ಗುರುವಾರ, 24 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ರೈತಾಪಿ ವರ್ಗದವರಿಗೆ ಶುಭವಾಗುವುದು
Published 24 ಅಕ್ಟೋಬರ್ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮದ ಸಲುವಾಗಿ ಕುಟುಂಬಸ್ಥರೆಲ್ಲ ಒಂದಾಗುವ ಸನ್ನಿವೇಶಗಳಿವೆ. ಮಗಳ ಮದುವೆಯ ಭರ್ಜರಿ ತಯಾರಿಗಳು ನಡೆಯಲಿವೆ. ಸುಮಧುರ ಗಾಯನ ಕೇಳುವಿರಿ.
ವೃಷಭ
ರೇಷ್ಮೆ ವಸ್ತ್ರಗಳ ತಯಾರಕರಿಗೆ ಹಾಗೂ ಮಾರಾಟಗಾರರಿಗೆ ವಿಶೇಷವಾದ ವ್ಯಾಪಾರವಾಗುವುದು. ದೇಶದ ಪರ್ಯಟನೆ ಮಾಡುವ ಕನಸಿಗೆ ಪುಷ್ಟಿ ದೊರೆಯುತ್ತದೆ. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದುವಿರಿ.
ಮಿಥುನ
ಗುರಿ ತಲುಪುವ ವೇಳೆಯಲ್ಲಿ ಎದುರಾಗುವಂಥ ವಿಘ್ನಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಗೃಹಸ್ಥರಿಗೆ ಮಕ್ಕಳ ವಿಷಯವಾಗಿ ತಲೆ ನೋವಾಗಬಹುದು. ದೇಹಕ್ಕೆ ಆಗದಂಥ ಆಹಾರದಿಂದ ದೂರವಿರಿ.
ಕರ್ಕಾಟಕ
ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರು, ಸ್ವಂತ ಉದ್ಯೋಗ ನಡೆಸುವ ಯೋಚನೆ ಬಂದರೂ ಅದರಂತೆ ನಡೆಯುವುದು ಸರಿಯಲ್ಲ. ದುಂದುವೆಚ್ಚದಿಂದ ಹಣದ ಅಭಾವ ಉಂಟಾಗುತ್ತದೆ.
ಸಿಂಹ
ತರಬೇತಿ ಹೊಂದಿದ ಮರದ ಕೆತ್ತನೆಯ ಕುಶಲಕರ್ಮಿಗಳಿಗೆ ಆದಾಯ ಮತ್ತು ಬೇಡಿಕೆ ಹೆಚ್ಚಲಿದೆ. ಚರ್ಮವ್ಯಾಧಿಯಂತಹ ಅನಾರೋಗ್ಯ ಎದುರಾಗಬಹುದು. ಮಗನಿಗೆ ಉದ್ಯೋಗ ದೊರೆತು ಸಂತೋಷ ಆಗುವುದು.
ಕನ್ಯಾ
ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಪ್ರವಾಸದ ಯೋಜನೆ ಹಾಕುವಿರಿ. ಇಂದಿನ ಯೋಚನೆ ಹೆಚ್ಚಿನ ಖರ್ಚಿಗೆ ದಾರಿಯಾದರೂ, ಅದರ ಫಲದಿಂದ ಸಂತೋಷವಿರುವುದು. ಹಬ್ಬದ ಖರೀದಿ ಮಾಡುವಿರಿ.
ತುಲಾ
ಅಧಿಕಾರಿಗಳ ಜತೆ ಸರಿ ಸಮಯದಲ್ಲಿ ಮುಕ್ತ ಚರ್ಚೆ ಮಾಡಿದಲ್ಲಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಪಡೆದುಕೊಳ್ಳಬಹುದು. ಕುಟುಂಬದಲ್ಲಿ ಸೌಹಾರ್ದತೆ ಕಾಪಾಡುವಲ್ಲಿ ಯಶಸ್ವಿಯಾಗುವಿರಿ.
ವೃಶ್ಚಿಕ
ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆತು ಮುಂದಿನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಯೋಜನೆಗಳಿಗೆ ಸ್ತ್ರೀವರ್ಗದಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ.
ಧನು
ಗ್ರಹಗಳ ಚಲನೆಯು ತಿರುಗಾಟವನ್ನು ಮಾಡಿಸುವುದರಿಂದ ಆರೋಗ್ಯದ ಬಗ್ಗೆ ಗಮನಹರಿಸುವುದು ಅನಿವಾರ್ಯ. ಸಂಸ್ಥೆಯ ಅಭಿವೃದ್ಧಿಗಾಗಿ ಕಾರ್ಮಿಕ ವರ್ಗದೊಡನೆ ಸಕಾರಾತ್ಮಕ ಮಾತುಕತೆ ನಡೆಸಲು ನಿರ್ಧರಿಸಿ.
ಮಕರ
ಕುಟುಂಬದ ಹಿರಿಯರ ಆರೋಗ್ಯ ನಷ್ಟದಿಂದ ಆಸ್ಪತ್ರೆಯ ತಿರುಗಾಟದ ಕ್ಲೇಶ ಉಂಟಾಗುವುದು. ಹಣ್ಣು ಹೂವಿನ ಮಾರಾಟಗಾರರಿಗೆ ಸಾಧಾರಣ ಮಾರಾಟವಿರುವುದು. ಕಲಿಕೆಯಲ್ಲಿ ಸೋಮಾರಿತನದಿಂದ ಹಿಂದುಳಿಯುವಿರಿ.
ಕುಂಭ
ಜಮೀನು ಖರೀದಿ ಅಥವಾ ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ವರಮಾನವನ್ನು ಹೆಚ್ಚಿಸಿಕೊಳ್ಳಬಹುದು. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಸ್ಥಾನಮಾನ ಹೆಚ್ಚಾಗಲಿದೆ. ರೈತಾಪಿ ವರ್ಗದವರಿಗೆ ಶುಭವಾಗುವುದು.
ಮೀನ
ಕಚೇರಿ ಕೆಲಸಗಳನ್ನು ಸಮರ್ಪಣಾ ಭಾವನೆಯಿಂದ ನಿರ್ವಹಿಸಿ. ಸ್ವಂತ ಉದ್ಯೋಗ ನಡೆಸುವವರ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಇಂದಿನ ದೂರದ ಪ್ರಯಾಣ ಸುಖಕರವಾಗಿರುವುದು.
ADVERTISEMENT
ADVERTISEMENT