ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ್ ಜೋಡೊ ನ್ಯಾಯ್ ಯಾತ್ರೆ: ವಿಡಿಯೊ ಬಿಡುಗಡೆ ಮಾಡಿದ ಕಾಂಗ್ರೆಸ್‌

Published : 6 ಜನವರಿ 2024, 10:33 IST
Last Updated : 6 ಜನವರಿ 2024, 10:33 IST
ಫಾಲೋ ಮಾಡಿ
Comments

ನವದೆಹಲಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಜನವರಿ 14ರಿಂದ ಮಾರ್ಚ್ 30ರವರೆಗೆ ಮಣಿಪುರದಿಂದ ಮಹಾರಾಷ್ಟ್ರದವರೆಗೆ ‘ಭಾರತ್ ಜೋಡೊ ನ್ಯಾಯ್ ಯಾತ್ರೆ‘ ನಡೆಸುವರು ಎಂದು ಕಾಂಗ್ರೆಸ್‌ ಹೇಳಿದೆ.

ಇದು ಹಿಂದಿನ ಭಾರತ್‌ ಜೋಡೊದ ವಿಸ್ತರಿತ ಯಾತ್ರೆ. ಇದಕ್ಕಾಗಿ ಪೂರಕ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಹೇಳಿದೆ. ಈ ಯಾತ್ರೆ ಸಂಬಂಧ ವಿಡಿಯೊ ಬಿಡುಗಡೆ ಮಾಡಲಾಗಿದೆ. 

ದೇಶದ ಎಲ್ಲರಿಗೂ ನ್ಯಾಯ, ಸಮಾನತೆ, ಉದ್ಯೋಗ ಮತ್ತು ಗೌರವ ನೀಡುವ ಅಗತ್ಯತೆಯನ್ನು ಈ ವಿಡಿಯೊ ಒತ್ತಿ ಹೇಳಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆಯ ದೃಶ್ಯಗಳು ಇದರಲ್ಲಿವೆ.

ಸಿರಿವಂತರ ಹೃದಯದಲ್ಲಿರುವ ಬಿಜೆಪಿಯವರಿಗೆ ಬಡವರು, ನಿರ್ಗತಿಕರು ಕಾಣುವುದಿಲ್ಲ. ಈ ಸಲ ಇವರಿಗೆ ನ್ಯಾಯ ಸಿಗಲಿದೆ. ನ್ಯಾಯ, ಸಮಾನತೆ, ಉದ್ಯೋಗ ಮತ್ತು ಗೌರವದ ಹಕ್ಕುಗಳು ಬಡವರಿಗೆ ಸಿಗಲಿವೆ ಎಂದು ವಿಡಿಯೊದಲ್ಲಿ ಹೇಳಲಾಗಿದೆ.

‘ಭಾರತ್ ಜೋಡೊ ನ್ಯಾಯ್ ಯಾತ್ರೆ‘ ಜನವರಿ 14ರಂದು ಮಣಿಪುರದಲ್ಲಿ ಆರಂಭವಾಗಲಿದ್ದು ಮಾರ್ಚ್ 30ರಂದು ಮಹಾರಾಷ್ಟ್ರದಲ್ಲಿ ಮುಕ್ತಾಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT