ಈ ಬಾರಿಯ ಹಜ್ ಯಾತ್ರೆಯು ಸಮಸ್ಯೆಯ ಹಲವು ಮಜಲುಗಳನ್ನು ತೆರೆದಿಟ್ಟಿದೆ. ಹಜ್ ವೀಸಾ ಇಲ್ಲದೆಯೇ ಯಾತ್ರೆಯಲ್ಲಿ ಅಕ್ರಮವಾಗಿ ಪಾಲ್ಗೊಳ್ಳುವುದು, ಅಕ್ರಮವಾಗಿ ಪಾಲ್ಗೊಂಡ ಕಾರಣಕ್ಕಾಗಿಯೇ ಹಲವು ಅನುಕೂಲಗಳು ದೊರೆಯದೇ ಇರುವುದು, ವಿವಿಧ ದೇಶಗಳಿಂದ ಜನರನ್ನು ಅಕ್ರಮವಾಗಿ ಯಾತ್ರೆಯಲ್ಲಿ ಸೇರಿಸುವ ಏಜೆನ್ಸಿಗಳ ಭ್ರಷ್ಟಾಚಾರ, ಅಕ್ರಮ ಜಾಲವನ್ನು ಭೇದಿಸುವಲ್ಲಿ ಸೌದಿ ಅರೇಬಿಯಾ ಸರ್ಕಾರ ಸೋತಿರುವುದು... ಇವೆಲ್ಲದರ ಜೊತೆಗೆ, ಬಿಸಿಗಾಳಿಯಿಂದ ಈ ಬಾರಿ 1,301 ಮಂದಿ ಮೃತಪಟ್ಟಿದ್ದಾರೆ. ಹೀಗೆ ಸಮಸ್ಯೆ ಮತ್ತು ದುರಂತಗಳ ಮಧ್ಯೆಯೇ ಈ ಯಾತ್ರೆ ಸಮಾಪ್ತಿಯಾಗಿದೆ.

‘ಬಿಸಿಗಾಳಿಯಿಂದಾಗಿ ಮೃತಪಟ್ಟಿರುವವರಲ್ಲಿ ಶೇ 83ರಷ್ಟು ಜನರು ಹಜ್ ವೀಸಾ ಇಲ್ಲದೆಯೇ, ಅಕ್ರಮವಾಗಿ ಯಾತ್ರೆಯಲ್ಲಿ ಭಾಗಿಯಾದವರು’ ಎಂದು ಸೌದಿ ಅರೇಬಿಯಾ ಸರ್ಕಾರ ಹೇಳಿಕೆ ನೀಡಿದೆ. ಬಿಸಿಗಾಳಿಯಲ್ಲಿ ಮೃತಪಡುವುದಕ್ಕೂ ಅಕ್ರಮ ಯಾತ್ರಿಗಳಿಗೂ ಏನು ಸಂಬಂಧ ಎಂಬ ಪ್ರಶ್ನೆ ಉದ್ಭವಿಸದೇ ಇರದು. ಇದಕ್ಕೆ ಉತ್ತರ ಕಂಡುಕೊಳ್ಳುವುದರಲ್ಲಿಯೇ ಸಮಸ್ಯೆಗಳು ಅರ್ಥವಾಗುತ್ತವೆ. ಸಾಮಾನ್ಯವಾಗಿ ಹಜ್ ಯಾತ್ರೆ ನಡೆಯುವ ತಿಂಗಳಲ್ಲಿ ಮೆಕ್ಕಾದಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇರುತ್ತದೆ. ಆದರೆ, ಈ ಬಾರಿ ಗರಿಷ್ಠ ಉಷ್ಣತೆಯು 51 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. 6 ದಿನಗಳ ಈ ಯಾತ್ರೆಯಲ್ಲಿ ಯಾತ್ರಾರ್ಥಿಗಳು ಪಾದಯಾತ್ರೆ ನಡೆಸುತ್ತಾರೆ, ಹಲವು ಸಂಪ್ರದಾಯಗಳನ್ನು ಬಯಲಿನಲ್ಲಿಯೇ ಆಚರಿಸುತ್ತಾರೆ. ಹೀಗೆ ಸೂರ್ಯನಿಗೆ ತೆರೆದುಕೊಂಡಿರುವುದರಿಂದ ಬಿಸಿಗಾಳಿಯ ಪರಿಣಾಮಕ್ಕೆ ಬಲಿಯಾಗುವ ಸಂಭವ ಹೆಚ್ಚು ಎಂದು ವಿಶ್ಲೇಷಿಸಲಾಗಿದೆ.

ಈ ಬಾರಿ ಸುಮಾರು 18 ಲಕ್ಷ ಜನರು ಹಜ್ ವೀಸಾ ಪಡೆದು ಯಾತ್ರೆ ಕೈಗೊಂಡಿದ್ದಾರೆ. ಇಷ್ಟು ಜನರಿಗಾಗಿ ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ಬಿಸಿಯಾಘಾತದಿಂದ ಯಾತ್ರಾರ್ಥಿಗಳಿಗೆ ತೊಂದರೆಯಾಗುವುದನ್ನು ತಡೆಯಲೂ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಬಿಸಿಯಾಘಾತಕ್ಕೆ ತುತ್ತಾದವರಿಗೆಂದೇ ತುರ್ತು ಚಿಕಿತ್ಸಾ ಕೇಂದ್ರಗಳು, ವಿಶ್ರಾಂತಿ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ, ಅಕ್ರಮವಾಗಿ ಯಾತ್ರೆ ಕೈಗೊಂಡವರು ಬಿಸಿಲಿನಿಂದ ಬಳಲಿದರೂ, ಈ ನೆರವನ್ನು ಪಡೆದುಕೊಂಡಿಲ್ಲ. ನೆರವು ಪಡೆಯಲು ಅಧಿಕಾರಿಗಳನ್ನು ಸಂಪರ್ಕಿಸಿದರೆ, ದಂಡ ಮತ್ತು ಬಂಧನದ ಕ್ರಮ ಎದುರಿಸಬೇಕಾಗುತ್ತದೆ ಎಂದು ನೆರವು ಪಡೆದುಕೊಂಡಿಲ್ಲ. ಅಂತಹವರಲ್ಲೇ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳಿದೆ.

ಈಚಿನ ಕೆಲವು ಅವಘಡಗಳು

2001: ಯಾತ್ರೆಯ ಕೊನೆಯ ದಿನ ಮೀನಾದಲ್ಲಿ ನಡೆದ ಕಾಲ್ತುಳಿತದಲ್ಲಿ 35 ಮಂದಿ ಮೃತಪಟ್ಟಿದ್ದರು

2003: ಸೈತಾನನಿಗೆ ಕಲ್ಲೆಸೆಯುವ ಸಂದರ್ಭದಲ್ಲಿ 14 ಮಂದಿ ಮೃತಪಟ್ಟಿದ್ದರು

2004: ಯಾತ್ರೆಯ ಕೊನೆಯ ದಿನ ನಡೆದ ಕಾಲ್ತುಳಿತದಿಂದಾಗಿ ಮೀನಾದಲ್ಲಿ 250 ಮಂದಿ ಮೃತಪಟ್ಟಿದ್ದರು

2005: ಸೈತಾನನಿಗೆ ಕಲ್ಲೆಸೆಯುವ ಸಂದರ್ಭದಲ್ಲಿ ಮೂವರ ಮೃತಪಟ್ಟಿದ್ದರು

2006: ಸೈತಾನನಿಗೆ ಕಲ್ಲೆಸೆಯುವ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 360 ಮಂದಿ ಮೃತಪಟ್ಟಿದ್ದಾರೆ. ಇದೇ ವರ್ಷದ ಜನವರಿ 12ರಂದು ಇನ್ನೊಂದು ಘಟನೆಯಲ್ಲಿ ಮೆಕ್ಕಾದ ಮಸೀದಿ ಬಳಿ ಇರುವ ಹಾಸ್ಟೆಲ್ವೊಂದು ಕುಸಿದು ಬಿದ್ದು 73 ಮಂದಿ ಮೃತಪಟ್ಟಿದ್ದರು. ಜನವರಿ 6ರಂದು ಇಂಥದ್ದೆ ಘಟನೆ ನಡೆದಿತ್ತು ಮತ್ತು 76 ಮಂದಿ ಮೃತಪಟ್ಟಿದ್ದರು

2015: ಮೆಕ್ಕಾದ ಮಸೀದಿಯ ಮೇಲೆ ಕ್ರೇನ್ ಬಿದ್ದು, 107 ಜನರು ಮೃತಪಟ್ಟು ಸುಮಾರು 400 ಜನರು ಗಾಯಗೊಂಡಿದ್ದರು. ಇನ್ನೊಂದು ಘಟನೆಯಲ್ಲಿ, ಮೀನಾದಲ್ಲಿ ಘಟಿಸಿದ ಕಾಲ್ತುಳಿತದಿಂದಾಗಿ 310 ಜನರು ಮೃತಪಟ್ಟಿದ್ದರು.

ಬಿಸಿಲಗಾಳಿಯ ತಾಪ ತಡೆಯಲು ಹಲವಾರು ವ್ಯವಸ್ಥೆ

l ಯಾತ್ರೆಯಲ್ಲಿ ಒಟ್ಟು 50–60 ಕಿ.ಮೀ ಪಾದಯಾತ್ರೆ ಮಾಡಬೇಕಾಗುತ್ತದೆ. ಈ ಕಾರಣದಿಂದ ರಸ್ತೆಯುದ್ದಕ್ಕೂ ಅಲ್ಲಲ್ಲಿ, ಸ್ಪ್ರಿಂಕ್ಲರ್ ವ್ಯವಸ್ಥೆಯನ್ನು ಮಾಡಲಾಗಿದೆ. ವಿಶೇಷ ರಬ್ಬರ್ಗಳನ್ನು ಬಳಸಿ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಇದು ಉಷ್ಣಾಂಶವನ್ನು 10 ಡಿಗ್ರಿ ಸೆಲ್ಸಿಯಸ್ನಿಂದ 20 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆ ಮಾಡಲಿದೆ

l ಕಾಬಾ ಇರುವ ಮಸೀದಿಯಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದೆ. ಜಗತ್ತಿನ ಅತಿ ದೊಡ್ಡ ಹವಾನಿಯಂತ್ರಿತ ವ್ಯವಸ್ಥೆ ಇದಾಗಿದೆ. ಬಿಸಿ ತಡೆದುಕೊಳ್ಳುವ ಕ್ಷಮತೆಯ ಮಾರ್ಬಲ್ನ ಅಡಿಹಾಸು ಹಾಕಲಾಗಿದೆ

l ಜಮಾರತ್ ಸೇತುವೆಯು ಒಮ್ಮೆಗೇ ಅತಿ ಹೆಚ್ಚು ಜನರು ಸೇರುವ ಸ್ಥಳವಾಗಿದೆ. ಕಲ್ಲು ಎಸೆಯುವ ಸಂಪ್ರದಾಯ ಇರುವುದರಿಂದ ಜನರಿಗೆ ಅಪಾಯವಿದೆ. ಈಗ ಇದನ್ನು 6ಲಕ್ಷಕ್ಕೆ ಏರಿಸಲಾಗಿದೆ ಮತ್ತು ಇದಕ್ಕೆ ತಕ್ಕಂತೆ ಕಟ್ಟಡವನ್ನು ವಿಸ್ತರಿಸಿ, ನಿರ್ಮಿಸಲಾಗಿದೆ. ಒಂದೇ ಮಹಡಿಯ ಕಟ್ಟಡವು ಈಗ ಬಹುಮಹಡಿಯ ಕಟ್ಟಡವಾಗಿದೆ. ಈ ಸಂದರ್ಭದಲ್ಲಿ ಸಾವಾಗದಂತೆ ತಡೆಯಲು, ಬ್ಯಾಚ್ ವ್ಯವಸ್ಥೆ ಮಾಡಲಾಗಿದೆ. ತುರ್ತು ನಿರ್ಗಮನ ವ್ಯವಸ್ಥೆಯೂ ಇದೆ

l ಅರಾಫತ್ನಲ್ಲಿ ಆಸ್ಪತ್ರೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿಯೇ 42 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಮೆಕ್ಕಾದಲ್ಲಿ 27, ಮಿನಾನಾದಲ್ಲಿ 30 ಹಾಗೂ ಮುಜ್ದಲಿಫಾದಲ್ಲಿ 7 ಇಂಥ ಕೇಂದ್ರಗಳಿವೆ. ಬಿಸಿಗಾಳಿಯ ಕಾರಣಕ್ಕಾಗಿ ಈ ಬಾರಿ ಹಲವು ಕೇಂದ್ರಗಳಲ್ಲಿ ಬಿಸಿಗಾಳಿಗೆ ತುತ್ತಾಗುವ ಜನರಿಗಾಗಿಯೇ ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗಿತ್ತು

l ಅರಾಫತ್ನಲ್ಲಿ ಸುಮಾರು 6 ಲಕ್ಷ ಹೆಬ್ಬೇವಿನ ಮರಗಳಿವೆ. ಈ ಮರಗಳಿಗೆ ಹೊಂದಿಕೊಂಡಂತೆ ಹವಾನಿಯಂತ್ರಿತ ಟೆಂಟ್ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನಿಂದ ಬಳಲಿದವರು ಇಲ್ಲಿ ವಿಶ್ರಾಂತಿ ಪಡೆಯಬಹುದಾಗಿತ್ತು.

ಆಧಾರ: ಎಎಫ್ಪಿ, ನ್ಯೂಯಾರ್ಕ್ ಟೈಮ್ಸ್, ಬಿಬಿಸಿ, ಹಜ್ ಸಚಿವಾಲಯದ ವೆಬ್ಸೈಟ್, ಅಲ್ಜಜೀರಾ, ದಿ ಗಾರ್ಡಿಯನ್, ಸೌದಿ ಅರೇಬಿಯಾ ರಾಯಭಾರ ಕಚೇರಿ ವೆಬ್ಸೈಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.