ಚುನಾವಣಾ ಕಾರ್ಯಗಳಲ್ಲಿ ಗಣನೀಯವಾಗಿ ಮಹಿಳಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ. ಎಲ್ಲ ಸರ್ಕಾರಿ, ಅರೆಸರ್ಕಾರಿ ನೌಕರರ ಕಡ್ಡಾಯ ಕರ್ತವ್ಯವಾಗಿರುವುದರಿಂದ ಯಾರೂ ಈ ಕೆಲಸವನ್ನು ನಿರಾಕರಿಸುವಂತಿಲ್ಲ. ಮಹಿಳೆಯರಂತೂ ಈ ಕೆಲಸವನ್ನು ನಿರ್ವಹಿಸುತ್ತಲೇ ಬರುತ್ತಿದ್ದಾರೆ. ಆದರೆ ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ತಂಗಲು ಸುರಕ್ಷಿತ ವಸತಿ ವ್ಯವಸ್ಥೆಗಳೆ ಕಲ್ಪಿಸಲಾಗದಿದ್ದರೆ ಕೆಲಸ ಮಾಡುವುದಾದರೂ ಹೇಗೆ ?

ನಮ್ಮ ಹಳ್ಳಿಗಳು ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು ಮಹಿಳಾ ವಾಸಕ್ಕೆ ಯೋಗ್ಯವಾಗಿಲ್ಲದಿರುವುದೇ ತಲೆನೋವಿನ ಸಂಗತಿಯಾಗಿದೆ. ಗ್ರಾಮಾಂತರದ ಮತಗಟ್ಟೆಗಳಲ್ಲಿ ರಾತ್ರಿ ತಂಗಲು ಮಹಿಳೆಯರಿಗೆ ಸುರಕ್ಷಿತತೆ ಎಂಬುದೇ ಇಲ್ಲ. ಸಾಮಾನ್ಯವಾಗಿ ಶಾಲಾ–ಕಾಲೇಜು ಅಥವಾ ಸಮುದಾಯ ಭವನಗಳನ್ನು ಮತಗಟ್ಟೆಗಳಾಗಿ ಗುರುತಿಸಲಾಗಿರುತ್ತದೆ.

ಆ ಕಟ್ಟಡಗಳಲ್ಲಿ ನಗರ, ಜಿಲ್ಲಾ ಕೇಂದ್ರಗಳನ್ನು ಹೊರತು ಪಡಿಸಿ ಉಳಿದೆಡೆ ವಿದ್ಯುತ್ ದೀಪ, ಕೋಣೆಗಳಿಗೆ ಬಾಗಿಲು, ಚಿಲಕ, ಕುಡಿಯುವ ನೀರು ಮುಂತಾಗಿ ಯಾವ ಸೌಲಭ್ಯಗಳೂ ಇರುವುದಿಲ್ಲ. ಚುನಾವಣೆ ತುಂಬಾ ಸೂಕ್ಷ್ಮವಾದ ಸಂದರ್ಭ ಬೇರೆ. ಯಾರ ಮನೆಗೂ ಹೋಗುವಂತಿಲ್ಲ. ಆಡಳಿತದಲ್ಲಿ ಮನೆ ಮಾಡಿಕೊಂಡಿರುವ ಭ್ರಷ್ಟತೆ ಕಾರಣವಾಗಿ ಜನತೆಯಲ್ಲಿ ಸರ್ಕಾರ ಅಥವಾ ಸರ್ಕಾರಿ ಯಂತ್ರದ ಬಗ್ಗೆ ಪೂರ್ವಗ್ರಹಪೀಡಿತ ದೃಷ್ಟಿಗಳು ತುಂಬಿಕೊಂಡಿವೆ. ಹೀಗಾಗಿ ಚುನಾವಣಾ ಸಿಬ್ಬಂದಿ ಬಗೆಗೂ ತಿರಸ್ಕಾರ, ಗುಮಾನಿ, ನಿರ್ಲಕ್ಷ್ಯ ವಿಜೃಂಭಿಸುತ್ತವೆ.

ಇಂಥ ಪರಿ-ಸ್ಥಿತಿಯಲ್ಲಿ ಮಹಿಳೆಯರು ಮೂಲ ಸೌಲಭ್ಯಗಳಿಗಾಗಿ ಹಳ್ಳಿಗಳಲ್ಲಿ ಯಾರನ್ನೂ ಕೇಳುವಂತಿಲ್ಲ. ಚುನಾವಣಾ ಮುನ್ನಾ ದಿನವೇ ಬೆಳಗಿನ ಜಾವ ೭ ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಸರದಿಗಾಗಿ ಕಾದು ಕೂಡಬೇಕು ಅಲ್ಲಿಯೂ ಶೌಚಾಲಯವಿರುವುದಿಲ್ಲ. ಅಲ್ಲಿಂದಲೆ ನಿಯೋಜಿಸಲಾದ ಹಳ್ಳಿ, ತಾಂಡಾ, ಕಗ್ಗಾಡು ಎಲ್ಲೆಲ್ಲಿಯೋ ರಸ್ತೆ ಇಲ್ಲದ ಕಡೆಯೂ ತೆರಳಬೇಕು. ಮತಗಟ್ಟೆಗೆ ತಲುಪಲು ಸಾಯಂಕಾಲ ಆಗಬಹುದು. ರಾತ್ರಿ ಕತ್ತಲಲ್ಲೂ ಚುನಾವಣಾ ಪ್ರಕ್ರಿಯೆಗಾಗಿ ಮತಗಟ್ಟೆ ಸಿದ್ಧಪಡಿಸಿಕೊಳ್ಳಬೇಕು. ಬೆಳಗಿನ ಜಾವ ೬ ಗಂಟೆಯಿಂದಲೇ ಕೆಲಸಕ್ಕೆ ಸುರು ಹಚ್ಚಿಕೊಳ್ಳಬೇಕು.

ನಿಗದಿತ ಅವಧಿಯವರೆಗೆ ಎಲ್ಲ ಕೆಲಸ ಮುಗಿಸಿ ಮತಪೆಟ್ಟಿಗೆಯನ್ನು ಸಂಬಂಧಪಟ್ಟ ಅಧಿಕಾರಿಗೆ ತಲುಪಿಸಿ ಎರಡನೇ ದಿನ ಮಧ್ಯರಾತ್ರಿಯೋ ಅಥವಾ ಮೂರನೆ ದಿನ ಬೆಳಗಿನ ಜಾವವೋ ಬಂದು ತಲುಪಬೇಕು. ಹೆಚ್ಚು ಕಡಿಮೆ ಎರಡು ದಿನದ ಮಟ್ಟಿಗೆ ಮಹಿಳೆಯರು ಮನೆಯಿಂದ ದೂರವಿರಬೇಕು. ಇಷ್ಟು ದೀರ್ಘ ಅವಧಿಯಲ್ಲಿ ಮಲ–ಮೂತ್ರದ ಬಾಧೆ ತೀರಿಸಿಕೊಳ್ಳುವುದು ಹೇಗೆ? ಈ ಅವಧಿಯಲ್ಲಿ ಸ್ತ್ರೀಯರಿಗೆ ಮಾಸಿಕ ಸ್ರಾವ ಕಾಣಿಸಿಕೊಂಡರಂತೂ ನರಕವೇ ಸರಿ. ಕೆಲವೊಮ್ಮೆ ನಾಲ್ಕು ಪುರುಷರ ನಡುವೆ ಒಬ್ಬಳೇ ಮಹಿಳೆಗೆ ನಿಯೋಜಿಸಲಾಗಿರುತ್ತದೆ. ಅಪರಿಚಿತ ಪುರುಷರ ನಡುವೆ ಇದಂತೂ ಹೇಳಿಕೊಳ್ಳಲಾಗದ ಸಂಕಟವಾಗುತ್ತದೆ.

ನಮ್ಮ ಹಳ್ಳಿಗಳಲ್ಲಿ ಮನೆಗಳಲ್ಲಿಯೆ ಪ್ರತ್ಯೇಕ ಸ್ನಾನಕೋಣೆಗಳ ಪರಿಕಲ್ಪನೆ ಇಲ್ಲ. ಸರ್ಕಾರಿ ಕಟ್ಟಡಗಲ್ಲಿ ಸ್ನಾನಗೃಹಗಳನ್ನು ನಿರೀಕ್ಷಿಸುವುದು ಮೂರ್ಖತನವೆ ಸರಿ. ಇದೆಲ್ಲಕ್ಕಿಂತ ಹೆಚ್ಚಾಗಿ ಈ ಕ್ಷಣಕ್ಕೂ ಹಳ್ಳಿಗಳಲ್ಲಿ ಜಾತಿ ತಾರತಮ್ಯ ಮಡಿ–ಮೈಲಿಗೆಯಂಥ ಮೌಢ್ಯಗಳು ತಾಂಡವವಾಡುತ್ತಿವೆ. ಹೀಗಾಗಿ ಅವರು ಸೌಜನ್ಯಕ್ಕಾಗಿ ಅಥವಾ ಮಾನವೀಯತೆ ದೃಷ್ಟಿಯಿಂದಲಾದರೂ ದಲಿತ ಹಿಂದುಳಿದ ಮಹಿಳೆಯರನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಈ ಕಾರಣಗಳಿಂದಾಗಿ ಮಹಿಳೆಯರು ಸ್ನಾನ, ಶೌಚಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗುವಂತಿಲ್ಲ.

ಬಸುರಿ, ಬಾಣಂತಿಯರು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವ-ರಿಗೆ ಈ ಕೆಲಸದಿಂದ ವಿನಾಯಿತಿ ನೀಡಲಾಗಿದೆಯಾದರೂ ಅದಕ್ಕೆ ಸೂಕ್ತವಾದ ವೈದ್ಯಕೀಯ ಪ್ರಮಾಣಪತ್ರ ನೀಡಬೇಕೆಂದಿದೆ. ಈ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯೂ ಸುಲಭವಾಗೇನೂ ಇಲ್ಲ.
ಎಲ್ಲಿಯೂ ಪುರುಷರೊಟ್ಟಿಗೆ ಒಬ್ಬಳೇ ಮಹಿಳೆಯನ್ನು ನಿಯೋಜಿಸಬಾರದು. ಅದರಲ್ಲಿಯೂ ಮಹಿಳಾ ಪೊಲೀಸ್ ಪೇದೆಗಳನ್ನು ನಿಯೋಜಿಸುವಾಗ ಒಬ್ಬಳೇ ಸಿಬ್ಬಂದಿಯನ್ನು ಹಾಕಬಾರದು. ಮಹಿಳಾ ಪೊಲೀಸರ ಮೇಲಾಗುತ್ತಿರುವ ದೌರ್ಜನ್ಯಗಳ ದೊಡ್ಡಪಟ್ಟಿಯೇ ಇದೆ. ಒಂಟಿ ಮಹಿಳಾ ಪೇದೆಗಳ ಬದಲು ಇಬ್ಬರನ್ನು ನೇಮಿಸುವಂತಾಗಬೇಕು.

ಸಾಧ್ಯವಾದಷ್ಟು ಈ ಕೆಲಸಗಳಿಗೆ ಪುರುಷರನ್ನು ನಿಯೋಜಿಸುವುದು ಒಳಿತು. ಯಾವ ಕೆಲಸವನ್ನಾದರೂ ಮಾಡುವಲ್ಲಿ ಮಹಿಳೆಯರು ಹಿಂದೆ ಸರಿಯುತ್ತಿಲ್ಲ. ಆದರೆ ಪುರುಷರ ಹೆಗಲೆಣೆಯಾಗಿ ದುಡಿಯುತ್ತಿರುವ ಮಹಿಳೆ ಯರನ್ನು ಗೌರವದಿಂದ ನೋಡಬೇಕಾದ ಹೊಣೆಗಾರಿಕೆ ಸಮಾಜ ಮತ್ತು ಸರ್ಕಾರಕ್ಕೆ ಇರಬೇಡವೆ? ಚುನಾವಣಾ ಕೆಲಸ ಎಲ್ಲ ನೌಕರರ ಕರ್ತವ್ಯ ಎಂದಾದರೆ ಮೂಲಸೌಲಭ್ಯಗಳನ್ನು ಪಡೆಯುವುದು ಹಕ್ಕಾಗಿದೆ ಎಂಬುದನ್ನು ಮರೆಯದಿರೋಣ.

ಇಷ್ಟಕ್ಕೂ ಕೇಂದ್ರ ಚುನಾವಣಾ ಆಯೋಗ, ಮೂಲ ಸೌಲಭ್ಯಗಳಿಲ್ಲದಿದ್ದಲ್ಲಿ ಮಹಿಳೆಯರನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸ-ಬಾರದೆಂದು 1996ರಲ್ಲೇ ನಿರ್ದೇಶನ ನೀಡಿದೆ. ಪ್ರತಿ ಚುನಾವಣೆ ಸಂದರ್ಭಗಳಲ್ಲಿ ಮಹಿಳೆಯರು ಈ ಸೌಲಭ್ಯಗಳನ್ನು ಕುರಿತು ಧ್ವನಿ ಎತ್ತಿರುವರಾದರೂ ಸರ್ಕಾರ ಕಿವಿಗೊಟ್ಟಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.