ್ರೆಸ್–ಬಿಜೆಪಿಗೆ ಪ್ರತಿಷ್ಠಿತ ಕಣ. ‘ಉಗ್ರ’ ಹಿಂದುತ್ವವಾದಿ ಪ್ರತಾಪಸಿಂಹ ಎರಡು ಬಾರಿ ಪ್ರತಿನಿಧಿಸಿದ್ದ ಕ್ಷೇತ್ರದಲ್ಲೀಗ, ರಾಜವಂಶಸ್ಥ ಯದುವೀರ್ ಒಡೆಯರ್ ಕಮಲ ಪಡೆಯ ಹೊಸಮುಖ.

ರಾಜವಂಶದ ಎದುರು, ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ರಾಜ್ಯಾಡಳಿತದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಆಪ್ತರಲ್ಲಿ ಒಬ್ಬರಾದ ಲಕ್ಷ್ಮಣ ಅವರನ್ನು ಮುಂದೆ ನಿಲ್ಲಿಸಿದ್ದಾರೆ. ಲಕ್ಷ್ಮಣರ ಬೆನ್ನಿಗೆ ಸಿದ್ದ‘ರಾಮ’ಯ್ಯ ಇದ್ದಾರೆ. ಯತೀಂದ್ರರೂ ಜತೆ ಸೇರಿದ್ದಾರೆ. ಯದುವೀರರ ಹಿಂದೆ, ಮಾಜಿ ಸಚಿವ ‘ರಾಮ’ದಾಸ್ ನಿಂತಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿದ್ದು, ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯನವರಿಗೆ ತವರು ಜಿಲ್ಲೆಯಲ್ಲಿ ‘ಹಸ್ತ’ ಅರಳಿಸುವ ಹುಮ್ಮಸ್ಸು. ಅಲ್ಲಿನ ಸೋಲು–ಗೆಲುವು ಅವರ ಸಾಮರ್ಥ್ಯ, ಜನಪ್ರಿಯತೆಯ ಸತ್ವಪರೀಕ್ಷೆಯೂ ಆಗಲಿದೆ. ಅಭ್ಯರ್ಥಿ ಬದಲಿಸಿ, ರಾಜವಂಶಸ್ಥರನ್ನು ಕಣಕ್ಕೆ ದೂಡಿರುವ ಬಿಜೆಪಿಗೂ ಕೂಡ ಅವರನ್ನು ಗೆಲ್ಲಿಸಿಕೊಳ್ಳುವ ಸವಾಲು.

ಕಳೆದ ಎರಡು ಮೂರು ಚುನಾವಣೆಗಳಲ್ಲಿ ಜೆಡಿಎಸ್ ಪಾತ್ರ ಇಲ್ಲಿ ಪ್ರಧಾನವಾಗಿ ಕೆಲಸ ಮಾಡಿದೆ. ಹೀಗಾಗಿಯೇ, ಈ ಕ್ಷೇತ್ರವನ್ನು ಜೆಡಿಎಸ್ ಕೇಳಿತ್ತು. ಮೈತ್ರಿ ಅಭ್ಯರ್ಥಿ ಯದುವೀರ್ ಪರವಾಗಿ ಜೆಡಿಎಸ್ ಎಷ್ಟರಮಟ್ಟಿಗೆ ತನ್ನ ಶಕ್ತಿ ಧಾರೆ ಎರೆಯಲಿದೆಯೇ ಎಂಬುದು ಪ್ರಶ್ನಾರ್ಥಕ. ಸಿದ್ದರಾಮಯ್ಯ–ಯದುವೀರ್ ಯಾರಿಗೆ ಗೆಲುವಿನ ಹಾರ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.