ಬೆಂಗಳೂರು: ಮಹಿಳೆಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ತೌಸೀಫ್ ಅಲಿ ಖಾನ್ (33) ಎಂಬುವವರನ್ನು 9 ವರ್ಷಗಳ ಬಳಿಕ ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

‘ಜೆ.ಪಿ. ನಗರದ ತೌಸೀಫ್, 2011ರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಆರೋಪಿ, 2015ರಿಂದ ನ್ಯಾಯಾಲಯದ ವಿಚಾರಣೆಗೆ ಗೈರಾಗಿ ತಲೆಮರೆಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸಲಾಗಿತ್ತು. ಆರೋಪಿ ಪತ್ತೆಯಾಗದಿದ್ದರಿಂದ, ಪ್ರಕರಣದ ತನಿಖೆಯೂ ಅರ್ಧಕ್ಕೆ ನಿಂತಿತ್ತು. ಇತ್ತೀಚೆಗೆ ಹಳೇ ಪ್ರಕರಣಗಳ ಮರು ಪರಿಶೀಲನೆ ನಡೆಸಿ, ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಕೆಲ ಸುಳಿವು ಸಂಗ್ರಹಿಸಿ, ಕೆ.ಆರ್. ಪುರದ ಅವಲಹಳ್ಳಿ ಬಳಿ ಆರೋಪಿಯನ್ನು ಬಂಧಿಸಲಾಯಿತು’ ಎಂದರು.

‘ಗ್ಯಾರೇಜ್‌ವೊಂದರಲ್ಲಿ ಮೆಕ್ಯಾನಿಕಲ್ ಆಗಿ ತೌಸೀಫ್ ಕೆಲಸ ಮಾಡುತ್ತಿದ್ದ. ಈತ ಪ್ರಕರಣವೊಂದರ ಆರೋಪಿ ಎಂಬುದು ಅಕ್ಕ–ಪಕ್ಕದವರಿಗೆ ಗೊತ್ತಿರಲಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.