ಸೆ. 23 1999 ಗುರುವಾರ

ಬರ: ತುರ್ತು ಪರಿಹಾರಕ್ಕೆ ಆದೇಶ

ಬೆಂಗಳೂರು, ಸೆ.22– ಮುಂಗಾರು ಮಳೆಯ ತೀವ್ರ ಕೊರತೆಯಿಂದ ರಾಜ್ಯದ ಚಿತ್ರದುರ್ಗ, ಕೊಪ್ಪಳ, ಧಾರವಾಡ, ಹಾಸನ, ಕೋಲಾರ, ಮಂಡ್ಯ, ಹಾವೇರಿ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ತೀವ್ರಗೊಂಡಿದೆ. ಬೆಳೆಗಳು ಒಣಗುತ್ತಿದ್ದು ಬರಪರಿಸ್ಥಿತಿ ತಲೆದೋರಿದೆ.

ಕುಡಿಯುವ ನೀರು ಒದಗಿಸಲು ಹಾಗೂ ಬರ ಪರಿಹಾರ ಕಾಮಗಾರಿಗಳಿಗಾಗಿ ಹೆಚ್ಚುವರಿ ಹಣ ಬಿಡುಗಡೆ ಮಾಡಬೇಕೆಂದು ಈ ಜೆಲ್ಲೆಗಳ ಜಿಲ್ಲಾಧಿಕಾರಿಗಳು ಸರ್ಕಾರವನ್ನು ಕೋರಿದ್ದಾರೆ ಎಂದು ಕಂದಾಯ ಸಚಿವ ಬಿ. ಸೋಮಶೇಖರ್ ಅವರು ಇಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಬನ್ನೇರುಘಟ್ಟ: ಎಂಟು ಹುಲಿಗಳಿಗೆ ಪ್ರತ್ಯೇಕ ಬೋನು

ಬೆಂಗಳೂರು, ಸೆ. 22– ಇಲ್ಲಿಗೆ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಇತ್ತೀಚೆಗೆ ಹೆಣ್ಣು ಹುಲಿ ‘ನೀತು’ವಿನ ಮೇಲೆ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣವಾದ ಹುಲಿಗಳಿಗೆ ಈಗ ಪ್ರತ್ಯೇಕ ಬೋನಿನ ವ್ಯವಸ್ಥೆ ಮಾಡಲಾಗಿದೆ.

ಈ ಎಂಟು ಹುಲಿಗಳನ್ನು ಇತರ ಹುಲಿಗಳ ಬೋನಿನಿಂದ ದೂರದಲ್ಲಿ ಸಫಾರಿ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಎರಡು ಪ್ರತ್ಯೇಕ ಬೋನುಗಳಲ್ಲಿ ಇರಿಸಲಾಗಿದೆ. ಇದರಿಂದ ಸಫಾರಿ ಪ್ರದೇಶದಲ್ಲಿರುವ ಬೋನಿನ ಸಂಖ್ಯೆ ಹತ್ತಕ್ಕೆ ಏರಿದಂತಾಗಿದೆ. ಇಲ್ಲಿಯವರೆಗೆ ಸಫಾರಿ ಪ್ರದೇಶದಲ್ಲಿರುವ ಎಂಟು ಬೋನುಗಳಲ್ಲಿ ಒಟ್ಟು ಇಪ್ಪತ್ತಾರು ಹುಲಿಗಳನ್ನು ಇರಿಸಲಾಗಿತ್ತು. ಚಿಕ್ಕ ಸಫಾರಿ ಪ್ರದೇಶದಲ್ಲಿ ಹೆಚ್ಚು ಹುಲಿಗಳು ಇರುವ ಕಾರಣ ಹುಲಿಗಳನ್ನು ಸರದಿಯಂತೆ ಹೊರಕ್ಕೆ ಬಿಡಲಾಗುತ್ತಿತ್ತು. ಇತರ ಹುಲಿಗಳ ಮೇಲೆ ಹಲ್ಲೆ ಮಾಡುವ ಸ್ವಭಾವ ಬೆಳಸಿಕೊಂಡಿದ್ದ ಎಂಟು ವರ್ಷದ ನೀತುವಿನ ಮೇಲೆ ಭಾನುವಾರ ಕೆಲವು ಹುಲಿಗಳು ದಾಳಿ ಮಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.