ನಂಜನಗೂಡು: ತಾಲ್ಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ದನ ಮೇಯಿಸುತ್ತಿದ್ದ ರತ್ನಮ್ಮ (49) ಅವರ ಮೇಲೆ ಹುಲಿ ದಾಳಿ ನಡೆಸಿ ಕೊಂದಿದೆ.

ಹುಲಿಯು ಮೃತ ದೇಹವನ್ನು 3 ಕಿ.ಮೀ ದೂರ ಎಳೆದೊಯ್ದು ಅರೆಬರೆ ತಿಂದು ಹೋಗಿದೆ. ಅರಣ್ಯ ಅಧಿಕಾರಿಗಳು ಸಂಜೆಯಾದರೂ ಸ್ಥಳಕ್ಕೆ ಬಂದಿರಲಿಲ್ಲ. ಗ್ರಾಮಸ್ಥರೇ ಮೃತ ದೇಹ ಪತ್ತೆ ಮಾಡಿದರು. ಹುಲಿ ಕೆಲ ದಿನದ ಹಿಂದೆ ಎತ್ತಿನ ಮೇಲೆ ದಾಳಿ ನಡೆಸಿತ್ತು.

ಶವವಿಟ್ಟು ಪ್ರತಿಭಟನೆ: ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಹೆಡಿಯಾಳ ಅರಣ್ಯ ಕಚೇರಿ ಮುಂದೆ ಮೃತದೇಹವನ್ನಿಟ್ಟು ಪ್ರತಿಭಟಿಸಿದರು.

‘ಇಲಾಖೆಯವರು ಹುಲಿ ಹಿಡಿಯುವ ಪ್ರಯತ್ನ ಮಾಡಿಲ್ಲ. ಕಳೆದ ತಿಂಗಳು ಇಲ್ಲಿಯೇ ವೀರಭದ್ರ ಭೋವಿ ಎಂಬ ವೃದ್ಧನ ಕೊಂದಿತ್ತು. ಹುಲಿ ಸೆರೆ ಹಿಡಿದು ಜನರ ಪ್ರಾಣ ಕಾಪಾಡಬೇಕು. ಮೃತಳ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.