ಹೋಟೆಲ್ ಉದ್ಯಮದಲ್ಲಿ ಜನಪ್ರಿಯ ಹೆಸರು ಅಪೂರ್ವ್ ಭಟ್ ಅವರದು. ಮೂಲತಃ ಭೋಪಾಲ್‌ನವರಾದ ಅವರು ಜಗತ್ತಿನ ಅನೇಕ ಪ್ರಸಿದ್ಧ ಆಹಾರಗಳನ್ನು ಮಾಡುವಲ್ಲಿ ನಿಸ್ಸೀಮರು. ಹೋಟೆಲ್ ನಿರ್ವಹಣೆ ಮತ್ತು ಕೇಟರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರುವ ಅವರು ಮುಖ್ಯ ಭಾಣಸಿಗರಾಗಿ ಹಲವಾರು ಪ್ರಸಿದ್ಧ ಹೋಟೆಲ್‌ಗಳಲ್ಲಿ ಕೆಲಸ ಮಾಡಿದ್ದಾರೆ.

ಅಡುಗೆ ಮಾಡುವುದರ ಜೊತೆಗೆ ದೇಶ ಸುತ್ತುವುದು ಮತ್ತು ಸಿನೆಮಾ ನೋಡುವುದು ಅವರ ಇತರೆ ಹವ್ಯಾಸಗಳು. ತಮ್ಮ ಹದಿನಾರು ವರ್ಷಗಳ ಅನುಭವದಲ್ಲಿ ಅವರು ಲಲಿತ್, ಹಿಲ್ಟನ್, ಕಾರ್ಲ್‌ಸನ್, ತಾಜ್, ಸ್ಪೈಸ್ ಟೈಲರ್ ಸೇರಿದಂತೆ ಅನೇಕ ತಾರಾ ಹೋಟೆಲ್‌ಗಳಿಗೆ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬರ್ಗ್‌ಗ್ರುಯೆನ್ ಹೋಟೆಲ್‌ನ ಮುಖ್ಯ ಬಾಣಸಿಗರಾಗಿರುವ ಅಪೂರ್ವ್ ಭಟ್ ಅವರು ಭೂಮಿಕಾ ಓದುಗರಿಗಾಗಿ ವಿಶೇಷ ಚಾಟ್ ಹಾಗೂ ಸಿಹಿ ತಿಂಡಿಗಳ ಪರಿಚಯ ಮಾಡಿಕೊಟ್ಟಿದ್ದಾರೆ.

* ಕರಿಮೆಣಸು ಮತ್ತು ಪುದಿನಾ ಸ್ಟ್ರಿಪ್ಸ್‌ಗಳನ್ನು ಗಾಳಿತೂರದ ಪಾತ್ರೆಯಲ್ಲಿ ಶೇಖರಿಸಿ ಒಂದು ವಾರ ಇಡಬಹುದು.
* ಕರಿಮೆಣಸು ಮತ್ತು ಪುದಿನಾ ಸ್ಟ್ರಿಪ್‌ಗಳು ಹೆಚ್ಚು ಕ್ರಿಸ್ಪಿ ಆಗಲು ಹಿಟ್ಟಿಗೆ ಸ್ವಲ್ಪ ಹೆಚ್ಚುವರಿ ಎಣ್ಣೆ ಸೇರಿಸಿ
* ಗೋಡಂಬಿ ಮತ್ತು ಕೇಸರಿ ಸಿಹಿಯನ್ನು ಮಾಡುವಾಗ ಹಾಲು ಕಾಯಿಸಿದ ನಂತರ ಅದಕ್ಕೆ ½ ಚಮಚ ಕಾಫಿ ಪುಡಿ ಸೇರಿಸಿ. ಇದರಿಂದ ಸಿಹಿಗೆ ಹಿತವಾದ ಪರಿಮಳ ಬರುತ್ತದೆ.
* ಕಾರ್ನ್ ಚಾಟ್ ತಯಾರಿಸುವ ಮೊದಲು ಕಾರ್ನ್‌ಗಳನ್ನು ಒಂದು ಮಧ್ಯಮ ಬಿಸಿ ಪ್ಯಾನ್ ಮೇಲೆ ಹಾಕಿ ಒಣಗಿಸಿಕೊಳ್ಳಿ.

ಗೋಡಂಬಿ ಮತ್ತು ಕೇಸರಿ ಸಿಹಿ

ನಾಲ್ಕು ಜನರಿಗೆ ಅಡುಗೆ ಮಾಡಲು ಬೇಕಾಗುವ ಸಮಯ: 1.30 ಗಂಟೆ
ಬೇಕಾಗುವ ಸಾಮಗ್ರಿಗಳು: ಗೋಡಂಬಿ 1 ಕೆ.ಜಿ., ಸಕ್ಕರೆ ಅರ್ಧ ಕೆ.ಜಿ., ಕೇಸರಿ ಮತ್ತು ಸಿಲ್ವರ್ ಆರ್ಕ್.

ಮಾಡುವ ವಿಧಾನ: ಒಂದು ಕಡಾಯಿಯಲ್ಲಿ ಪುಡಿ ಮಾಡಿದ ಗೋಡಂಬಿ ಮತ್ತು ಸಕ್ಕರೆಯನ್ನು ಹಾಕಿ. ಜಿಗುಟಾಗದ ಹಾಗೆ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಸಮಯ ಆರಲು ಬಿಡಿ. ಆರಿದ ನಂತರ ಮಿಶ್ರಣವನ್ನು ಎರಡು ಭಾಗ ಮಾಡಿ.

ಒಂದು ಭಾಗದಲ್ಲಿ ಕೇಸರಿ ಸೇರಿಸಿ. ಈಗ ಹಳದಿ ಮಿಶ್ರಣದ ಲೇಯರ್ ಮಾಡಿಕೊಂಡು ಒಂದು ಬಿಳಿ ಲೇಯರ್ ಹಾಗೂ ಒಂದು ಹಳದಿ ಲೇಯರ್ ಅನ್ನು ಹಾಕುತ್ತ ರೋಲ್ ಮಾಡಿ. ಅದನ್ನು ತ್ರಿಕೋನ ಆಕಾರದಲ್ಲಿ ಕತ್ತರಿಸಿದರೆ ನೋಡಲೂ ಅಂದವಾದ ರುಚಿ ರುಚಿ ತಿಂಡಿ ಸಿದ್ಧ.

ಕರಿಮೆಣಸು– ಪುದಿನಾ ಸ್ಟ್ರಿಪ್ಸ್

ಅಡುಗೆ ಮಾಡಲು ಬೇಕಾಗುವ ಸಮಯ: 1 ಗಂಟೆ

ಬೇಕಾಗುವ ಸಾಮಗ್ರಿಗಳು: ಮೈದಾ 600 ಗ್ರಾಂ, ಕರಿಮೆಣಸು ಅಥವಾ ಪುದೀನ ಚಟ್ನಿ 25 ಗ್ರಾಂ, ದಾಲ್ಡಾ 100 ಗ್ರಾಂ, ರುಚಿಗೆ ಉಪ್ಪು, ಸ್ವಲ್ಪ ಜೀರಿಗೆ, ಚಿಟಿಕೆ ಇಂಗು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೇಲೆ ತಿಳಿಸಲಾದ ಎಲ್ಲ ಸಾಮಗ್ರಿಗಳನ್ನು ಬಳಸಿಕೊಂಡು ಸ್ವಲ್ಪ ಗಟ್ಟಿಯಾದ ಹಿಟ್ಟನ್ನು ಕಲೆಸಿಕೊಳ್ಳಿ. ರೋಲರ್ ಪ್ಯಾನ್ ಬಳಸಿ ರೋಲ್ ಮಾಡಿಕೊಳ್ಳಿ. ಸ್ಟ್ರಿಪ್ಸ್‌್‌ಗಳನ್ನಾಗಿ ಕತ್ತರಿಸಿಕೊಳ್ಳಿ. ನಂತರ ಸುರುಳಿ ಮಾಡಿ ಡೀಪ್ ಫ್ರೈ ಮಾಡಿ.

ರಾಸ್ಪ್‌ಬೆರ್ರಿ ಗುಲಾಬ್ ಜಾಮೂನ್

ಬೇಕಾಗುವ ಸಾಮಗ್ರಿಗಳು: ಹಾಲಿನ ಪುಡಿ 500 ಗ್ರಾಂ, ತುಪ್ಪ / ಎಣ್ಣೆ 3 ಲೀಟರ್, ಕೋಯಾ 500 ಗ್ರಾಂ, ಸಕ್ಕರೆ 2 ಕೆ.ಜಿ., ಹಸಿರು ಏಲಕ್ಕಿ ಪುಡಿ ಸ್ವಲ್ಪ, ರಾಸ್ಪ್‌ಬೆರ್ರಿ ಪ್ಯುರಿ, ಪಿಸ್ತಾ 100 ಗ್ರಾಂ,

ಪನೀರ್ 250 ಗ್ರಾಂ,
ಮಾಡುವ ವಿಧಾನ: ಹಾಲಿನ ಪುಡಿ, ಕೋಯಾ, ಪನೀರ್ ಮತ್ತು ಏಲಕ್ಕಿ ಪುಡಿಯನ್ನು ತೆಗೆದುಕೊಂಡು ಒಂದು ಬೌಲ್‌ನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಅವುಗಳಿಂದ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಪಕ್ಕಕ್ಕೆ ಇಡಿ. ಸಕ್ಕರೆಯ ಸಿರಪ್ ಮಾಡಿಕೊಳ್ಳಿ (ಸ್ವಲ್ಪ ದಪ್ಪಗೆ ಮಂದವಾಗಿರಲಿ). ನಂತರ ಸಕ್ಕರೆಯ ಸಿರಪ್‌ನಲ್ಲಿ ರಾಸ್ಪ್‌ಬೆರ್ರಿ ಪ್ಯುರಿ ಸೇರಿಸಿ. ಒಂದು ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಸಾಧಾರಣ ಉರಿ ಇರಲಿ. ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಟ್ಟುಕೊಂಡ ಜಾಮೂನ್‌ಗಳನ್ನು ಎಣ್ಣೆಯಲ್ಲಿ ಹಾಕಿ ಕರಿಯಿರಿ. ಅವು ಕಂದು ಬಣ್ಣ ಬರೆವವರೆಗೆ ಕರಿದು ತೆಗೆಯಿರಿ. ನಂತರ ಅವುಗಳನ್ನು ಸಕ್ಕರೆ ಸಿರಪ್‌ನಲ್ಲಿ ಹಾಕಿ ಮುಳುಗಿಸಿ.

ಅಮೆರಿಕನ್ ಕಾರ್ನ್ ಚಾಟ್

ಅಡುಗೆ ಮಾಡಲು ಬೇಕಾಗುವ ಸಮಯ: 1.30 ಗಂಟೆ
ಬೇಕಾಗುವ ಸಾಮಗ್ರಿಗಳು: ಪಾನಿಪುರಿ 24, ಅಮೆರಿಕನ್ ಕಾರ್ನ್ 200 ಗ್ರಾಂ, ಸ್ಪ್ರಿಂಗ್ ಈರುಳ್ಳಿ 50 ಗ್ರಾಂ, ಕತ್ತರಿಸಿದ ಕೆಂಪು ಈರುಳ್ಳಿ 75 ಗ್ರಾಂ, ಹಸಿರು ಬಟಾಣಿ 50 ಗ್ರಾಂ, ಕತ್ತರಿಸಿದ ಕೊತ್ತಂಬರಿ ಸ್ವಲ್ಪ, ಕತ್ತರಿಸಿದ ಮಾವಿನಕಾಯಿ ಸ್ವಲ್ಪ, ಚಾಟ್ ಮಸಾಲಾ, ಕೆಂಪು ಕಾರದ ಪುಡಿ ಸ್ವಲ್ಪ, ಪುದಿನಾ ಚಟ್ನಿ, ಹುಣಿಸೇಹಣ್ಣಿನ ಚಟ್ನಿ.

ಮಾಡುವ ವಿಧಾನ: ಒಂದು ಪ್ಯಾನ್‌ನಲ್ಲಿ ಕಡಿಮೆ ಎಣ್ಣೆ ಹಾಕಿ ಅಮೆರಿಕನ್ ಕಾರ್ನ್ ಅನ್ನು ಹುರಿದುಕೊಳ್ಳಿ. ಕಾರ್ನ್ ಕಾಳುಗಳ ಮೇಲೆ ಕಪ್ಪುಕಲೆಗಳು ಕಾಣುವವರೆಗೆ ಪ್ಯಾನ್ ಅನ್ನು ಅಲುಗಾಡಿಸಬೇಡಿ. ಕಾರ್ನ್ ಬೆಂದ ಮೇಲೆ ಹಸಿರು ಬಟಾಣಿ ಹಾಕಿ ಸ್ವಲ್ಪ ಕೈಯಾಡಿಸಿ ಆರಲು ಬಿಡಿ.

ಇನ್ನೊಂದು ಪ್ಯಾನ್‌ನಲ್ಲಿ ಪುರಿಯನ್ನು ಬಿಟ್ಟು ಉಳಿದೆಲ್ಲ ಸಾಮಗ್ರಿಗಳನ್ನು ಹಾಕಿ ಕಲಕಿ. ಈಗ ಪುರಿಗಳನ್ನು ಕಾಳಜಿಯಿಂದ ಎರಡು ತುಂಡುಗಳನ್ನಾಗಿ ಕತ್ತರಿಸಿ. ಪುರಿಯ ತಳ ಮುರಿಯದಂತೆ ಎಚ್ಚರಿಕೆ ವಹಿಸಿ. ತಯಾರಿಸಿಕೊಂಡ ಮಿಶ್ರಣವನ್ನು ಪುರಿಯಲ್ಲಿ ತುಂಬಿ, ಈರುಳ್ಳಿಯಿಂದ ಅಲಂಕರಿಸಿ ಸರ್ವ್ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.