ಫಲಿತಾಂಶವನ್ನು ವಿನಮ್ರವಾಗಿ ಸ್ವೀಕರಿಸಿ

ಜಾರ್ಖಂಡ್ ವಿಧಾನಸಭಾ ಚುನಾವಣೆ ಮತ್ತು ಕರ್ನಾಟಕದಲ್ಲಿನ ಉಪಚುನಾವಣೆಯ ಜಯವನ್ನು ಸಂಭ್ರಮಿಸಿರುವ ‘ಇಂಡಿಯಾ’ ಮೈತ್ರಿಕೂಟವು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿನ ತನ್ನ ಸೋಲಿನ ಹೊಣೆಯನ್ನು ಇವಿಎಂ ಮೇಲೆ ಹೊರಿಸಿ, ಮೋಸ ನಡೆದಿರುವ ಗುಮಾನಿ ವ್ಯಕ್ತಪಡಿಸಿರುವುದು ಅತ್ಯಂತ ಕೆಟ್ಟ ರಾಜಕೀಯ ನಡೆ. ಪ್ರತಿ ಬಾರಿ ಗೆದ್ದಾಗ ಖುಷಿಪಡುವ ಇಂಡಿಯಾ ಮೈತ್ರಿಕೂಟ, ಸೋತಾಗ ಮಾತ್ರ ಇವಿಎಂ ಮೇಲೆ ದೋಷಾರೋಪ ಹೊರಿಸುವುದು ಸಲ್ಲದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಪ್ರಭುಗಳ ಜನಾದೇಶವನ್ನು ಗೌರವಪೂರ್ವಕವಾಗಿ ಸ್ವೀಕರಿಸಬೇಕು. ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಮತದಾರರನ್ನು ಹೊಂದಿರುವ ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಡುತ್ತಿದೆ. ಇದು ಜಗತ್ತಿನ ಇತರ ರಾಷ್ಟ್ರಗಳ ಅಚ್ಚರಿಗೂ ಕಾರಣವಾಗಿರು ವುದು ಸತ್ಯ. ಹೀಗಿರುವಾಗ, ಕ್ಷುಲ್ಲಕ ರಾಜಕೀಯಕ್ಕಾಗಿ ಮತಯಂತ್ರಗಳನ್ನು ದೂರದೆ, ಫಲಿತಾಂಶವನ್ನು ವಿನಮ್ರವಾಗಿ ಸ್ವೀಕರಿಸಬೇಕು.

– ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು

ಪರಿಸರ ಪದವೀಧರರಿಗೆ ಸಿಗಲಿ ಆದ್ಯತೆ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹುದ್ದೆಗೆ ಇದ್ದ ಅರ್ಹತಾ ಮಾನದಂಡಗಳಿಗೆ ತಿದ್ದುಪಡಿ ಮಾಡಿರುವ ಸರ್ಕಾರ, ಯಾವುದೇ ವಿಜ್ಞಾನ ಸ್ನಾತಕೋತ್ತರ ಅಥವಾ ಎಂಜಿನಿಯರಿಂಗ್ ಪದವೀಧರರು ಅರ್ಜಿ ಹಾಕಬಹುದು ಎಂದು ತಿಳಿಸಿರುವುದು ಕಳವಳಕಾರಿಯಾಗಿದೆ. ನಮ್ಮ ಇಂದಿನ ವಿದ್ಯಾಭ್ಯಾಸ ಹೇಗಿದೆಯೆಂದರೆ, ಪರಿಸರ ವಿಜ್ಞಾನವನ್ನು ಬೇರೆಯೇ ವಿಷಯವಾಗಿ ಬೋಧಿಸಲಾಗುತ್ತಿದೆ. ಮಿಕ್ಕೆಲ್ಲ ವಿಜ್ಞಾನ ವಿಭಾಗಗಳ ಬಹುತೇಕ ಪದವೀಧರರಿಗೆ ಪರಿಸರ ಮತ್ತು ಪರಿಸರ ಮಾಲಿನ್ಯದ ಬಗ್ಗೆ ಸಾಮಾನ್ಯ ತಿಳಿವಳಿಕೆ, ಕಳಕಳಿ, ಕುತೂಹಲ ಏನೂ ಇರುವುದಿಲ್ಲ. ಈ ಅಧ್ಯಕ್ಷ ಹುದ್ದೆಗೆ ಇದ್ದ ಅರ್ಹತೆಗಳಲ್ಲಿ ಪರಿಸರ ವಿಜ್ಞಾನದ ಪದವೀಧರರಾಗಿರಬೇಕು ಎಂಬುದೂ ಒಂದಾಗಿತ್ತು.

ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ಪರಿಸರ ಜ್ಞಾನ ಉಳ್ಳವರೇ ಈ ಹುದ್ದೆಗೆ ಬರಬೇಕೆಂಬ ಆಶಯ ವ್ಯಕ್ತಪಡಿಸಿವೆ. ಈ ಕುರಿತು ಮಂಡಳಿ ಈವರೆಗೆ ಹೊಂದಿದ್ದ ತತ್ವವನ್ನು ಮತ್ತು ನ್ಯಾಯಾಲಯಗಳ ಆಶಯವನ್ನು ಬದಿಗೊತ್ತಿ ಈ ಪ್ರಕಟಣೆ ಹೊರಡಿಸಿರುವುದು ಆತಂಕಕಾರಿಯಾಗಿದೆ. ಈ ಹುದ್ದೆಗೆ ಜೀವಜಾಲದ ಪರಿಕಲ್ಪನೆ ಇರದ ಪದವೀಧರ ಬಂದರೆ, ಈಗಾಗಲೇ ಮಾಲಿನ್ಯದಿಂದ ಬಸವಳಿದಿರುವ ಪರಿಸರಕ್ಕೆ ಎಷ್ಟರಮಟ್ಟಿಗೆ ನ್ಯಾಯ

ಒದಗಿಸಬಲ್ಲರು ಎಂಬ ಆತಂಕ ಪರಿಸರಪ್ರಿಯರದ್ದಾಗಿದೆ. ಪರಿಸರ ವಿಜ್ಞಾನದ ಪದವೀಧರರಾಗಿದ್ದು, ಪರಿಸರದ ಬಗ್ಗೆ ಸರಿಯಾದ ಜ್ಞಾನ ಮತ್ತು ಕಾಳಜಿ ಇರುವವರೊಬ್ಬರು ಈ ಹುದ್ದೆಗೆ ಬರಲಿ ಎಂಬುದು ಪರಿಸರಪ್ರೇಮಿಗಳ ಆಶಯ.

– ವಿಶಾಲಾಕ್ಷಿ ಶರ್ಮಾ, ಮಮತಾ ರೈ, ಶಾರದಾ ಗೋಪಾಲ, ಸರೋಜಾ, ‘ಪರಿಸರಕ್ಕಾಗಿ ನಾವು’ ವೇದಿಕೆ

ಸಂದೇಶ ರವಾನಿಸಬಹುದಿತ್ತು...

ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್ ಮುಗ್ಗರಿಸಿವೆ. ಸಂಡೂರಿನಲ್ಲಷ್ಟೇ ಕುಟುಂಬಕ್ಕೆ ಮಣೆಹಾಕಿದ ಮತದಾರ, ಉಳಿದ ಎರಡು ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣಕ್ಕೆ ಸರಿಯಾದ ಪಾಠ ಕಲಿಸಿದ್ದಾನೆ. ಜೆಡಿಎಸ್

ಚನ್ನಪಟ್ಟಣದಲ್ಲಿ, ಬಿಜೆಪಿಯು ಶಿಗ್ಗಾವಿಯಲ್ಲಿ ಕಾರ್ಯಕರ್ತನಿಗೆ ಟೆಕೆಟ್ ಕೊಟ್ಟಿದ್ದರೆ, ಸೋತಿದ್ದರೂ ಅಷ್ಟರಮಟ್ಟಿಗೆ ಒಳ್ಳೆಯ ಸಂದೇಶವೊಂದು ರವಾನೆಯಾಗುತ್ತಿತ್ತು.

–ಗುರು ಜಗಳೂರು, ಹರಿಹರ

ಮತದಾರರ ಮನಸ್ಸು ಅರಿಯಲಾಗದು

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿರುವ ಮತಗಟ್ಟೆ ಸಮೀಕ್ಷೆಗಳಲ್ಲಿ ಹೆಚ್ಚಿನವು ನೈಜ ಫಲಿತಾಂಶಕ್ಕೆ ಸಮೀಪವೂ ಇರುವುದಿಲ್ಲ. ಇಂತಹ ಸಮೀಕ್ಷೆಗಳನ್ನೇ ನಂಬಿಕೊಂಡು ಕೆಲವರು ತಮ್ಮ ಹಣ, ಆಸ್ತಿ, ಚಿನ್ನ, ಬೆಳ್ಳಿ, ಹಸು–ಎಮ್ಮೆಗಳನ್ನು ಪಣಕ್ಕಿಟ್ಟು ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆ ಮತ್ತು ಕರ್ನಾಟಕದ ಉಪಚುನಾವಣೆಯ ಫಲಿತಾಂಶಗಳು, ಮತದಾರರು ಮತಗಟ್ಟೆ ಸಮೀಕ್ಷೆಗಳ ಬಗ್ಗೆ ವಿಶ್ವಾಸವನ್ನೇ ಕಳೆದುಕೊಳ್ಳುವಂತೆ ಮಾಡಿವೆ. ಮತದಾರರ ಮನಸ್ಸನ್ನು ಯಾರೂ ಅರಿಯಲು ಸಾಧ್ಯವಿಲ್ಲ ಎಂಬುದಕ್ಕೆ ಈಗಿನ ಫಲಿತಾಂಶಗಳೇ ನಿದರ್ಶನಗಳಾಗಿವೆ.

– ಬೂಕನಕೆರೆ ವಿಜೇಂದ್ರ, ಮೈಸೂರು

ಸಂವಿಧಾನ ಬದಲಾವಣೆಗೆ ಕರೆ?!

‘ಸ್ವಾತಂತ್ರ್ಯಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಬಂದಮೇಲೆ ಜಾತ್ಯತೀತ ರಾಷ್ಟ್ರವಾಯಿತು. ಈಗ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು’ ಎಂದು ಉಡುಪಿ ಪೇಜಾವರ ಮಠದ ಸ್ವಾಮೀಜಿ ಆಗ್ರಹಿಸಿದ್ದಾರೆ

(ಪ್ರ.ವಾ., ನ. 24). ಹಾಗಾದರೆ ಸ್ವಾಮೀಜಿಗೆ, ಸ್ವಾತಂತ್ರ್ಯಪೂರ್ವದ ಬ್ರಿಟಿಷ್ ಆಡಳಿತ ಸರಿಯಾಗಿತ್ತೇ? ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು, ಜಾತ್ಯತೀತ ರಾಷ್ಟ್ರವಾದದ್ದು ಇಷ್ಟವಿಲ್ಲವೇ? ಸ್ವಾತಂತ್ರ್ಯದ ಹೋರಾಟದಲ್ಲಿ ಬಲಿಯಾದ ಲಕ್ಷೋಪಲಕ್ಷ ಭಾರತೀಯರ ಹೋರಾಟದ ಶ್ರಮ ವ್ಯರ್ಥವಾಯಿತೇ? ಅಂಬೇಡ್ಕರ್ ಬರೆದ ಸಂವಿಧಾನವನ್ನು ಜಾರಿಗೆ ತಂದದ್ದು, ಭಾರತವನ್ನು ಸರ್ವತಂತ್ರ ಸ್ವತಂತ್ರ ಗಣರಾಜ್ಯವನ್ನಾಗಿ ಘೋಷಣೆ ಮಾಡಿದ್ದು ವ್ಯರ್ಥವೇ? ‘ನಮ್ಮನ್ನು ಗೌರವಿಸುವ ಸಂವಿಧಾನ’ ಬರಬೇಕೆಂದರೆ, ಈಗಿರುವ ಸಂವಿಧಾನ ಯಾರನ್ನು ಗೌರವಿಸುತ್ತಿಲ್ಲ? ಇದೇನು, ಸಂವಿಧಾನ ಬದಲಾವಣೆಗೆ ಸ್ವಾಮೀಜಿ ಪರೋಕ್ಷವಾಗಿ ಕರೆ ನೀಡಿದ್ದಾರೆಯೇ?

ಹಿಂದೂಗಳನ್ನು ಬೇರೆ ಧರ್ಮಕ್ಕೆ ಸೆಳೆಯುವ ಕೆಲಸ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸ್ವಾಮೀಜಿ, ನಮ್ಮ ಸಮಾಜದಲ್ಲಿರುವ ಜಾತೀಯತೆ, ಮಡಿ ಮೈಲಿಗೆ, ಮೇಲು ಕೀಳಿನ ತಾರತಮ್ಯ ಹೋಗಲಾಡಿಸುವ ಹಾಗೂ ಎಲ್ಲರನ್ನೂ ಗೌರವಿಸುವ ಸಾಮಾಜಿಕ, ಆರ್ಥಿಕ ಸುಧಾರಣೆಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ?

– ತಾ.ಸಿ.ತಿಮ್ಮಯ್ಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.