ಬ್ರಿಜ್‌ಟೌನ್, ಬಾರ್ಬಡೋಸ್: ಗಯಾನದಲ್ಲಿ ಮಂಗಳವಾರ ನಡೆಯುವ ಟಿ20 ವಿಶ್ವಕಪ್ ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವು ಉಗಾಂಡವನ್ನು ಎದುರಿಸಲಿದೆ. ಟಿ20 ವಿಶ್ವಕಪ್‌ಗೆ ಮೊದಲ ಬಾರಿಗೆ ಆಫ್ರಿಕ ತಂಡ ಅರ್ಹತೆ ಪಡೆದಿದೆ.

ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನವನ್ನು ಸೋಲಿಸಿದ ಅಫ್ಘಾನಿಸ್ತಾನವು, ಕಳೆದ ಐಸಿಸಿ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ನೀಡಿತು.

ಉಗಾಂಡದ ರಾಜಧಾನಿ ಕಂಪಾಲಾದ ಜನಸಂಖ್ಯೆ ಶೇ 60ರಷ್ಟು ಜನರು ಕೊಳಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಇವರ ನಡುವೆ ವೇಗಿ ಜುಮಾ ಮಿಯಾಗಿ ಅವರು ಅಲ್ಲಿಯ ಜನರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.

ಫುಟ್‌ಬಾಲ್ ಪ್ರದಾನ ದೇಶವಾಗಿರುವ ಉಗಾಂಡದ ಯುವ ಜನರು ಜುಮಾ ಅವರಿಂದಾಗಿ ಕ್ರಿಕೆಟ್‌ನತ್ತ ಒಲವು ಬೆಳೆಸಿಕೊಳ್ಳುತ್ತಿದ್ದಾರೆ. ತಂಡದ ಆಟ ನೋಡಲು ಅಲ್ಲಿನವರು ಮಾತ್ರವಲ್ಲದೇ, ಹೊರಗಿನ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.

ಮಿಯಾಗಿ 21 ಅಂತರಾಷ್ಟ್ರೀಯ ಟಿ20 ಪಂದ್ಯಗಳಿಂದ 34 ವಿಕೆಟ್ ಪಡೆದಿದ್ದಾರೆ. ರಾಷ್ಟ್ರೀಯ ತಂಡದ ಇತರೆ ಆಟಗಾರರ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಸೈಮನ್ ಸೆಸಾಜಿ ಹಾಗೂ ಮೀಸಲು ಆಟಗಾರ ಇನೊಸೆಂಟ್ ಎಂವೆಬೆಜ್ ಮೊದಲಾದವರು ಹಿಂದುಳಿದ ಪ್ರದೇಶದಿಂದ ಬಂದವರು. ಉಂಗಾಂಡ ತಂಡದಲ್ಲಿ 43 ವರ್ಷದ ಆಫ್ ಸ್ಪಿನ್ನರ್ ಫ್ರಾಂಕ್ ಎನ್ಸುಬುಗಾ ಅತ್ಯಂತ ಹಿರಿಯ ಕ್ರಿಕೆಟಿಗರಾಗಿದ್ದಾರೆ.

ಉಗಾಂಡ ತಂಡದ ಕೋಚ್ ಭಾರತ ಮೂಲದ ಅಭಯ್ ಶರ್ಮಾ, ‘ಹಿಂದುಳಿದ ಪ್ರದೇಶದದಿಂದ ಬಂದ ಹಲವರು ರಾಷ್ಟ್ರೀಯ ತಂಡಕ್ಕಾಗಿ ಆಡುವುದನ್ನು ನೋಡುವುದು ಸ್ಪೂರ್ತಿದಾಯಕವಾಗಿದೆ. ನಾನು ಇಲ್ಲಿಗೆ ಬರುವ ಮೊದಲು ಅವರು ಇಂತಹ ಪರಿಸ್ಥಿತಿಗಳಲ್ಲಿ ಬದುಕುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಕೋಚ್ ಬಗ್ಗೆ ಅವರಿಗೆ ಅಪಾರ ಗೌರವವೂ ಇದೆ. ತಮ್ಮ ಜೀವನವನ್ನು ಕೋಚ್ ಬದಲಾಯಿಸಬಲ್ಲರು ಎನ್ನುವಷ್ಟು ಅವರು ಮುಗ್ಧರು’ ಎಂದರು.

ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರನ್, ಅಜ್ಮತುಲ್ಲಾ ಒಮರ್‌ಝೈ, ನಜೀಬುಲ್ಲಾ ಝದ್ರನ್, ಮೊಹಮ್ಮದ್ ಐಸಾಕ್, ಮೊಹಮ್ಮದ್ ನಬಿ, ಗುಲ್ಬಾದಿನ್ ನೈಬ್, ಕರೀಮ್ ಜನತ್, ರಶೀದ್ ಖಾನ್ (ನಾಯಕ), ನಂಗ್ಯಾಲ್ ಖರೋಟಿ, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಾಕ್ ಫಾರೂಕಿ, ಅಹ್ಮದ್ ಫೇರ್ ಮಲಿಕ್.

ಉಗಾಂಡಾ: ಬ್ರಿಯಾನ್ ಮಸಾಬಾ (ನಾಯಕ), ಸೈಮನ್ ಸೆಸಾಜಿ, ರೋಜರ್ ಮುಕಾಸಾ, ಕಾಸ್ಮಾಸ್ ಕೈವುಟಾ, ದಿನೇಶ್ ನಕ್ರಾನಿ, ಫ್ರೆಡ್ ಅಚೆಲಾಮ್, ಕೆನ್ನೆತ್ ವೈಸ್ವಾ, ಅಲ್ಪೇಶ್ ರಾಮ್ಜಾನಿ, ಫ್ರಾಂಕ್ ಎನ್ಸುಬುಗಾ, ಹೆನ್ರಿ ಸೆನ್ಯಾಂಡೊ, ಬಿಲಾಲ್ ಹಸುನ್, ರಾಬಿನ್ಸನ್ ಒಬುಯಾ, ರಿಯಾಜತ್ ಅಲಿ ಶಾ (ಉಪನಾಯಕ), ಜುಮಾ ಮಿಯಾಗಿ, ರೋನಕ್ ಪಟೇಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.