ತಿಪಟೂರು: ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ಕೆಂಪಮ್ಮದೇವಿ ದೇವಾಲಯದಿಂದ ನಗರಸಭೆ ವೃತ್ತದವರೆಗೂ ಶಾಸಕ ಕೆ.ಷಡಕ್ಷರಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಶಾಸಕ ಕೆ.ಷಡಕ್ಷರಿ, ನಮಗೆ ಆಗಿರುವ ಅನ್ಯಾಯ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಸಿ.ಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಂದರ್ಭ ಇಲ್ಲ ಎಂದರು.

ಸಂವಿಧಾನ ಬದ್ಧವಾಗಿ ಆಡಳಿತ ನಡೆಸಬೇಕಾದ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ದೋಷ ಪೂರಿತ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಡೆನೂರು ಕಾಂತರಾಜು, ನಗರ ಅಧ್ಯಕ್ಷ ಟಿ.ಎನ್ ಪ್ರಕಾಶ್, ಬಜಗೂರು ಮಂಜುನಾಥ್, ಕುರುಬ ಸಮಾಜದ ಚಂದ್ರೇಗೌಡ, ನಿಖಿಲ್ ರಾಜಣ್ಣ, ಮಾದಿಹಳ್ಳಿ ಪ್ರಕಾಶ್, ಲೋಕನಾಥ್ಸಿಂಗ್, ನಗರಸಭೆ ಸದಸ್ಯರಾದ ಹೂರು ಬಾನು, ಮಹೇಶ್, ಆರ್.ಡಿ ಬಾಬು, ಮಾಜಿ ಜಿ.ಪಂ ಸದಸ್ಯ ಗಂಗಾಧರ್, ತಾ.ಪಂ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಶಿವಸ್ವಾಮಿ, ಎಂ.ಡಿ ರವಿಕುಮಾರ್, ಪ್ರಕಾಶ್ ಯಾದವ್, ವಿರುಪಾಕ್ಷಿ, ಮುಸ್ಲಿಂ ಮುಖಂಡ ದಸ್ತು, ಶಫಿ, ಚಂದ್ರಶೇಖರ್ ಬಿಳಿಗೆರೆ, ಕೊಪ್ಪ ಶಾಂತಪ್ಪ, ಕಾಂತರಾಜು ಮಲ್ಲೇನಹಳ್ಳಿ, ತಿಮ್ಮಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.