ಫಿನ್ಲೆಂಡ್ ದೇಶದ ಪ್ರಧಾನಮಂತ್ರಿಯಾಗಿ ಸನ್ನಾ ಮರಿನ್ ಅವರು 2019ರಲ್ಲಿ ಅಧಿಕಾರಕ್ಕೆ ಬಂದ ಹೊಸದರಲ್ಲಿ, ವಾರದ ದುಡಿಮೆಯ ದಿನಗಳನ್ನು 6ರಿಂದ 5ಕ್ಕೆ ಇಳಿಸಿದ್ದರು. ‘ನಾನು, ಇಬ್ಬರು ಮಕ್ಕಳ ತಾಯಿಯಾಗಿ ಹೇಳುತ್ತೇನೆ, ಜನ ತಮ್ಮ ಕುಟುಂಬದ ಸದಸ್ಯರು ಮತ್ತು ಆತ್ಮೀಯರೊಂದಿಗೆ ಹೆಚ್ಚು ಸಮಯ ಕಳೆಯಲು ಇಚ್ಛಿಸುತ್ತಾರೆ. ಇದು ನೆಮ್ಮದಿಯ ಬದುಕಿನ ದಾರಿ. ಸಾಹಿತ್ಯ, ಕಲೆ, ಸಂಸ್ಕೃತಿ, ಹವ್ಯಾಸಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಸಂತೋಷದಾಯಕ ಬದುಕಿಗೆ ಇವೆಲ್ಲ ಮುಖ್ಯ’ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದರು. ವಿಶ್ವದ ಸಂತೋಷಭರಿತ ದೇಶಗಳ ಸೂಚ್ಯಂಕದಲ್ಲಿ ಫಿನ್ಲೆಂಡ್ ಸತತವಾಗಿ 6 ಬಾರಿ ಪ್ರಥಮ ಸ್ಥಾನ ಪಡೆದಿದೆ.

ಯುವಜನ ವಾರದಲ್ಲಿ 70 ತಾಸು ಕೆಲಸ ಮಾಡಬೇಕು ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ನೀಡಿರುವ ಹೇಳಿಕೆ ಕುರಿತು ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಸನ್ನಾ ಮರಿನ್ ಅವರು ಕೆಲಸದ ದಿನಗಳನ್ನು ಕಡಿಮೆ ಮಾಡಿದ ಮಹತ್ವದ ಸಂಗತಿ ನೆನಪಾಯಿತು.

ದುಡಿಮೆಯ ಅವಧಿಯನ್ನು ಹೆಚ್ಚಿಸುವುದಕ್ಕಿಂತ ಯುವಜನ ತಮ್ಮ ಕೆಲಸಕ್ಕೆ ಬೇಕಾಗುವ ಕೌಶಲ ಹೆಚ್ಚಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುವುದು ಬಹಳ ಅವಶ್ಯ. ಹಾಗೆಯೇ ಕೆಲಸದ ಬಗ್ಗೆ ಪ್ರೀತಿ ಮತ್ತು ಶ್ರದ್ಧೆ ಬೆಳೆಸಿಕೊಳ್ಳುವುದಕ್ಕೆ ಮಾರ್ಗದರ್ಶನ ಮಾಡಬೇಕು. ಸಾಮಾನ್ಯ ಕೆಲಸಗಾರ 8 ತಾಸುಗಳಲ್ಲಿ ಮಾಡಬಹುದಾದ ಕೆಲಸವನ್ನು ಕುಶಲ ಕೆಲಸಗಾರ ಎರಡು–ಮೂರು ತಾಸಿನಲ್ಲಿ ಮಾಡಿ ಮುಗಿಸುತ್ತಾನೆ. ಅದರ ಗುಣಮಟ್ಟ ಕೂಡ ಉತ್ತಮವಾಗಿರುತ್ತದೆ. ಕೆಲಸಗಾರ ಎಷ್ಟು ತಾಸು ಕೆಲಸ ಮಾಡಿದ ಎನ್ನುವುದು ಮುಖ್ಯವಲ್ಲ. ಕೆಲಸದ ಗುಣಮಟ್ಟ ಮತ್ತು ಅದಕ್ಕೆ ತಗಲುವ ವೆಚ್ಚದ ನಿಯಂತ್ರಣ ಬಹಳ ಮುಖ್ಯ.

ಈಚೆಗೆ ನಮ್ಮ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ಗೇಟ್ ಮುರಿದುಬಿದ್ದು ದೊಡ್ಡ ಆತಂಕ ತಲೆದೋರಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಸಂಬಂಧ ಇಡೀ ಆಡಳಿತವೇ ದಿಕ್ಕು ತೋಚದಂತಾಗಿ ಕುಳಿತಾಗ, ಹಿರಿಯ ತಂತ್ರಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದ ತಂಡ ಆಗಮಿಸಿತು. ಇವರೆಲ್ಲ ಜಾಣ್ಮೆಯಿಂದ ಕೆಲವೇ ಗಂಟೆಗಳಲ್ಲಿ ಗೇಟ್ ಅಳವಡಿಸುವ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಿದರು. ರಾಜ್ಯದ ಜನರ ಆತಂಕ ದೂರವಾಯಿತು.

ಉತ್ಪಾದಕ ಉದ್ದೇಶಗಳಿಗೆ ಬಳಕೆಯಾಗುವ ಎಲ್ಲ ಭೌತಿಕ ಮತ್ತು ಬೌದ್ಧಿಕ ಯತ್ನಗಳಿಗೆ ‘ಶ್ರಮ’ ಎಂದು ಕರೆಯುತ್ತೇವೆ. ಇದು ಉಲ್ಲಾಸದಿಂದ ಬಳಕೆಯಾಗ ಬೇಕಾದ ಶಕ್ತಿ. ಶ್ರಮಶಕ್ತಿಯನ್ನು ಒತ್ತಾಯಪೂರ್ವಕ ಅಥವಾ ಒತ್ತಡಕ್ಕೆ ಒಳಪಡಿಸಿ ದುಡಿಸುವುದರಿಂದ ದೇಹ ಮತ್ತು ಮನಸ್ಸು ಬಳಲುತ್ತವೆ. ಇದರಿಂದ ಹಲವು ದೈಹಿಕ ತೊಂದರೆಗಳು ಉಂಟಾಗುತ್ತವೆ.

ಜೀವನವು ದುಡಿಮೆ ಮತ್ತು ಹಣ ಗಳಿಕೆಗೆ ಮಾತ್ರ ಸೀಮಿತವಾಗಿಲ್ಲ. ಬದುಕಿನ ಭಿತ್ತಿಯು ವೃತ್ತಿಯ ಆಚೆಗೂ ಹರಡಿಕೊಂಡಿದೆ. ಕುಟುಂಬ, ಸ್ನೇಹಿತರು ಹಾಗೂ ಸಮಾಜದ ಮಧ್ಯೆ ನೆಮ್ಮದಿಯಿಂದ ಬದುಕುವುದಕ್ಕೆ ಸಮಯ ಕೊಡಬೇಕಾಗುತ್ತದೆ. ಮನುಷ್ಯರ ಶ್ರಮಶಕ್ತಿಗೂ ಒಂದು ಮಿತಿ ಇದೆ. ಅದನ್ನು ಮೀರಿ ಕೆಲಸಕ್ಕೆ ನಿಂತರೆ ಅದು ಕಾಟಾಚಾರದ ದುಡಿಮೆಯಾಗುತ್ತದೆ.

ದೇಶದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಶೇಕಡ 70ರಷ್ಟು ಮಂದಿ ಅಸಂಘಟಿತ ವಲಯಕ್ಕೆ
ಸೇರಿದವರಾಗಿದ್ದಾರೆ. ಇವರು ಸಣ್ಣ ಕೈಗಾರಿಕೆ, ಹೋಟೆಲ್, ಗ್ಯಾರೇಜ್, ವ್ಯಾಪಾರ ಮಳಿಗೆಗಳು, ಖಾಸಗಿ ಮತ್ತು ಸಹಕಾರಿ ಸಂಸ್ಥೆಗಳು, ಗಣಿ ಮತ್ತು ರಸ್ತೆ ನಿರ್ಮಾಣದ ವಲಯಗಳಲ್ಲಿ ಕೆಲಸ ಮಾಡುತ್ತಾರೆ. ಇವರನ್ನು ಪ್ರತಿದಿನ 14- 15 ಗಂಟೆ ದುಡಿಸಿಕೊಳ್ಳ ಲಾಗುತ್ತದೆ. ಇಂಥ ಕಾರ್ಮಿಕರಿಗೆ ಸಾಮಾನ್ಯವಾಗಿ 50 ವರ್ಷ ವಯಸ್ಸಿಗೇ ಮುಪ್ಪು ಆವರಿಸುತ್ತದೆ. ಅನಾರೋಗ್ಯ ಉಂಟಾಗಿ ಇಡೀ ಕುಟುಂಬವೇ ಬಳಲಬೇಕಾಗುತ್ತದೆ.

ದಿನದ ದುಡಿಮೆಯ ಅವಧಿಯನ್ನು 8 ತಾಸಿಗೆ ಮಿತಿಗೊಳಿಸುವುದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋರಾಟಗಳು ನಡೆದಿವೆ. ಕಾರ್ಮಿಕರ ಬಲಿದಾನವೂ ಆಗಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಯತ್ನದ ಫಲವಾಗಿ ಕೆಲಸದ ಅವಧಿಯನ್ನು 8 ಗಂಟೆಗೆ ನಿಗದಿಪಡಿಸಲು ಸಾಧ್ಯವಾಗಿದೆ. ಸ್ಪೇನ್ ದೇಶದಲ್ಲಿ ಇದು ಮೊದಲು ಜಾರಿಯಾಯಿತು. ಬ್ರಿಟಿಷ್ ಕಾರ್ಮಿಕ ಕೌನ್ಸಿಲ್ ಸದಸ್ಯರಾಗಿದ್ದ ಬಿ.ಆರ್.ಅಂಬೇಡ್ಕರ್, 8 ತಾಸು ಕೆಲಸದ ಅವಧಿಯನ್ನು ನಿಗದಿಪಡಿಸುವುದಕ್ಕೆ
ಒತ್ತಾಯಪಡಿಸಿದ್ದರು. ಹೊಸದಾಗಿ ರಚನೆಯಾದ ಕಾರ್ಮಿಕ ಕಾನೂನಿನಲ್ಲಿ ದುಡಿಮೆಯ ಅವಧಿಯನ್ನು 8 ಗಂಟೆಗೆ ನಿಗದಿಪಡಿಸಲಾಯಿತು.

ಯಾಂತ್ರಿಕ ಬೆಳವಣಿಗೆ ಮತ್ತು ಹೊಸ ಆವಿಷ್ಕಾರಗಳಿಂದ ಮಾನವನ ದುಡಿಮೆಯ ಭಾರ ಕಡಿಮೆಯಾಗಬೇಕು. ಅದರ ಬದಲು ಅದನ್ನು ಹೆಚ್ಚಿಸು ವುದಕ್ಕೆ ಪ್ರಯತ್ನಿಸುವುದು ಹಿಂದಕ್ಕೆ ಚಲಿಸುವ ಪ್ರಯತ್ನ ವಾಗುತ್ತದೆ.

‘ಹೆಜ್ಜಾಲ’ ಚದುರಂಗರ ಪ್ರಸಿದ್ಧ ಕಾದಂಬರಿ. ಇದರಲ್ಲಿ ಕಾಲೂರ ಎಂಬ ಯುವ ಕೂಲಿಕಾರನ ಚಿತ್ರಣವಿದೆ. ಕಾಲೂರ ಕಾಫಿ ತೋಟದ ಕಾರ್ಮಿಕನಾಗಿ ಹಗಲೂ ರಾತ್ರಿ ದುಡಿಯುವುದರಲ್ಲಿ ಅವಸಾನವಾಗಿ ಹೋಗುತ್ತಾನೆ. ಅವನಿಗೆ ಕುಟುಂಬ ಇದ್ದದ್ದೇ
ನೆನಪಿರುವುದಿಲ್ಲ. ಊರಲ್ಲಿ ನಡೆಯುವ ಬಯಲಾಟ ನೋಡುವ, ಭಜನೆಯ ಪದ ಕೇಳುವ, ಊರ ದೇವರ ಜಾತ್ರೆಯ ತೇರು ಎಳೆಯುವ ಅವಕಾಶವೇ ಸಿಗುವುದಿಲ್ಲ.

ಕೆಲಸದ ಅವಧಿ ಹೆಚ್ಚಿಸುವುದರಿಂದ ಕೆಲಸಗಾರರು ಕಾಲೂರನ ಹಾಗೆ ಬದುಕಿನುದ್ದಕ್ಕೂ ದುಡಿಯುತ್ತಾ ಸರಿದುಹೋಗುವ ಹಿಂಸೆ ಅನುಭವಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.