ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಮತ್ತು ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಿ ಸಂಗೀತ ಲೋಕದ ತಾರೆ ಎ.ಆರ್ ರೆಹಮಾನ್ ಅವರು 30 ನಿಮಿಷಗಳ ಸಂಗೀತ ಪ್ರದರ್ಶನದ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ.

ಇದು ನವೆಂಬರ್ 5ರಂದು ನಡೆಯುವ ಚುನಾವಣೆಯ ಪ್ರಚಾರಕ್ಕೆ ಕಮಲಾ ಹ್ಯಾರಿಸ್ ಅವರಿಗೆ ದೊಡ್ಡ ಹುರುಪು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

‘ಈ ಸಂಗೀತ ಪ್ರದರ್ಶನದೊಂದಿಗೆ ಎ.ಆರ್ ರೆಹಮಾನ್ ಅವರು ಅಮೆರಿಕದಲ್ಲಿ ಪ್ರಗತಿ ಹಾಗೂ ಪ್ರಾತಿನಿಧ್ಯಕ್ಕಾಗಿ ನಿಂತಿರುವ ನಾಯಕರು ಮತ್ತು ಕಲಾವಿದರ ಕಂಠಗಳಿಗೆ ತಮ್ಮ ಧ್ವನಿ ಒಗ್ಗೂಡಿಸಿದ್ದಾರೆ’ ಎಂದು ಎಎಪಿಐ ವಿಕ್ಟರಿ ಫಂಡ್ನ ಅಧ್ಯಕ್ಷ ಶೇಖರ್ ನರಸಿಂಹನ್ ಹೇಳಿದ್ದಾರೆ.

‘ಇದು ಕೇವಲ ಸಂಗೀತ ಕಾರ್ಯಕ್ರಮ ಮಾತ್ರವಲ್ಲ, ಅದಕ್ಕಿಂತ ಹೆಚ್ಚಿನದು. ನಾವು ನೋಡಬಯಸುವ ಉತ್ತಮ ಭವಿಷ್ಯಕ್ಕಾಗಿ ಮತಚಲಾಯಿಸಲು ಜನರಿಗೆ ನೀಡಿರುವ ಕರೆಯಾಗಿದೆ’ ಎಂದು ಎಎಪಿಐ ವಿಕ್ಟರಿ ಫಂಡ್ ಘೋಷಿಸಿದೆ.

ಇಂಡೊ-ಆಫ್ರಿಕಾ ಮೂಲದ ಕಮಲಾ ಹ್ಯಾರಿಸ್ರನ್ನು ಬೆಂಬಲಿಸಿದ ದಕ್ಷಿಣ ಏಷ್ಯಾದ ಮೊದಲ ಅಂತರರಾಷ್ಟ್ರೀಯ ಕಲಾವಿದ ರೆಹಮಾನ್ ಆಗಿದ್ದಾರೆ.

ದಕ್ಷಿಣ ಏಷ್ಯಾದ ಮತದಾರರಲ್ಲಿ ಕಮಲಾ ಹ್ಯಾರಿಸ್ಗೆ ಬೆಂಬವವನ್ನು ಹೆಚ್ಚಿಸುವ ಕಾರ್ಯತಂತ್ರದ ಭಾಗವಾಗಿ ಎಎಪಿಐ ವಿಕ್ಟರಿ ಫಂಡ್ನ ಯೂಟ್ಯೂಬ್ ಚಾನಲ್ ಮತ್ತು ಎವಿಎಸ್ ಮತ್ತು ಟಿವಿ ಏಷ್ಯಾ ಸೇರಿದಂತೆ ಪ್ರಮುಖ ದಕ್ಷಿಣ ಏಷ್ಯಾದ ನೆಟ್ವರ್ಕ್ಗಳಲ್ಲಿ ವಿಶೇಷ ಪ್ರದರ್ಶನವನ್ನು ಪ್ರಸಾರ ಮಾಡಲು ಆಯೋಜಿಸಲಾಗಿದೆ.

ಅಕ್ಟೋಬರ್ 13ರಂದು ರಾತ್ರಿ 8 ಗಂಟೆಗೆ ಎಎಪಿಐ ವಿಕ್ಟರಿ ಫಂಡ್ನ ಯೂಟ್ಯೂಬ್ನಲ್ಲಿ ಸಂಗೀತ ಪ್ರದರ್ಶನ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.