ರಾಮನಗರ: ‘ರಾಮದೇವರ ಬೆಟ್ಟದಲ್ಲಿ 20 ಎಕರೆಯಲ್ಲಲ್ಲ, ನೂರು ಎಕರೆಯಲ್ಲಿ ಮಂದಿರ ಕಟ್ಟಲಿ. ನಾನೂ ಬೆಂಬಲಿಸುವೆ. ಲೋಕಸಭಾ ಚುನಾವಣೆವರೆಗೂ ಮಾತ್ರ ಮಂದಿರ ಜಪ ಮಾಡುತ್ತಾರಷ್ಟೇ. ಆಮೇಲೆ ಮರೆಯುತ್ತಾರೆ’ ಎಂದು ಬೆಟ್ಟದಲ್ಲಿ ಮಂದಿರ ನಿರ್ಮಾಣ ಮಾಡುವ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ತಾಲ್ಲೂಕಿನ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಗುರುವಾರ ಸುದ್ದಿಗಾರರಿಗೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಹಾರೋಬೆಲೆಯಲ್ಲಿ ಇವರು ಮಾಡಲು ಹೋಗಿದ್ದೇನು? ಅಲ್ಲಿ ಚರ್ಚ್ ಮತ್ತು ಯೇಸು ಕ್ರಿಸ್ತನ ಪ್ರತಿಮೆಯನ್ನು ಯಾಕೆ ನಿರ್ಮಿಸಲು ಮುಂದಾದರು? ಅದೆಲ್ಲಾ ಯೇಸು ಮೇಲಿನ ಭಕ್ತಿಗಲ್ಲ, ಬದಲಿಗೆ ಮಾಡಿರುವ ಅಕ್ರಮವನ್ನು ಅಲ್ಲಿ ಬಚ್ಚಿಟ್ಟುಕೊಳ್ಳಬಹುದೆಂದು. ಇದೆಲ್ಲಾ ನಾ ಕಾಣದೆ ಇರೋದಾ’ ಎಂದು ಡಿ.ಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು.

‘ಬಿಜೆಪಿ ಮತ್ತು ಜೆಡಿಎಸ್ ನಡುವಣ ಹೊಂದಾಣಿಕೆಯು ಅವರಿಗೆ ಭಯ ತಂದಿದೆ. ಏನೇ ತಿಪ್ಪರಲಾಗ ಹಾಕಿದರೂ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ. ಮೈತ್ರಿ ಅಭ್ಯರ್ಥಿ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.