ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದು, ‘ಗೇಮ್, ಸೆಟ್ ಅಂಡ್ ಮ್ಯಾಚ್’ ಎಂದು ಬಿಲಿಯನೇರ್ ಉದ್ಯಮಿ ಇಲಾನ್ ಮಸ್ಕ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಮಸ್ಕ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಬಳಸಿದ ಪದಗಳನ್ನು ಸಾಮಾನ್ಯವಾಗಿ ಟೆನಿಸ್ ಪಂದ್ಯದ ಗೆಲುವನ್ನು ಸೂಚಿಸಲು ಬಳಸಲಾಗುತ್ತದೆ.

ಈ ಚುನಾವಣೆಯಲ್ಲಿ ಮಸ್ಕ್ ಅವರು ಟ್ರಂಪ್ ಅವರನ್ನು ಬೆಂಬಲಿಸಿದ್ದು, ಟ್ರಂಪ್ ಅವರ ಜೊತೆ ಚುನಾವಣಾ ರಾತ್ರಿ ಕಳೆಯಲು ಯೋಜಿಸಿರುವುದಾಗಿ ಇಂದು ಮುಂಜಾನೆ ಹೇಳಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮಸ್ಕ್ ಅವರು ಜುಲೈನಲ್ಲಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ಅವರನ್ನು ಬೆಂಬಲಿಸಿದ ನಂತರ ಚುನಾವಣಾ ಪ್ರಚಾರಕ್ಕಾಗಿ ಬಹಳಷ್ಟು ಹಣ ಖರ್ಷು ಮಾಡಿದ್ದಾರೆ. ಅಲ್ಲದೆ, ಟ್ರಂಪ್ ಅವರ ರಾಜಕೀಯ ಕ್ರಿಯಾ ಸಮಿತಿಗೆ ಕನಿಷ್ಠ $18 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.

79ರ ಹರೆಯದ ಟ್ರಂಪ್, ಅಮೆರಿಕವನ್ನು ವಿಶ್ವದ ಬಿಟ್ಕಾಯಿನ್ ಮತ್ತು ಕ್ರಿಪ್ಟೋಕರೆನ್ಸಿ ರಾಜಧಾನಿಯಾಗಿ ಮಾಡುತ್ತೇನೆ. ಸರ್ಕಾರಿ ಲೆಕ್ಕಪರಿಶೋಧನೆಯ ಉಸ್ತುವಾರಿಯಾಗಿ ಮಸ್ಕ್ ಅವರನ್ನು ನೇಮಕ ಮಾಡುವುದಾಗಿ ವಾಗ್ದಾನ ನೀಡಿದ್ದರು.

ಬೆಳಿಗ್ಗೆ 12 ಗಂಟೆಯ ಟ್ರೆಂಡ್ ಪ್ರಕಾರ ಡೊನಾಲ್ಡ್ ಟ್ರಂಪ್ ಗೆಲುವಿನ ಸನಿಹದಲ್ಲಿ 247 ಎಲೆಕ್ಟೊರಲ್ ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದ್ದು, ಹ್ಯಾರಿಸ್ 214 ಮತಗಳನ್ನು ಪಡೆದು ಹಿನ್ನಡೆ ಕಾಯ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.