‘ಪಕೋಡ ಮಾರುವುದೂ ಒಂದು ಉದ್ಯೋಗವೇ’ ಎಂದು ರಾಜಕೀಯ ಮುಖಂಡರು ಹಂಗಿಸುತ್ತಿರುವುದು ಈ ದೇಶದ ಪಕೋಡ ಮಾಡುವ, ದಿನಗೂಲಿ ಮಾಡುವ, ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ, ಹೋಟೆಲ್‌ಗಳಲ್ಲಿ ಮಾಣಿ ಕೆಲಸ ಮಾಡುವ, ಆಟೊ ಓಡಿಸುವ ಕೋಟ್ಯಂತರ ಕಾರ್ಮಿಕರಿಗೆ ಮಾಡಿದ ಅಪಮಾನವಾಗಿದೆ. ಈ ಕಾರ್ಮಿಕರು ತಮ್ಮ ಬೆವರು ಬಸಿದು ಪ್ರಾಮಾಣಿಕವಾಗಿ ಸಂಪಾದಿಸಿದ ಉಪ್ಪನ್ನು ಉಣ್ಣುತ್ತಿದ್ದು ಈ ದೇಶದ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ‘ರಾಜಕಾರಣಿಯಾಗು’ ಎಂದು ಸಲಹೆ ಮಾಡಿದರೆ ನಾಚಿಕೆ ಪಡಬೇಕೇ ಹೊರತು, ‘ಪಕೋಡ ಮಾರು’ ಎಂದರೆ ಏಕೆ ಸಂಕೋಚಪಡಬೇಕು?

ಈಚೆಗೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಪ್ರವಾಸ ಬಂದಾಗ ತಮ್ಮ ಮೊದಲ ಸಂವಾದ ನಡೆಸಿದ್ದು ಪಕೋಡಅಂಗಡಿಯಲ್ಲೇ. ಆ ಮಹಿಳೆ ಇವರಿಂದ ಹಣ ತೆಗೆದುಕೊಳ್ಳಲು ನಿರಾಕರಿಸಿದಳು ಎಂದ ಮೇಲೆ ಆ ಪಕೋಡ ಮಹಿಳೆಯ ಹೃದಯ ಶ್ರೀಮಂತಿಕೆ ಎಷ್ಟಿರಬೇಕು.

ಬೊಫೋರ್ಸ್, ಕಾಮನ್‌ವೆಲ್ತ್, 2ಜಿ, ಕಲ್ಲಿದ್ದಲು, ಡಿನೋಟಿಫಿಕೇಷನ್ ಮುಂತಾದ ಹಗರಣಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ತಮ್ಮ ತಿಜೋರಿಗಳಲ್ಲಿ ತುಂಬಿಕೊಂಡಿರುವ ರಾಜಕೀಯ ನಾಯಕರಿಗೆ, ಪಕೋಡ ಮಾರುವುದರಿಂದ ಕೂಡ ಹಣ ಸಂಪಾದಿಸಬಹುದು, ತಲೆ ಎತ್ತಿ ಬದುಕಬಹುದು ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎನ್ನುವುದು ದುರ್ದೈವ.

ಜಿ.ವಿ. ಆನಂದ್, ಬಾಗೇಪಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.