ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್‌ ಆಸ್ಪತ್ರೆ ಮೇಲೆ ರಷ್ಯಾ ಡ್ರೋನ್ ದಾಳಿ: 8 ಸಾವು

Published : 28 ಸೆಪ್ಟೆಂಬರ್ 2024, 13:42 IST
Last Updated : 28 ಸೆಪ್ಟೆಂಬರ್ 2024, 13:42 IST
ಫಾಲೋ ಮಾಡಿ
Comments

ಕೀವ್ (ಎಪಿ): ಉಕ್ರೇನ್‌ನ ಈಶಾನ್ಯ ಭಾಗದ ಸುಮಿ ನಗರದ ಆಸ್ಪತ್ರೆಯ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

‘ಶಾಹಿದ್ ಡ್ರೋನ್‌ ಬಳಸಿ ಶನಿವಾರ ಬೆಳಿಗ್ಗೆ ದಾಳಿ ನಡೆಸಲಾಗಿದೆ. ಮೊದಲ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಕರ್ತರು ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ಸಿಬ್ಬಂದಿಯನ್ನು ಸ್ಥಳಾಂತರ ಮಾಡುವಾಗ ಮತ್ತೊಂದು ದಾಳಿ ನಡೆದಿದೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ’ ಎಂದು ಉಕ್ರೇನ್‌ನ ಒಳಾಡಳಿತ ಸಚಿವ ಇಹೊರ್ ಕ್ಲೈಮೆಂಕೊ ಮಾಹಿತಿ ನೀಡಿದ್ದಾರೆ.

ಶುಕ್ರವಾರ ರಾತ್ರಿಯಿಂದ ಬೆಳಗಿನ ಜಾವದವರೆಗೆ ರಷ್ಯಾ ಹಾರಿಸಿದ 73 ಡ್ರೋನ್‌ಗಳಲ್ಲಿ 69ನ್ನು ಹಾಗೂ ನಾಲ್ಕು ಕ್ಷಿಪಣಿಗಳಲ್ಲಿ ಎರಡನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ ಸೇನೆ ಹೇಳಿದೆ. ಕೀವ್‌ ನಗರ ಹಾಗೂ ಹೊರವಲಯದಲ್ಲಿ 15 ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ಉಕ್ರೇನ್‌ ಹಾರಿಸಿದ ನಾಲ್ಕು ಡ್ರೋನ್‌ಗಳನ್ನು ಬೆಲ್ಗೊರೊಡ್‌ ವಲಯದಲ್ಲಿ ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT