ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಹುಭಾಷಿಕ ಸಂವೇದನೆ ಕವಿ‘ಸನದಿ’

Published : 8 ಫೆಬ್ರುವರಿ 2015, 19:33 IST
ಫಾಲೋ ಮಾಡಿ
Comments

ಮುಂಬೈ: ‘ಕವಿ ಡಾ. ಬಿ.ಎ.ಸನದಿ ಅವರು ಕಲ್ಪವೃಕ್ಷದ ಹಾಗೆ. ಸಾಹಿತ್ಯ ಕ್ಷೇತ್ರದಲ್ಲಿ ಅವರು ಬೆಳೆಯುತ್ತಾ ಹೋದವರು. ಅವರು ಬಹುಭಾಷಿಕ ಸಂವೇದನೆಯನ್ನು ಮೈಗೂಡಿಸಿಕೊಂಡ ಸಾಹಿತಿ. ಮನುಷ್ಯ ಕೇಂದ್ರಿತ ಕಾಳಜಿಯೇ ಅವರ ಸಾಹಿತ್ಯ’  ಎಂದು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್. ಉಪಾಧ್ಯ ನುಡಿದರು.

ಕರ್ನಾಟಕ ಸಂಘ ಮುಂಬೈ ಆಶ್ರಯ­ದಲ್ಲಿ ಸನದಿ ಅವರ ಅಭಿನಂದನಾ ಗ್ರಂಥ ‘೮೦ರ ಪಯಣ’ ಬಿಡುಗಡೆಗೊಳಿಸಿ ಉಪಾಧ್ಯ ಅವರು ಮಾತನಾಡಿ­ದರು. ಸನದಿಯವರ ಕವಿತೆ, ಕೃತಿಗಳಲ್ಲಿ ವಾಸ್ತವ, ಸೌಂದರ್ಯ, ನಗರ ಪ್ರಜ್ಞೆ ಎಲ್ಲವೂ ಸಮ್ಮಿಳಿತವಾಗಿರುತ್ತವೆ.  ಬದುಕನ್ನು ಚೆಲುವಾಗಿಸುವ ಕಡೆಗೆ ಸನದಿಯವರ ಲಕ್ಷ ಇದೆ ಎಂದು ಪ್ರಶಂಶಿಸಿದ ಉಪಾಧ್ಯರು, ಸನದಿ ಅವರು ಸಾಹಿತಿ ಮಾತ್ರವಲ್ಲ ಸಾಂಸ್ಕೃತಿಕಾ ವ್ಯಕ್ತಿಯೂ ಆಗಿದ್ದಾರೆ ಎಂದರು.

ಕೃತಿ ಪರಿಚಯ ಮಾಡಿದ ಅಂಕೊಲದ ನಿವೃತ್ತ ಪ್ರಾಂಶುಪಾಲ, ಸಾಹಿತಿ ಪ್ರೊ. ಮೋಹನ್ ಹಬ್ಬು,, ಕೃತಿ ಸಂಪಾದನೆ ಮಾಡುವ ಸಂದರ್ಭದಲ್ಲಿ ಜನ ಸ್ನೇಹಿತ, ಸನದಿ ಕಾವ್ಯದ ನೆಲೆಗಳು, ಸಾಹಿತಿಯಾದ ಹೆಜ್ಜೆಗಳು, ಕಾವ್ಯಂತ ರಂಗ ಗದ್ಯವಲಯ.. ಹೀಗೆ ಬೇರೆ ಬೇರೆ ವಿಭಾಗಗಳ ಮೂಲಕ ಲೇಖನಗಳನ್ನು ಆಯ್ದು ಪ್ರಕಟಿಸಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT