ದಿನ ಭವಿಷ್ಯ: ಪದವೀಧರರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಂಭವವಿದೆ
Published 30 ಅಕ್ಟೋಬರ್ 2024, 0:19 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿರುವವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಆದಾಯವಿದೆ. ಕೋರ್ಟು ಕಚೇರಿಗಳಲ್ಲಿನ ಕೆಲಸಗಳಿಗೆ ಅಲೆ ದಾಟ ಕಡಿಮೆಯಾಗುವುದು. ಅಪೇಕ್ಷಿತರಿಗೆ ಬ್ಯಾಂಕ್‌ನಿಂದ ಸಾಲ ಸಿಗಲಿದೆ.
ವೃಷಭ
ರಾಜಕೀಯದಲ್ಲಿ ತಮ್ಮವರಿಂದಲೇ ತೋರಿ ಬರುವ ವಿರೋಧಗಳನ್ನು ಜಾಣ್ಮೆಯಿಂದ ನಿವಾರಿಸಿ. ವೈವಾಹಿಕ ಮಾತುಕತೆಗಳ ಭಿನ್ನಾಭಿಪ್ರಾಯಗಳು ದೂರಾಗುವುದು. ಉದರವ್ಯಾಧಿಯಂಥ ಸಮಸ್ಯೆ ಎದುರಾಗಬಹುದು.
ಮಿಥುನ
ಕುಟುಂಬದಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಹೆಂಡತಿಯ ಮಾತುಗಳಿಗೆ ಪ್ರಾಮುಖ್ಯತೆ ನೀಡಿರಿ. ಮನೆಯನ್ನು ಅಲಂಕರಿಸಿ ಬದಲಾವಣೆ ತರಲು ಒಳ್ಳೆಯ ದಿನ. ಪದವೀಧರರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಂಭವವಿದೆ.
ಕರ್ಕಾಟಕ
ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಉದ್ಯೋಗದ ಬಗ್ಗೆ ಆಸಕ್ತಿ ಹೆಚ್ಚುವುದು, ಆದರೆ ವಿದ್ಯಾಭ್ಯಾಸ ನಿಲ್ಲಿಸುವುದು ಸರಿಯಲ್ಲ. ಕಾನೂನು ಕಾಯ್ದೆ ವಿಚಾರದಲ್ಲಿ ಹೋರಾಟ ನಡೆಸಿದರೆ ಜಯ ನಿಮ್ಮಪಾಲಿಗಿರುವುದು.
ಸಿಂಹ
ವೃತ್ತಿಯಲ್ಲಿ ಸಮಸ್ಯೆಗಳು ಬಂದರೂ ಧೈರ್ಯದಿಂದ ಎದುರಿಸಲು ಹಿಂಜರಿಕೆ ಬೇಡ. ದ್ವಂದ್ವ ರೀತಿಯ ಆಲೋಚನೆಗಳಿಂದ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಮುಂದುವರಿಯುವುದು.
ಕನ್ಯಾ
ಮಿತ್ರರಲ್ಲಿ ಸ್ನೇಹವೂ, ಬಂಧುಗಳಲ್ಲಿ ಸಂಬಂಧವನ್ನು ಉಳಿಸಿಕೊಂಡು ಹೋಗುವುದು ಇಹಕ್ಕೂ ಹಾಗೂ ಪರಕ್ಕೂ ಒಳಿತು ಉಂಟುಮಾಡುತ್ತದೆ. ಹಣದ ವಿಚಾರದಲ್ಲಿ ಮಿತವ್ಯಯಿಗಳಾಗಿರಿ.
ತುಲಾ
ಪಶುಸಂಗೋಪನೆ ಮಾಡುವವರಿಗೆ ಅಥವಾ ಸಾಕು ಪ್ರಾಣಿಗಳಿಂದಲೇ ಸಣ್ಣ ಪುಟ್ಟ ಹಾನಿ ಉಂಟಾಗಬಹುದು. ಜಾಗ್ರತೆ ಇರಲಿ. ಸೂಕ್ಷ್ಮವಾಗಿ ಯೋಚಿಸಿ ಅಥವಾ ಮಾರ್ಗದರ್ಶನ ಪಡೆದು ಕಾರ್ಯದಲ್ಲಿ ಮುನ್ನುಗ್ಗಿ.
ವೃಶ್ಚಿಕ
ಕೋರ್ಟಿನಲ್ಲಿರುವ ಹಳೆಯ ವ್ಯಾಜ್ಯಗಳು ಮುಕ್ತಾಯಗೊಳ್ಳುವ ಸಂಭವ ಹೆಚ್ಚಾಗಿರುವುದು. ವಿವಾದವಿರುವ ವಿಷಯಗಳು ಇತ್ಯರ್ಥಗೊಂಡು ಮನಸ್ಸಿಗೆ ಹಿತವೆನಿಸುವುದು. ನಿಲುವಿನಿಂದ ಹಿಂದೆ ಸರಿಯಬೇಡಿ.
ಧನು
ತೋಟ ಮತ್ತು ಎಸ್ಟೇಟ್ ಕೆಲಸಗಾರರಿಗೆ ಉದ್ಯೋಗದಲ್ಲಿ ಭಯ ಹುಟ್ಟುವಂಥ ಘಟನೆ ಈ ದಿನ ನಡೆಯಬಹುದು. ಸೇವಕ ವರ್ಗದವರಿಗೆ ಆದಾಯ ಹೆಚ್ಚಿದಂತೆ ಕೆಲಸದ ವಿಸ್ತೀರ್ಣವೂ ಹೆಚ್ಚುವುದು.
ಮಕರ
ಬಹಳ ದಿನದ ಉಳಿತಾಯದ ಹಣವನ್ನು ಸುವ್ಯವಸ್ಥಿತವಾಗಿ ಇರಿಸಲು ಬೇಕಾದ ಮಾರ್ಗವನ್ನು ತಿಳಿದುಕೊಳ್ಳಿ. ದೈವಾನುಗ್ರಹದಿಂದ ಕೆಲಸಗಳೆಲ್ಲವೂ ನಿರಾತಂಕವಾಗಿ, ನಿರಾಳವಾಗಿ ನೆರೆವೇರುವುದು.
ಕುಂಭ
ವಿದ್ಯಾರ್ಥಿಗಳು ಓದಿನ ವಿಷಯಗಳ ಬಗ್ಗೆ ಸ್ನೇಹಿತರೊಡನೆ ಚರ್ಚೆ ನಡೆಸುವುದರಿಂದ ವಿಚಾರ ಸಂಪೂರ್ಣವಾಗಿ ಅರ್ಥವಾಗಲಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಂದರ್ಶನಕ್ಕೆ ತಯಾರಿ ಮಾಡಿಕೊಳ್ಳಿರಿ.
ಮೀನ
ಲೇವಾದೇವಿ ವ್ಯವಹಾರ ಮಾಡುವವರು ಸಾಲ ಕೊಡುವ ಬಗ್ಗೆ ಯೋಚಿಸಿ ಮುಂದುವರಿಯುವುದು ಉತ್ತಮ. ಹೂಡಿಕೆ ಅಥವಾ ಆಸ್ತಿ ಕೊಳ್ಳುವ ವಿಚಾರದಲ್ಲಿನ ಮಡದಿಯೊಂದಿಗಿನ ಪ್ರಸ್ತಾಪ ಫಲಪ್ರದ.