ನವದೆಹಲಿ: ಪರಿಶಿಷ್ಟರು, ತುಳಿತಕ್ಕೆ ಒಳಗಾದವರ ಏಳಿಗೆಗೆ ರಾಮ್‌ವಿಲಾಸ್ ಪಾಸ್ವಾನ್ ಅವರ ಕೊಡುಗೆ ಅನನ್ಯ. ಭಾರತದ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿದ್ದ ಪಾಸ್ವಾನ್ ಅವರನ್ನು ರಾಜಕೀಯ ವಲಯದಲ್ಲಿ ‘ಹವಾಮಾನ ತಜ್ಞ’ ಎಂದೇ ಗುರುತಿಸಲಾಗುತ್ತಿತ್ತು.

ಚುನಾವಣಾ ಸಂದರ್ಭದಲ್ಲಿ ಜನರ ಒಲವು ಯಾವ ಕಡೆ ಇದೆ. ಈ ಬಾರಿ ಅಧಿಕಾರದ ಗದ್ದುಗೆಗೆ ಏರುವ ಪಕ್ಷ ಯಾವುದು ಎಂಬುದನ್ನು ಗ್ರಹಿಸುವಲ್ಲಿ ಪಾಸ್ವಾನ್ ನಿಪುಣರು. ಇದೇ ಕಾರಣಕ್ಕೆ ಅವರು, ಕಾಂಗ್ರೆಸ್, ಜೆಪಿ, ಆರ್‌ಜೆಡಿ, ಜೆಡಿಯು ಸೇರಿದಂತೆ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಿದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದ ಅವರು, ಎರಡು ಬಾರಿಯೂ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದರು.

ಇದನ್ನೂ ಓದಿ:ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ

ಬಿಹಾರದ ಖಗೇರಿಯಾ ಎಂಬಲ್ಲಿ 1946ರ ಜುಲೈ 5ರಂದು ಪಾಸ್ವಾನ್ ಜನಿಸಿದರು. 1969ರಲ್ಲಿ ಅವರು ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಅದಕ್ಕೂ ಮುನ್ನ ಅವರು ಸರ್ಕಾರಿ ಸೇವೆಯಲ್ಲಿದ್ದರು.

ಸಂಯುಕ್ತ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ಮೊದಲ ಬಾರಿಗೆ ಶಾಸಕರಾದರು. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ನಡೆದ ಹೋರಾಟದಲ್ಲಿಯೂ ಪಾಲ್ಗೊಂಡಿದ್ದ ಪಾಸ್ವಾನ್ ಅವರು, ತುರ್ತು ಪರಿಸ್ಥಿತಿ ಅವಧಿಯಲ್ಲಿ ಜೈಲು ವಾಸ ಅನುಭವಿಸಿದ್ದರು.

ನಂತರ ಅವರು, 1977ರಲ್ಲಿ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದರು. ಅದಾದ ನಂತರ ಸತತವಾಗಿ ಅದೇ ಕ್ಷೇತ್ರದಿಂದ 8 ಬಾರಿ ಗೆಲುವು ಸಾಧಿಸಿದರು. ಹಲವು ಬಾರಿ ಅತ್ಯಧಿಕ ಮತಗಳ ಅಂತರದಿಂದ ಗೆದ್ದ ಹೆಗ್ಗಳಿಕೆಯೂ ಅವರದು.

ಬೇರು ಮಟ್ಟದ ರಾಜಕಾರಣದಿಂದ ಬೆಳೆದು ಬಂದಪಾಸ್ವಾನ್ ಅವರು ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದರು. ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿದ್ದ ಪಾಸ್ವಾನ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಹಲವು ರಾಜಕೀಯ ಪಕ್ಷಗಳು ಮುಂದಾಗಿದ್ದು ಸಹ ಇದಕ್ಕೆ ನಿದರ್ಶನ.

ಅವರು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರೂ, ತಾವೊಬ್ಬ ಸಮಾಜವಾದಿ, ಜಾತ್ಯತೀತತೆಗೆ ಬದ್ಧ ಎಂಬುದನ್ನು ನಿರೂಪಿಸುತ್ತಿದ್ದರು.

ಆದರೆ, ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ರಾಮ್‌ವಿಲಾಸ್ ಪಾಸ್ವಾನ್ ಅವರ ಅನುಪಸ್ಥಿತಿ ಎಲ್‌ಜೆಪಿಗೆ ಮಾತ್ರವಲ್ಲ, ಎನ್‌ಡಿಎ ಪಾಲಿಗೆ ನಾಯಕತ್ವ ನಿರ್ವಾತ ಸೃಷ್ಟಿಯಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.