ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ ನಿಗದಿಯಾಗಿದೆ. ಮತದಾನ ಮಾಡಲು ಮಾಡಲು ಯಾವೆಲ್ಲಾ ದಾಖಲೆಗಳು ಬೇಕು ಎನ್ನುವ ಗೊಂದಲ ಜನ ಸಾಮಾನ್ಯರಲ್ಲಿದೆ. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಮತದಾನ ಮಾಡಲು ಆಗುವುದಿಲ್ಲ ಎನ್ನುವ ತಪ್ಪು ಕಲ್ಪನೆಯೂ ಜನರಲ್ಲಿದೆ. ಮತದಾರರ ಗುರುತಿನ ಚೀಟಿ ಇಲ್ಲದೇ ಇದ್ದರೆ ಇನ್ನೂ 12 ದಾಖಲೆಗಳಲ್ಲಿ ಯಾವುದಾರೊಂದು ದಾಖಲೆ ಇದ್ದರೆ ಮತ ಚಲಾಯಿಸಬಹುದು.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನೀವು ಈ ಕೆಳಗಿನ ಯಾವುದಾರರೂ ಗುರುತಿನ ಚೀಟಿಯನ್ನು ದಾಖಲೆಯಾಗಿ ತೋರಿಸಿ ಮತದಾನ ಮಾಡಬಹುದು. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ತಿಳಿಯುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದರೆ ಈ ಕೆಳಗಿನ ದಾಖಲೆಯನ್ನು ತೋರಿಸಿ ಮತ ಚಲಾಯಿಸಬಹುದು.

1. ಮತದಾರರ ಗುರುತಿನ ಚೀಟಿ
2. ಆಧಾರ್ ಕಾರ್ಡ್
3. ನರೇಗಾ ಕೆಲಸದ ಕಾರ್ಡ್ (ಜಾಬ್ ಕಾರ್ಡ್)
4. ಫೋಟೊ ಲಗತ್ತಿಸಿರುವ ಬ್ಯಾಂಕ್ / ಪೋಸ್ಟ್ ಆಫೀಸ್ ಪಾಸ್ಬುಕ್
5. ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್
6. ಚಾಲನಾ ಪರವಾನಗಿ (ಡ್ರೈವಿಂಗ್ ಲೆಸೆನ್ಸ್)
7. NPR ನಡಿ ನೀಡಲಾದ ಸ್ಮಾರ್ಟ್ ಕಾರ್ಡ್
8. ಪಾಸ್ಪೋರ್ಟ್
9. ಫೋಟೊ ಇರುವ ಪಿಂಚಣಿ ದಾಖಲೆ
10. ಪಾನ್ ಕಾರ್ಡ್
11. ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆ, ಸಾರ್ವಜನಿಕ ಕಂಪನಿಗಳ ಗುರುತಿನ ಚೀಟಿ
12. ಶಾಸಕ, ಸಂಸದರಿಗೆ ನೀಡಲಾಗಿರುವ ಅಧಿಕೃತ ಗುರುತಿನ ಚೀಟಿ
13. ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯಿಂದ ನೀಡಲಾಗುವ ವಿಶಿಷ್ಟ ವಿಕಲ ಚೇತನರ ಗುರುತಿನ ಚೀಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.