ಮುಂಬೈ ಬಳಿ ಗೂಡ್ಸ್ ಗಾಡಿಗಳ ಡಿಕ್ಕಿ: 9 ಮಂದಿಯ ಸಾವು

ನವದೆಹಲಿ, ಮೇ 14– ಒಂದು ವಾರದ ಹಿಂದೆ ದೇಶದಾದ್ಯಂತ ರೈಲ್ವೆ ಮುಷ್ಕರ ಆರಂಭ ಆದಾಗಿನಿಂದ ಈಚೆಗೆ ಸಂಭವಿಸಿದ ಮೊದಲ ದೊಡ್ಡ ರೈಲು ಅಪಘಾತದಲ್ಲಿ ಒಂಬತ್ತು ಮಂದಿ ಸತ್ತು, ಇತರ 10 ಮಂದಿ ಗಾಯಗೊಂಡರು.

ಮುಂಬಯಿಯಿಂದ ಸುಮಾರು ನೂರು ಕಿಲೊಮೀಟರ್ ದೂರದಲ್ಲಿಯ ಕರ್ಜಟ್ ಬಳಿ ನಿನ್ನೆ ರಾತ್ರಿ ಈ ಅಪಘಾತ ಸಂಭವಿಸಿತು. ಗೂಡ್ಸ್ ಗಾಡಿಯೊಂದಕ್ಕೆ ಡಿಕ್ಕಿ ಹೊಡೆದ ಬಳಿಕ ಇನ್ನೊಂದು ಗೂಡ್ಸ್ ಗಾಡಿಯ ಎರಡು ಎಂಜಿನ್‌ಗಳು ಕಂಬಿ ತಪ್ಪಿದವು. 15 ವ್ಯಾಗನ್‌ಗಳು ಉರುಳಿದವೆಂದೂ ಅಲ್ಲದೆ ಮೇಲ್ಗಡೆಯ ವಿದ್ಯುತ್ ಉಪಕರಣಕ್ಕೆ ಜಖಂ ಆಯಿತೆಂದೂ ಅಧಿಕೃತ ಮೂಲಗಳು ತಿಳಿಸಿವೆ.

ಸತ್ತವರಲ್ಲಿ ಐವರು ಪೊಲೀಸರೂ ಇದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.