ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷದ ಹಿಂದೆ: ರಾಜೀವ್ ಹತ್ಯೆ: ಖುಲಾಸೆಯಾದ 19 ಜನರ ಬಿಡುಗಡೆ

Published 13 ಮೇ 2024, 2:12 IST
Last Updated 13 ಮೇ 2024, 2:12 IST
ಅಕ್ಷರ ಗಾತ್ರ

ಚೆನ್ನೈ, ಮೇ 12 (ಯುಎನ್‌ಐ, ಪಿಟಿಐ)– ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಖುಲಾಸೆಯಾದ ಎಲ್ಲಾ 19 ಮಂದಿಯನ್ನು ಇಂದು ಅವರಿದ್ದ ಸೆರೆಮನೆಗಳಿಂದ ಬಿಡುಗಡೆ ಮಾಡಲಾಯಿತು.

ಈ ಪೈಕಿ ಭಾರತೀಯರನ್ನು ಯಾವುದೇ ನಿರ್ಬಂಧವಿಲ್ಲದೆ ಬಂಧಮುಕ್ತಗೊಳಿಸ
ಲಾಯಿತು. ಆದರೆ ಶ್ರೀಲಂಕಾಕ್ಕೆ ಸೇರಿದವರನ್ನು ವೆಲ್ಲೂರಿನಲ್ಲಿರುವ ವಿಶೇಷ ಶಿಬಿರಕ್ಕೆ ಕಳುಹಿಸಲಾಯಿತು ಎಂದು ಸೆರೆಮನೆ ಮೂಲಗಳು ತಿಳಿಸಿವೆ.

ವಿದೇಶ ಪ್ರವಾಸಕ್ಕೆ ಐಎಎಸ್‌ ಅಧಿಕಾರಿಗಳ ದಂಡು

ಬೆಂಗಳೂರು, ಮೇ 12– ಅಧಿಕಾರದ ಅವಧಿ ಮುಗಿಯುತ್ತಾ ಬಂದಂತೆ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ವಿದೇಶ ಪ್ರವಾಸದ ವ್ಯಾಮೋಹ ಬಿಟ್ಟು ತಮ್ಮ ರಾಜಕೀಯ ಭವಿಷ್ಯದ ಕಡೆ ಗಮನಹರಿಸಿದ್ದರೆ, ಹಿರಿಯ ಐಎಎಸ್‌ ಅಧಿಕಾರಿಗಳು ಸರ್ಕಾರದ ಖರ್ಚಿ ನಲ್ಲಿ ತಂಡೋಪತಂಡವಾಗಿ ವಿದೇಶ
ಪ್ರವಾಸದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಹತ್ತಕ್ಕೂ ಹೆಚ್ಚು ಐಎಎಸ್‌ ಅಧಿಕಾರಿಗಳು ಸರ್ಕಾರದ ಖರ್ಚಿನಲ್ಲಿ ವಿದೇಶ ಯಾತ್ರೆ ಮಾಡಿ ಬಂದಿ ದ್ದಾರೆ; ಈ ತಿಂಗಳು ಮತ್ತೆ ಸುಮಾರು 10 ಐಎಎಸ್‌ ಅಧಿಕಾರಿಗಳಿಗೆ ವಿದೇಶ ಪ್ರವಾಸ ಕೈಗೊಳ್ಳಲು ಸರ್ಕಾರ ಅನುಮತಿ ನೀಡಿದೆ.

ಇನ್ನೂ ಕೆಲವು ಐಎಎಸ್‌ ಅಧಿಕಾರಿಗಳು ವಿದೇಶ ಪ್ರವಾಸಕ್ಕೆ ಹೋಗಲು ಅನುಮತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಅವುಗಳು ಪರಿಶೀಲನೆಯ ಹಂತದಲ್ಲಿವೆ. ಇದನ್ನೆಲ್ಲಾ ನೋಡಿದರೆ, ವಿದೇಶ ಪ್ರವಾಸಕ್ಕೆ ತೆರಳಲು ಐಎಎಸ್‌ ಅಧಿಕಾರಿಗಳ ನಡುವೆ ತೀವ್ರ ಪೈಪೋಟಿಯೇ ನಡೆದಿರುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT