ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನ್ನದ ಚೊಂಬು ತುಂಬಿ ತುಳುಕಿತಲೇ ಪರಾಕ್ -ದೊಡ್ಡ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ

ಹರಪನಹಳ್ಳಿಯ ದೊಡ್ಡ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ
Published 24 ಫೆಬ್ರುವರಿ 2024, 15:26 IST
Last Updated 24 ಫೆಬ್ರುವರಿ 2024, 15:26 IST
ಅಕ್ಷರ ಗಾತ್ರ

ಹರಪನಹಳ್ಳಿ (ವಿಜಯನಗರ ಜಿಲ್ಲೆ): ‘ಚಿನ್ನದ ಚೊಂಬು ತುಂಬಿ ತುಳುಕಿತಲೇ ಪರಾಕ್’...

ಇದು ಪಟ್ಟಣದ ಹೊರವಲಯದಲ್ಲಿ ಶನಿವಾರ ನಡೆದ ಇತಿಹಾಸ ಪ್ರಸಿದ್ದ ದೊಡ್ಡಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ನುಡಿದ ದೈವವಾಣಿ.

ಭರತ ಹುಣ್ಣಿಮೆ ಅಂಗವಾಗಿ ದೊಡ್ಡ ಮೈಲಾರ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೂರಾರು ಗೊರವಪ್ಪಗಳ ಢಮರುಗದ ನಿನಾದ, ನೆರೆದಿದ್ದ ಸಾವಿರಾರು ಭಕ್ತರ ಏಳು ಕೋಟಿ.. ಏಳು ಕೋಟಿ.. ಚಹಾಂಗ ಬಲೋ.. ಭಕ್ತಿಯ ಘೋಷಮಯವಾಗಿತ್ತು.

ಬೆಳಿಗ್ಗೆಯಿಂದ ಮರಡಿ ಕಟ್ಟೆಯಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಆಚರಿಸಿದ ಬೆಲ್ಲದ ಬಂಡಿ ಉತ್ಸವದಲ್ಲಿ ಭಕ್ತರು ಎತ್ತಿನ ಬಂಡಿಗಳನ್ನು ಓಡಿಸಿ ಭಕ್ತಿ ಸಮರ್ಪಿಸಿದರು.

9 ದಿನ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ಕೋಟೆಪ್ಪ ಅವರನ್ನು ಪಾದಗಟ್ಟೆಯ ಮರಡಿಯಿಂದ ಮೆರವಣಿಗೆ ಮೂಲಕ ಕರೆತರಲಾಯಿತು. ಬಿಲ್ಲನ್ನೇರಿ ಸದ್ದಲೇ ಎನ್ನುತ್ತಿದ್ದಂತೆ ನೆರೆದವರೆಲ್ಲ ನಿಶ್ಯಬ್ದವಾದರು. ಕಾರ್ಣಿಕ ನುಡಿದು ಕೆಳಗೆ ಬೀಳುತ್ತಿದ್ದಂತೆ ಅವರನ್ನು ಗೊರವ ಸಮೂಹ ಎತ್ತಿ ಹಿಡಿದು ಸಂಭ್ರಮಿಸಿದರು.

‘ಈ ವರ್ಷ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬರುತ್ತವೆ. ರೈತಾಪಿ ಕುಟುಂಬಗಳು ಸಂತಸವಾಗಿರುತ್ತವೆ’ ಎಂದು ಕಾರ್ಣಿಕ ಕುರಿತು ರೈತರು ವಿಶ್ಲೇಷಿಸಿದರೆ, ವ್ಯಾಪಾರಿಗಳು ಕಾರಣಿಕದಿಂದ ಉತ್ತಮ ವಹಿವಾಟು ನಿರೀಕ್ಷಿಸಬಹುದು ಎಂದು ವಿಶ್ಲೇಷಿಸಿದರು.

ಧರ್ಮಕರ್ತರಾದ ದತ್ತಾತ್ರೇಯ ರಾವ್, ಮಾರ್ತಾಂಡ ರಾವ್, ಡಾ. ನಾಗೇಶ್ವರ ರಾವ್, ಕೋಟೇಶ್ವರ ರಾವ್, ಗಣಚಾರಿ ದುರುಗಪ್ಪ, ಪುರಸಭೆ ಸದಸ್ಯರಾದ ಕಿರಣ್ ಶ್ಯಾನಭೋಗ, ಗಣೇಶ, ಭರತೇಶ ಇತರರು ಇದ್ದರು.

ಹರಪನಹಳ್ಳಿ ಸಮೀಪದಲ್ಲಿರುವ ಮೈಲಾರ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗೊರವಯ್ಯ ಕೋಟೆಪ್ಪ ಬಿಲ್ಲನ್ನೇರಿ ಕಾರ್ಣಿಕ ನುಡಿದರು
ಹರಪನಹಳ್ಳಿ ಸಮೀಪದಲ್ಲಿರುವ ಮೈಲಾರ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗೊರವಯ್ಯ ಕೋಟೆಪ್ಪ ಬಿಲ್ಲನ್ನೇರಿ ಕಾರ್ಣಿಕ ನುಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT