ಈರುಳ್ಳಿ, ಟೊಮೆಟೊ: ಎಲ್ಲರಿಗೂ ಸಿಗಲಿ ರಿಯಾಯಿತಿ

ಕರ್ನಾಟಕ, ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾದ ಪರಿಣಾಮವಾಗಿ ಈರುಳ್ಳಿ, ಟೊಮೆಟೊ ಬೆಳೆಗೆ ಹಾನಿ
ಯಾಗಿದ್ದರಿಂದ, ಇವುಗಳ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯವು ತನ್ನ ಅಧೀನದ ಕೆಲವು ಸಂಸ್ಥೆಗಳ ಮೂಲಕ ದೆಹಲಿ, ಮುಂಬೈ, ಬೆಂಗಳೂರಿನಂತಹ ಆಯ್ದ ಕೆಲ ನಗರಗಳಲ್ಲಿ ಈ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ, ಮಾರುಕಟ್ಟೆ ಬೆಲೆ ನಿಯಂತ್ರಣಕ್ಕೆ ಕ್ರಮ ವಹಿಸಿರುವುದಾಗಿ ತಿಳಿಸಿದೆ.

ನಿತ್ಯ ಬಳಕೆಯ ಈ ಉತ್ಪನ್ನಗಳನ್ನು ದೇಶದ ಕೆಲವೇ ನಗರಗಳಲ್ಲಿ ವಿತರಿಸಿ ಸಚಿವಾಲಯವು ಜನರ ಕಣ್ಣೊರೆಸುವ ತಂತ್ರ ಮಾಡುವುದನ್ನು ಬಿಟ್ಟು, ದೇಶದ ಎಲ್ಲಾ ಎಪಿಎಂಸಿಗಳಲ್ಲಿ ನೇರವಾಗಿ ರೈತರಿಂದ ಖರೀದಿಸಿ, ಎಲ್ಲರಿಗೂ ರಿಯಾಯಿತಿ ದರದ ಪ್ರಯೋಜನ ಸಿಗುವಂತೆ ಮಾಡಲಿ. ದಲ್ಲಾಳಿಗಳ ಒತ್ತಡಕ್ಕೆ ಮಣಿದು ಈರುಳ್ಳಿ ಮೇಲಿನ ರಫ್ತು ದರವನ್ನು ಶೇ 40ರಿಂದ ಶೇ 20ಕ್ಕೆ ಇಳಿಸಿದ್ದು ಏಕೆ? ತನ್ನ ಬಳಿ ಇರುವ ಕಾಪು ದಾಸ್ತಾನನ್ನು ಬಿಡುಗಡೆ ಮಾಡಿ ದೇಶದ ಎಲ್ಲಾ ನಗರ, ಪಟ್ಟಣಗಳಲ್ಲೂ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿ.

-ಮುಳ್ಳೂರು ಪ್ರಕಾಶ್, ಮೈಸೂರು

ಮಳೆ ಅನಾಹುತ: ಮುನ್ನೆಚ್ಚರಿಕೆ ಇಲ್ಲವೇಕೆ?

ಮಳೆಯ ನೀರಿಗೆ ಮೂವರು ಕೊಚ್ಚಿ ಹೋದ ಸುದ್ದಿ (ಪ್ರ.ವಾ., ಅ. 18) ಓದಿ ತುಂಬಾ ಬೇಸರವಾಯಿತು. ಇಂತಹ ಅತ್ಯಾಧುನಿಕ ವಿಜ್ಞಾನ, ತಂತ್ರಜ್ಞಾನದ ಕಾಲದಲ್ಲೂ, ಮಾಧ್ಯಮಗಳು ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿಯೂ ಅಲ್ಲಲ್ಲಿ ಹೀಗೆ ಮಳೆಯ ನೀರಿಗೆ ಜನ ಕೊಚ್ಚಿ ಹೋಗುತ್ತಾರೆಂದರೆ ಅದು ಅತ್ಯಂತ ಆಘಾತಕರ ಸಂಗತಿ. ನಗರ ಯೋಜನೆ, ಒಳಚರಂಡಿಗಳ ನಿರ್ವಹಣೆ, ಜನರಲ್ಲಿ ಜಾಗೃತಿಯನ್ನು ಮೂಡಿಸುವಂತಹ ಕಾರ್ಯಗಳಲ್ಲಿ ಸೋಲುತ್ತಿರುವುದೇ ಇದಕ್ಕೆ ಪ್ರಮುಖವಾದ ಕಾರಣ.

ಸರ್ಕಾರ ಮತ್ತು ಸಾರ್ವಜನಿಕರು ಮಳೆಗಾಲಕ್ಕೂ ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನಂತೂ ತೆಗೆದು ಕೊಂಡಿರುವುದಿಲ್ಲ. ಕೊನೆಯಪಕ್ಷ ಮಳೆ ಬರುವಾಗ ಅಥವಾ ಮಳೆ ಬಂದ ನಂತರವಾದರೂ ಈ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಡವೇ? ಇಂತಹ ಸಾವುಗಳನ್ನು ನಿಯಂತ್ರಿಸುವುದು ಯಾವಾಗ? ಆಡಳಿತಾರೂಢರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಇಂತಹ ಅನಾಹುತಗಳ ಸಂಖ್ಯೆ ಅಧಿಕವಾಗುವ ಸಾಧ್ಯತೆಯೇ ಹೆಚ್ಚು.

-ಶಿವರಾಜು ಎ.ಆರ್., ಜೆಟ್ಟಿಅಗ್ರಹಾರ, ಕೊರಟಗೆರೆ

ಮಳೆನೀರು ಸಂಗ್ರಹ: ಬೇಕು ಕ್ರಿಯಾ ಯೋಜನೆ

‘ಮಳೆಯ ನೀರು ಹಿಡಿದಿಟ್ಟರೆ ಆಗದೇ?’ ಎಂಬ ನಾಗೇಶ ಹೆಗಡೆ ಅವರ ಅಭಿಪ್ರಾಯ (ವಾ.ವಾ., ಅ. 17) ಸಮಯೋಚಿತವಾಗಿದೆ ಹಾಗೂ ಸಾಮಾಜಿಕ ಕಾಳಜಿ ಹೊಂದಿದ್ದಾಗಿದೆ. ಆದರೆ ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರ, ಯಾರ ಹಿಡಿತಕ್ಕೂ ಸಿಗದ ಬಡಾವಣೆಗಳ ವಿಸ್ತರಣೆ ಹಾಗೂ ಬಹುಮಹಡಿ ಕಟ್ಟಡಗಳ ವಿನ್ಯಾಸವು ಸಂಬಂಧಿಸಿದ ಅಧಿಕಾರಿಗಳ ನಿಯಂತ್ರಣವನ್ನೂ ಮೀರಿದೆ. ಕೆಂಪೇಗೌಡರ ದೂರದರ್ಶಿತ್ವವನ್ನು ನಮ್ಮ ಅಧಿಕಾರಸ್ಥರು ಅರಿತುಕೊಳ್ಳಲಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಮಳೆನೀರು ಸಂಗ್ರಹವನ್ನು ಇದೀಗ ಕಡ್ಡಾಯ ಮಾಡಲಾಗಿದೆ.

ಹೀಗಿದ್ದರೂ ಈ ಹಿಂದೆ ನಿರ್ಮಾಣವಾದ ಕಟ್ಟಡಗಳು, ಸರ್ಕಾರಿ ಭವನಗಳು ಎಷ್ಟರಮಟ್ಟಿಗೆ ಮಳೆಯ ನೀರನ್ನು ಹಿಡಿದಿಟ್ಟುಕೊಂಡು ಬಳಸಲು ಸಾಧ್ಯ ಎಂಬ ಬಗ್ಗೆ ಶೀಘ್ರವೇ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಿ, ಸಾಧ್ಯವಾದಷ್ಟು ಬೇಗ ಜಾರಿಗೆ ತಂದದ್ದೇ ಆದರೆ ನಾವು ಇಂಥ ಅವಘಡಗಳನ್ನು ತಪ್ಪಿಸಲು ಸಾಧ್ಯವಿದೆ. ಈ ದಿಸೆಯಲ್ಲಿ ನಮ್ಮ ಪ್ರಜೆಗಳು, ತಜ್ಞರು, ಆಡಳಿತಶಾಹಿ ಮತ್ತು ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇದೆಯೇ ಎಂಬ ಬಗ್ಗೆ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಇದು.

-ಬಸಪ್ಪ ಯ. ಬಂಗಾರಿ, ಬೆಂಗಳೂರು

ಕೆರೆ ತುಂಬಿಸುವ ಕೆಲಸವಾಗಲಿ

ಈ ಬಾರಿ ಮಳೆರಾಯನ ಕೃಪೆಯಿಂದ ಕಾವೇರಿಯ ಒಡಲು ಮೂರು ಬಾರಿ ಭರ್ತಿಯಾಗಿದೆ. 150 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಕೊಟ್ಟು ಆಗಿದೆ. ಇನ್ನು ನಮ್ಮ ಕೆರೆಗಳನ್ನು ತುಂಬಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಇದರಿಂದ ನಮ್ಮ ರೈತರು ಎರಡು ಫಸಲು ತೆಗೆದು, ಹಿಂದಿನ ವರ್ಷಗಳಲ್ಲಿ ಆದ ನಷ್ಟವನ್ನು ಸರಿದೂಗಿಸಿಕೊಳ್ಳಲು ಸಹಾಯವಾಗುತ್ತದೆ.

-ಜಿ.ಪಿ.ದಯಾನಂದ, ಬೆಂಗಳೂರು

ಕನ್ನಡದ ಪರ ಎಚ್ಚರಿಕೆಯ ಗಂಟೆ

‘ವಿಧಾನಸೌಧ, ವಿಕಾಸಸೌಧವನ್ನು ಕನ್ನಡದ ಅಸ್ಮಿತೆಯ ಕೇಂದ್ರಗಳನ್ನಾಗಿಸಿ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಸರ್ಕಾರವನ್ನು ಆಗ್ರಹಿಸಿರುವುದು (ಪ್ರ.ವಾ., ಅ. 17) ಸಮಯೋಚಿತ ವಾಗಿದೆ. ಇಂದು ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕನ್ನಡದ ಬಳಕೆಯನ್ನು ನೋಡಿದ ಯಾರಿಗಾದರೂ ಹೆಮ್ಮೆ ಎನಿಸುತ್ತದೆ. ಮಹದೇವ ಬಣಕಾರ ಅವರು 1967ರಲ್ಲಿ ಶಾಸಕರಾಗಿದ್ದಾಗಿನ ಸಂದರ್ಭದಲ್ಲಿ, ವಿಧಾನಸೌಧದಲ್ಲಿ ಕನ್ನಡದ ಬಳಕೆಯ ಬಗ್ಗೆ ಹೀಗೆ ಹೇಳಿದ್ದಾರೆ- ‘ವಿಧಾನಸಭೆಯ ಒಳಗೆ ಕಾರ್ಯಕಲಾಪಗಳೆಲ್ಲ ಇಂಗ್ಲಿಷ್ನಲ್ಲಿ ನಡೆಯುತ್ತಿ
ದ್ದವು. ಹೊರಗೆ ಜನಸಂಪರ್ಕದಲ್ಲಿ ತಮಿಳು, ತೆಲುಗು, ಮಲಯಾಳಿ ಮತ್ತು ಉರ್ದು ಭಾಷೆಗಳು ಬಳಕೆಯಲ್ಲಿದ್ದವು. ಅಲ್ಲಲ್ಲಿ ಕನ್ನಡ ಮಾತನಾಡುವವರಿದ್ದರೂ, ಅವರ ಭಾಷೆ ವಿಭಿನ್ನವಾಗಿರುತ್ತಿತ್ತು’.

ಇಂದು ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ. ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಕಾರ್ಯಕಲಾಪ
ಗಳೆಲ್ಲ ಬಹುತೇಕ ಕನ್ನಡದಲ್ಲಿ ನಡೆಯುತ್ತಿವೆ. ವಿಧಾನಸಭೆಯ ಹೊರಗೂ ಕನ್ನಡ ವಿಜೃಂಭಿಸುತ್ತಿದೆ. 1977ರಲ್ಲಿ ನಾನು ವಿಧಾನಸೌಧಕ್ಕೆ ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ, ಕಚೇರಿಯಲ್ಲಿ ದೂರವಾಣಿ ಕರೆಗಳನ್ನು ಸ್ವೀಕರಿಸುವುದರಿಂದ ಪ್ರಾರಂಭಿಸಿ, ಒಂದು ಸಾಂದರ್ಭಿಕ ರಜಾ ಅರ್ಜಿ ಬರೆಯುವವರೆಗೆ ಎಲ್ಲವೂ ಇಂಗ್ಲಿಷ್ನಲ್ಲಿಯೇ ನಡೆಯುತ್ತಿತ್ತು. ಇಂದು ಇಡೀ ವಿಧಾನಸೌಧ ಮತ್ತು ವಿಕಾಸಸೌಧ ಕನ್ನಡದಲ್ಲಿ ಅದ್ದಿ ತೆಗೆದಂತಿವೆ. ಆದರೂ ಪ್ರಾಧಿಕಾರದ ಅಧ್ಯಕ್ಷರು ಎಚ್ಚರಿಕೆಯ ಗಂಟೆ ಬಾರಿಸುತ್ತಿರುವುದು ಸಕಾಲಿಕವಾಗಿದೆ.

-ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.