ಬೆಗುಸರಾಯ್: ‘ನಿಮ್ಮ ಸಮಸ್ಯೆಗಳನ್ನು ಕಡೆಗಣಿಸುವ ಸರ್ಕಾರಿ ಅಧಿಕಾರಿಗಳನ್ನು ಬಿದಿರಿನ ಕೋಲುಗಳಿಂದ ಹೊಡೆಯಿರಿ’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಬಿಹಾರದ ಖೋಡಬಂದಪುರದಲ್ಲಿ ಕೃಷಿ ಸಂಸ್ಥೆಯೊಂದು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಧಿಕಾರಿಗಳು ತಮ್ಮ ಸಮಸ್ಯೆಗಳಿಗೆ ಗಮನ ಕೊಡುತ್ತಿಲ್ಲ ಎಂಬ ಹಲವು ದೂರುಗಳು ಬರುತ್ತಿವೆ. ನಾಗರಿಕರ ಸೇವೆ ಮಾಡುವುದು ಸಂಸದರು, ಶಾಸಕರು, ಗ್ರಾಮದ ಮುಖ್ಯಸ್ಥರ, ಡಿಎಂ, ಎಸ್‌ಡಿಎಂ, ಬಿಡಿಒಗಳು ಕರ್ತವ್ಯ. ಅವರು ನಿಮ್ಮ ಸಮಸ್ಯೆಗಳನ್ನು ನಿರ್ಲಕ್ಷ್ಯಿಸಿದರೆ ಅವರಿಗೆ ಬಿದಿರಿನ ಕೋಲುಗಳಿಂದ ಹೊಡೆಯಿರಿ’ ಎಂದರು.

‘ಈ ಬಳಿಕವೂ ನಿಮ್ಮ ಸಮಸ್ಯೆ ನಿವಾರಣೆ ಆಗದಿದ್ದಲ್ಲಿ, ನಿಮ್ಮ ಸಹಾಯಕ್ಕೆ ನಾನು ಇದ್ದೇನೆ’ ಎಂದು ಅವರು ತಿಳಿಸಿದರು.

ಗಿರಿರಾಜ್ ಸಿಂಗ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕರೊಬ್ಬರು,‘ ಗಿರಿರಾಜ್ ಅವರು ಜನ ನಾಯಕ. ಅವರು ಸಾರ್ವಜನಿಕರ ಆಕ್ರೋಶಕ್ಕೆ ಉತ್ತರಿಸಬೇಕಾಗುತ್ತದೆ. ಅವರ ಹೇಳಿಕೆಯನ್ನು ನಾವು ಸಾಂಕೇತವಾಗಿ ಪರಿಗಣಿಸಬೇಕೇ ಹೊರತು ಅಕ್ಷರಶಃ ಅಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.