ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಸರಾಂತ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ನಿಧನ

Published : 10 ಡಿಸೆಂಬರ್ 2023, 3:39 IST
Last Updated : 10 ಡಿಸೆಂಬರ್ 2023, 3:39 IST
ಫಾಲೋ ಮಾಡಿ
Comments

ಕೊಪ್ಪಳ: ಹೆಸರಾಂತ ರಂಗಭೂಮಿ ಕಲಾವಿದ ಕೊಪ್ಪಳ ಜಿಲ್ಲೆಯ ಕುಕನೂರಿನ ಬಾಬಣ್ಣ ಕಲ್ಮನಿ (90) ಭಾನುವಾರ ನಿಧನರಾದರು.

ರಂಗಭೂಮಿ ಕಲಾವಿದರಾಗಿ, ದೂರದರ್ಶನ ಮತ್ತು ಚಲನಚಿತ್ರ ನಟರಾಗಿ ಅವರು ಹೆಸರಾಗಿದ್ದರು. 1993ರಲ್ಲಿ ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿ ಬಂದಿತ್ತು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯರು ಇದ್ದಾರೆ.

12 ವರ್ಷದ ಬಾಲಕನಾಗಿದ್ದಾಗ ರಂಗಭೂಮಿಯ ಜೊತೆಗಿನ ನಂಟು ಆರಂಭಿಸಿದ ಬಾಬಣ್ಣ ಸ್ತ್ರೀರತ್ನ ನಾಟಕದ ಮೂಲಕ ಬಾಲ ನಟರಾದರು. ನಾಟಕದ ಮೇಲಿನ ಅತೀವ ಪ್ರೀತಿಯಿಂದಾಗಿ ಲಲಿತಕಲಾ ನಾಟ್ಯ ಸಂಘ ಆರಂಭಿಸಿದರು. ಹಿಂದೂ ಮುಸ್ಲಿಂ ಭಾವೈಕ್ಯದ ‘ಸಂತ ಶಿಶುನಾಳ ಸಾಹೇಬರ ಮಹಾತ್ಮೆ’, ‘ಅಜಾತ ನವಲಗುಂದ ನಾಗಲಿಂಗ ಲೀಲೆ’ ಹಾಗೂ ಮೂಡಲಮನೆ ಧಾರವಾಹಿಯಲ್ಲಿ ಅಭಿನಯ ಇವರಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟವು. ಬಾಬಣ್ಣ ಕಲ್ಮನಿ ಅವರಿಗೆ 2021–22ನೇ ಸಾಲಿನ ’ಗುಬ್ಬಿ ವೀರಣ್ಣ’ ಪ್ರಶಸ್ತಿ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT