ಕತ್ತು ನೋವೆಂಬುದು ಇತ್ತೀಚೆಗೆ ಸಾರ್ವತ್ರಿಕ ಎಂಬಂತಾಗಿಬಿಟ್ಟಿದೆ. ಕಂಪ್ಯೂಟರ್ ಮುಂದೆ ದೀರ್ಘಕಾಲ ಕುಳಿತು ಕೆಲಸ ಮಾಡುವವರಿಂದ ಹಿಡಿದು ಗೃಹಿಣಿಯವರೆಗೂ ಕಾಡುವ ಈ ನೋವು ಕೆಲವೊಮ್ಮೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯಕೀಯವಾಗಿ ‘ಸರ್ವೈಕಲ್ ಸ್ಪಾಂಡಿಲೋಸಿಸ್’ ಎಂದು ಕರೆಯಲಾಗುವ ಇದುಬೆನ್ನು ಮೂಳೆಯು ಹಂತಹಂತವಾಗಿ ಹಾನಿಗೊಳಗಾಗುವ ಕಾಯಿಲೆ.

ಈ ಸಮಸ್ಯೆಗೆ ಕಾರಣಗಳನ್ನು ಹುಡುಕುತ್ತ ಹೋದರೆ ಇದರ ಮೂಲ ಕತ್ತಲ್ಲ, ಬೆನ್ನುಹುರಿ. ಬೆನ್ನುಹುರಿಯಲ್ಲಿನ ಮೂಳೆಗಳ ನಡುವೆ ಇರುವ ಡಿಸ್ಕ್ನಲ್ಲಿ ಓಸ್ಟಿಯೋಫೈಟ್ ಎಂಬ ರಚನೆ ಉಂಟಾಗುವುದಲ್ಲದೇ ಅಕ್ಕಪಕ್ಕದ ಮೃದು ಅಂಗಾಂಶ ಕೂಡ ಸೇರಿಕೊಂಡು ಸರ್ವೈಕಲ್ ಸ್ಪಾಂಡಿಲೋಸಿಸ್ ತೊಂದರೆ ಆರಂಭವಾಗುತ್ತದೆ. ಈ ಸಮಸ್ಯೆಯಲ್ಲಿ ಮೊದಲು ಕಾಣಿಸಿಕೊಳ್ಳುವ ಸಾಮಾನ್ಯ ಲಕ್ಷಣವೆಂದರೆ ಕತ್ತು ನೋವು. ಇದಕ್ಕೆ ಕತ್ತಿನ ಅರ್ಥ್ರೈಟಿಸ್ ಎಂದೂ ಗುರುತಿಸುವ ರೂಢಿಯಿದೆ.

ಸಾಮಾನ್ಯವಾಗಿ ಮೂರನೇ ಎರಡರಷ್ಟು ಮಂದಿ ತಮ್ಮ ಜೀವಿತಾವಧಿಯಲ್ಲಿ ಒಂದಲ್ಲ ಒಂದು ಬಾರಿ ಈ ಕತ್ತು ನೋವಿನ ಸಮಸ್ಯೆಗೆ ಒಳಗಾಗುವುದಿದೆ. ಇವರಲ್ಲಿ ಶೇ 5ರಷ್ಟು ಮಂದಿಗೆ ಈ ಕತ್ತು ನೋವು ತೀವ್ರ ವೈಕಲ್ಯ ಉಂಟು ಮಾಡುತ್ತದೆ. ಕೆಲವು ಪ್ರಕರಣಗಳಲ್ಲಿ ಬಾಧೆಪೀಡಿತರಿಗೆ ನಡೆಯಲೂ ಕೂಡ ಆಗುವುದಿಲ್ಲ ಅಥವಾ ನಡೆಯಲು ಬಹಳ ಕಷ್ಟಪಡಬೇಕಾಗುತ್ತದೆ. 60ಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಸುಮಾರು ಶೇ 85ರಷ್ಟು ಜನರು ಈ ಸರ್ವೈಕಲ್ ಸ್ಪಾಂಡಿಲೋಸಿಸ್ ಸಮಸ್ಯೆಯಿಂದ ಬಳಲುತ್ತಾರೆ. ಆದರೆ ಅವರಲ್ಲಿ ಎಲ್ಲರಿಗೂ ನೋವಿನ ಅನುಭವವಾಗುವುದಿಲ್ಲ.

ಸಾಮಾನ್ಯವಾಗಿ ಈ ರೋಗ ಯಾವಾಗ ಆರಂಭವಾಗುತ್ತದೆ ಎಂದು ಹೇಳುವುದು ಕಷ್ಟದ ಕೆಲಸ. ಅಂಗಾಂಶದಲ್ಲಿ ತೀವ್ರತರದ ಬದಲಾವಣೆಗಳಾದರೂ ಕೂಡ ಯಾವುದೇ ಲಕ್ಷಣಗಳು ಗೋಚರಿಸದು. ಆದರೆ ಕತ್ತು ನೋವು, ಬಿಗಿತ ಅಥವಾ ನರಗಳ ಸಮಸ್ಯೆ ತಲೆದೋರಬಹುದು.

ಲಕ್ಷಣಗಳು

ಬೆನ್ನು ನೋವು ಎನಿಸಿದರೂ ಬೇರೆ ರೀತಿಯಲ್ಲಿ ಅನುಭವಕ್ಕೆ ಬರಬಹುದು. ಕೆಲವು ಗಂಭೀರ ಪ್ರಕರಣಗಳಲ್ಲಿ ಮೂಳೆಗಳ ನಡುವಿನ ಡಿಸ್ಕ್ ಸಮೀಪದ ನರವನ್ನು ಒತ್ತಿದಾಗ ಪ್ರಜ್ಞೆ ಕೂಡ ತಪ್ಪಬಹುದು. ಕೆಲವೊಮ್ಮೆ ಓಡಾಡುವುದು ಕಷ್ಟವಾಗಬಹುದು.

ಓಡಾಡುವಾಗ ಅಥವಾ ಕೈಕಾಲುಗಳನ್ನು, ಶರೀರದ ಇತರ ಭಾಗಗಳನ್ನು ಅಲ್ಲಾಡಿಸಿದಾಗ ಹೆಚ್ಚಾಗುವ ಕುತ್ತಿಗೆ ನೋವು,ತಲೆಯ ಹಿಂಭಾಗ, ಭುಜ ಮತ್ತು ತೋಳಿನಲ್ಲಿ ನೋವು,ಕುತ್ತಿಗೆಯಲ್ಲಿ ಬಿಗಿತ, ತಲೆ ಸುತ್ತುವುದು, ದೇಹದ ಸಮತೋಲನದಲ್ಲಿ ವ್ಯತ್ಯಾಸ,ಸ್ಯೂಡೊ-ಎಂಜೈನಾ (ಎದೆನೋವಿನ ಭಾವನೆ),ರೆಟ್ರೊ ವರ್ಟಿಬ್ರಲ್ ನೋವು ಅಥವ ಸಣ್ಣ ನೋವು, ಲಕ್ಷಣಗಳನ್ನು ಅರಿತ ನಂತರ ರೋಗವನ್ನು ಗುರುತಿಸುವುದು ಸುಲಭ.

ರೋಗವನ್ನು ಅರ್ಥ ಮಾಡಿಕೊಳ್ಳಲು ಕೆಲವು ಚಿಹ್ನೆಗಳು ಸಹಕಾರಿ.

ಪಕ್ಕೆಯಲ್ಲಿ ಕಾಣಿಸಿಕೊಳ್ಳುವ ನೋವು,ದೇಹದ ಅಂಗಾಂಗಗಳನ್ನು ಅಲ್ಲಾಡಿಸಲು ಕಷ್ಟವಾಗುತ್ತದೆ,ದೇಹದಲ್ಲಿ ಶಕ್ತಿ ಕುಂದಬಹುದು,ಸಂವೇದನೆ ಕಡಿಮೆಯಾಗುವುದು.

ಸ್ನಾಯು ಸಮಸ್ಯೆ

ಸರ್ವೈಕಲ್ ಸ್ಪಾಂಡಿಲೋಸಿಸ್ ಎಂದರೆ ಬೆನ್ನು ಮೂಳೆಯ ತೊಂದರೆಗಳು ಅಥವಾ ಸೋಂಕು ಅಥವಾ ಬೆನ್ನುಮೂಳೆಯ ಡಿಸ್ಕ್ ತೊಂದರೆಯಾಗಿರಬಹುದು ಹೀಗಾಗಿ, ಈ ಸಮಸ್ಯೆಗೆ ವೈದ್ಯರ ಸಲಹೆ ಪಡೆಯಲು ಹೋದಾಗ ಕೆಲವು ತಪಾಸಣೆಗಳಿಗೆ ಒಳಗಾಗಬೇಕಾಗಬಹುದು. ಈ ಕಾಯಿಲೆ ಎಷ್ಟು ಗಂಭೀರವಾಗಿದೆ ಎಂದು ಅರ್ಥಮಾಡಿಕೊಳ್ಳಲು ವೈದ್ಯರಿಗೆ ನೆರವಾಗುವ ಈ ಪರೀಕ್ಷೆಗಳಿಗೆ ಒಳಗಾಗುವುದು ಉತ್ತಮ.

ಎಕ್ಸ್ರೇ

ಬೆನ್ನುಮೂಳೆ (ಕಂಪ್ಯೂಟೆಡ್ ಟೊಮೊಗ್ರಫಿ)

ಬೆನ್ನುಮೂಳೆಯ ಎಂಆರ್ಐ

ರಕ್ತ ಪರೀಕ್ಷೆ (ಸೋಂಕು ಪರೀಕ್ಷೆಗೆ)

ಎಲೆಕ್ಟ್ರೊ ತಪಾಸಣೆ

ಎಲೆಕ್ಟ್ರೊ ಟೊಮೊಗ್ರಫಿ

ರೋಗವನ್ನು ಗುರುತಿಸುವುದು ಕಷ್ಟ. ಆದ್ದರಿಂದ ಪ್ರತ್ಯೇಕ ರೋಗ ನಿರ್ಣಯದ ಜೊತೆಗೆ ವೈದ್ಯಕೀಯ ತಪಾಸಣೆ ನೆರವಾಗುತ್ತದೆ. ಮೂಳೆಯ ತುದಿಯಲ್ಲಿ ಸಣ್ಣ ಬೆಳವಣಿಗೆಯಂತಹ ತೊಂದರೆಗಳನ್ನು ಕಂಡುಕೊಳ್ಳಲು ಪ್ರತ್ಯೇಕ ರೋಗನಿರ್ಣಯಗಳು ನೆರವಾಗುತ್ತವೆ.

ಮಾನಸಿಕ, ಭಾವನಾತ್ಮಕ ಕಾರಣಗಳಿಂದ ಹೆಚ್ಚಾಗುವ ದೈಹಿಕ ನೋವು (ಸೈಕೋಜೆನಿಕ್ ನೋವು)

ಉರಿಯೂತ- ರುಮಾಟೈಡ್ ಅರ್ಥ್ರೈಟಿಸ್ ಮೊದಲಾದವು.

ಸೋಂಕು– ಒಸ್ಟಿಯೋಪೋರೋಸಿಸ್, ಟಿ.ಬಿ.

ಕ್ಯಾನ್ಸರ್ -ಪ್ರಾಥಮಿಕ ಗಡ್ಡೆ, ಮೈಲೋಮ

ಸರ್ವೈಕಲ್ ಸ್ಪಾಂಡಿಲೋಸಿಸ್ ಎಂಬುದು ಖಚಿತವಾದ ನಂತರ ರೋಗಿಗೆ ಅವರ ಆರೋಗ್ಯ ಸ್ಥಿತಿಯನ್ನು ಆಧರಿಸಿ ಕೆಲವು ಚಿಕಿತ್ಸೆಗಳನ್ನು ನೀಡಲಾಗುತ್ತದೆ. ರೋಗಿಯ ಪರಿಸ್ಥಿತಿ ನೋಡಿಕೊಂಡು ಶಸ್ತ್ರಚಿಕಿತ್ಸೆಯನ್ನೂ ಮಾಡಬಹುದು.

(ಲೇಖಕರು ನರರೋಗಶಸ್ತ್ರಚಿಕಿತ್ಸಾ ತಜ್ಞರು, ಸ್ಪರ್ಶ್ ಆಸ್ಪತ್ರೆ)

ಚಿಕಿತ್ಸೆ:ಒತ್ತಡ ನಿರ್ವಹಣೆ,ಕುಳಿತುಕೊಳ್ಳುವ, ಓಡಾಡುವ ಭಂಗಿ ಕುರಿತು ಸಲಹೆ,ನೋವು ನಿವಾರಕ ಔಷಧ,ಖಿನ್ನತೆ ನಿವಾರಕಗಳು

ಯೋಗ:ಸರ್ವೈಕಲ್ ಕಾಲರ್ ಧರಿಸುವುದು,ಕುತ್ತಿಗೆ ನೋವಿಗೆ ಫಿಸಿಯೋಥೆರಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.