ಬೆಳಗಾವಿ ಹೋಟೆಲ್ ದುರಂತ ಮೂವರ ಸಾವು

ಬೆಳಗಾವಿ, ಸೆ. 11– ನಗರದ ರಾಮದೇವ ಹೋಟೆಲ್‌ನ ತಾರಸಿ ಕುಸಿದು ಶುಕ್ರವಾರ ಸಂಜೆ ಸಂಭವಿಸಿದ ದುರಂತದಲ್ಲಿ ಒಟ್ಟು ಮೂವರು ಸತ್ತಿದ್ದಾರೆ.

ನಿನ್ನೆ ಮಧ್ಯರಾತ್ರಿ ವೇಳೆಯಲ್ಲಿ ಅವಶೇಷವನ್ನೆಲ್ಲ ತೆಗೆದ ನಂತರ ಅದರ ಅಡಿಯಲ್ಲಿ ಕಟ್ಟಡದ ಗುತ್ತಿಗೆದಾರ ಯಳ್ಳೂರಿನ ದತ್ತಾತ್ರೇಯ (28) ಎಂಬುವರ ಶವ ಅಪ್ಪಚ್ಚಿಯಾಗಿ ಸಿಕ್ಕಿದೆ. ಅವಶೇಷದ ಅಡಿಯಲ್ಲಿ ಈ ಒಂದು ಶವ ಮಾತ್ರ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುತ್ತಿಗೆದಾರ ಅವಶೇಷಗಳ ಅಡಿಯಲ್ಲಿ ಸಿಲುಕುವುದಕ್ಕಿಂತ ಮುಂಚೆ ಅದು ಕುಸಿಯುತ್ತದೆ ಎಂಬ ಎಚ್ಚರಿಕೆ ನೀಡಿದರು.

ಧಾರ್ಮಿಕ ಅಸಹನೆ: ಅಮೆರಿಕದ ಟೀಕೆಗೆ ಭಾರತದ ತಿರಸ್ಕಾರ

ನವದೆಹಲಿ, ಸೆ. 11 (ಪಿಟಿಐ)– ಭಾರತದಲ್ಲಿ ಮತೀಯ ಅಸಹನೆ ಇದೆ ಎಂಬ ಅಮೆರಿಕದ ವರದಿಯನ್ನು ಭಾರತ ಸರ್ಕಾರ ಸಾರಾ ಸಗಟಾಗಿ ತಿರಸ್ಕರಿಸಿದ್ದು, ಈ ಕುರಿತು ಭಾರತ ಸರ್ಕಾರದೊಡನೆ ಮಾತುಕತೆ ನಡೆಸಲು ಅಮೆರಿಕ ಕಳಿಸಲು ಉದ್ದೇಶಿಸಿರುವ ವಿಶೇಷ ದೂತನನ್ನು ಸ್ವಾಗತಿಸಲು ನಿರಾಕರಿಸಿದೆ.

‘ನಾವು ನಮ್ಮ ವ್ಯವಹಾರಗಳನ್ನು ಹೇಗೆ ನಡೆಸುತ್ತೇವೆ ಎಂಬ ವಿಷಯದಲ್ಲಿ ಮೂಗು ತೂರಿಸುವ ಯತ್ನವನ್ನು ನಾವು ತಿರಸ್ಕರಿಸುತ್ತೇವೆ’ ಎಂದು ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.